ಬುಧವಾರ, ನವೆಂಬರ್ 13, 2019
17 °C

ಕ್ರಾಫ್ಟ್ ಇಂಡಿಯಾ: ಮಾರಾಟ ಮೇಳ

Published:
Updated:

ಗುಲ್ಬರ್ಗ: ನಗರದಲ್ಲಿ ನಡೆಯುತ್ತಿರುವ ವಸ್ತು ಪ್ರದರ್ಶನದಲ್ಲಿ ಕರಕುಶಲ ಹಾಗೂ ಕೈಮಗ್ಗದ ವಸ್ತುಗಳು, ನೂತನ ವಿನ್ಯಾಸದಿಂದ ಮಾಡಿದ ಗೃಹಬಳಕೆ ವಸ್ತುಗಳು, ವಿವಿಧ ರೀತಿಯ ಬಟ್ಟೆಗಳು ಜನರನ್ನು ಕೈಬೀಸಿ ಕರೆಯುತ್ತಿವೆ.ಇವುಗಳನ್ನು ಖರೀದಿಸಲು ವಿದ್ಯಾರ್ಥಿಗಳು, ಮಹಿಳೆಯರು, ಗೃಹಿಣಿಯರು, ಹುಡುಗರು ಮುಗಿಬಿದ್ದಿರುವುದು ಕಂಡು ಬರುತ್ತದೆ.ಕಲಾದರ್ಶನ ವಸ್ತುಪ್ರದರ್ಶನವು ಎಸ್.ಬಿ. ಟೆಂಪಲ್ ರಸ್ತೆಯ ಗುಡ್‌ಲಕ್ ಹೋಟೆಲ್ ಎದುರುಗಡೆ ಇರುವ ಖೂಬಾ ಮೈದಾನದಲ್ಲಿ ನಡೆಯುತ್ತಿದೆ. ಐದು ವರ್ಷಗಳಿಂದ ಬಹುತೇಕ ರಾಜ್ಯಗಳಲ್ಲಿ ಕಲಾದರ್ಶನ ನಡೆಸಿದ್ದು, ಗುಲ್ಬರ್ಗ ಜಿಲ್ಲೆಯಲ್ಲಿ ಮಾ.29ರಿಂದ ಏ. 21ರವರೆಗೆ ನಡೆಸಲಾಗುತ್ತಿದೆ ಎಂದು ಲಖನೌ ಮೂಲದ ಕ್ರಾಫ್ಟ್ ಇಂಡಿಯಾ ಆಯೋಜಕ ಪ್ರಮೋದ್ ತಿಳಿಸುತ್ತಾರೆ.ಸುಮಾರು 50ಕ್ಕೂ ಹೆಚ್ಚು ಮಳಿಗೆಗಳು ಇವೆ. ನಗರದ ಸಾರ್ವಜನಿಕರ ತಮಗೆ ಬೇಕಾದ ಮನೆ ಬಳಕೆ ವಸ್ತುಗಳನ್ನು ಮಕ್ಕಳು ಹಾಗೂ ಪೋಷಕರಿಗೆ ಆಕರ್ಷಿಸಲು ಈ ಮೇಳ ಬಹಳ ಉಪಯೋಗವಾಗಿದೆ.  ಕಳೆದ ಹದಿನೆಂಟು ದಿನಗಳಿಂದ ಇನ್ನೂ ಕೇವಲ 5 ದಿವಸಗಳ ಕಾಲ ಮಾತ್ರ ಇರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗುತ್ತಿದ್ದಾರೆ. ಈ ಮೇಳದಲ್ಲಿ ದೇಶದ ವಿವಿಧ ರಾಜ್ಯಗಳ ಕರಕುಶಲ ವಸ್ತುಗಳ ಪ್ರದರ್ಶನವು ನಡೆಯುತ್ತಿದೆ. ಸುಮಾರು ದಿನಕ್ಕೆ ಸಾವಿರದಿಂದ ಹದಿನೈದು ಸಾವಿರ ಜನ ಮೇಳಕ್ಕೆ ಬಂದು ಹೋಗಿದ್ದಾರೆ.ಕರ್ನಾಟಕ, ತಮಿಳುನಾಡು, ಕೇರಳ, ರಾಜಸ್ಥಾನ, ಪಂಜಾಬ್ ಮಹಾರಾಷ್ಟ್ರ, ಜಮ್ಮು ಕಾಶ್ಮೀರ, ಗುಜರಾತ್, ಬಿಹಾರ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳಿಂದ ಬಂದಿರುವ ಶಾಂತಿನಿಕೇತನ ಬ್ಯಾಗ್, ಜೈಪುರದ ಬಳೆಗಳು, ನಾಗಲ್ಯಾಂಡ್ ಡ್ರ್ಯಾ ಫ್ಲವರ್ಸ್‌, ಜೈಪುರದ ಹೊದಿಕೆ, ಪುಲಕಾರಿ ಸೂಟ್ಸ್, ಸೆಣಬಿನ ನಾರಿನ ಚಪ್ಪಲಿ, ದೆಹಲಿಯ ಬಟ್ಟೆ ಉತ್ಪನ್ನಗಳು, ಬಾಂಬೆ ಚೂಡಿದಾರ, ರಾಜಸ್ಥಾನದ ಫ್ಯಾನ್ಸಿ ಜ್ಯುವೆಲ್ಲರಿ, ಕಾರ್ಪೆಟ್ಸ್, ಲಕ್ನೋ ಗೃಹೋಪಯೋಗಿ ವಸ್ತುಗಳು,ಕಟ್ಟಿಂಗೆಯಿಂದ ಮಾಡಿದ ವಸ್ತುಗಳು, ಪಿಂಗಾಣಿ ವಸ್ತುಗಳು, ಜೈಪುರ ಡ್ರೆಸ್ ಮಟೀರಿಯಲ್ಸ್, ಟಿ.ವಿ.ಸ್ಟ್ಯಾಂಡ್, ಸಹರಾನಪುರ ಫರ್ನಿಚರ್ಸ್, ಲೂಧಿಯಾನ ಟಿ-ಶರ್ಟ್ಸ್, ಗ್ಲಾಸ್ ಮತ್ತಿತರ  ವಸ್ತುಗಳು ಇಲ್ಲಿ ದೊರೆಯುತ್ತವೆ. ಉಪ್ಪಿನ ಕಾಯಿಯಲ್ಲಿ ಲಾಲ ಮ್ಯಾಂಗೋ, ಪಂಜಾಬಿ, ಹೈದರಾಬಾದಿ ಉಪ್ಪಿನಕಾಯಿ ಹೀಗೆ ವಿವಿಧ ತರಹದ ವಸ್ತುಗಳು ಇಲ್ಲಿ ಸಿಗುತ್ತವೆ. ವಿವಿಧ ರೀತೀಯ ಪುಸ್ತಕಗಳು ಪ್ರದರ್ಶನ ಮತ್ತು ಮಾರಾಟವು ಇತ್ತು.ಯಾವಾಗಲು ಬೆಂಗಳೂರು ಮತ್ತು ಮೈಸೂರು ದೊಡ್ಡ ಪಟ್ಟಣಗಳಿಲ್ಲಿ ನಡೆಯುತ್ತಿದ್ದ ಕಲಾ ಮೇಳವು ಇದು ಎರಡನೆಯ ಬಾರಿಗೆ ಗುಲ್ಬರ್ಗದಲ್ಲಿ ನಡೆಯುತಿರುವುದು ಜನರಲ್ಲಿ ಸಂತಸ ಮೂಡಿಸಿದೆ.

ಪ್ರತಿಕ್ರಿಯಿಸಿ (+)