ಶುಕ್ರವಾರ, ನವೆಂಬರ್ 22, 2019
25 °C

ನಾಮಪತ್ರ: 174 ಸ್ವೀಕೃತ, 10 ತಿರಸ್ಕೃತ

Published:
Updated:

ಗುಲ್ಬರ್ಗ: ಜಿಲ್ಲೆಯ ಒಂಭತ್ತು ವಿಧಾನಸಭೆ ಮತಕ್ಷೇತ್ರಗಳಿಗೆ ವಿವಿಧ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ್ದ ಒಟ್ಟು ನಾಮಪತ್ರಗಳಲ್ಲಿ 174 ನಾಮಪತ್ರಗಳು ಸ್ವೀಕೃತವಾಗಿದ್ದು, 10 ನಾಮಪತ್ರಗಳನ್ನು ವಿವಿಧ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ.ಚಿತ್ತಾಪುರ ಮತಕ್ಷೇತ್ರಕ್ಕೆ ಬಿಎಸ್‌ಆರ್ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ್ದ ವೆಂಕಟೇಶ, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಮಹಾದೇವ ತಳವಾರ ಹಾಗೂ ಶರಣಪ್ಪ ಒಟ್ಟು ಮೂವರ ನಾಮಪತ್ರಗಳು ತಿರಸ್ಕೃತಗೊಂಡಿವೆ. ಒಟ್ಟು 12 ನಾಮಪತ್ರಗಳು ಸ್ವೀಕೃತವಾಗಿವೆ.ಗುಲ್ಬರ್ಗ ದಕ್ಷಿಣಕ್ಕೆ ಸಮಾಜವಾದಿ ಪಕ್ಷದಿಂದ ಸ್ಪರ್ಧೆ ಬಯಸಿದ್ದ ಶೀತಲ ಹೀರಾಪುರ ಹಾಗೂ ಪಕ್ಷೇತರ ಅಭ್ಯರ್ಥಿ ಮೊಹಮ್ಮದ್ ಗಾಜಿಬ್ ಪಾಶಾ ನಾಮಪತ್ರಗಳು ತಿರಸ್ಕೃತವಾಗಿವೆ. ಗುಲ್ಬರ್ಗ ಉತ್ತರ, ಆಳಂದ, ಸೇಡಂ, ಜೇವರ್ಗಿ ಹಾಗೂ ಚಿಂಚೋಳಿ ಮತಕ್ಷೇತ್ರದಲ್ಲಿ ತಲಾ ಒಂದೊಂದು ನಾಮಪತ್ರ ತಿರಸ್ಕೃತಗೊಂಡಿವೆ. ಇದರೊಂದಿಗೆ ಗುಲ್ಬರ್ಗ ದಕ್ಷಿಣದಲ್ಲಿ 34, ಗುಲ್ಬರ್ಗ ಉತ್ತರದಲ್ಲಿ 18, ಚಿಂಚೋಳಿ 16, ಜೇವರ್ಗಿ 29, ಸೇಡಂ 14, ಅಫಜಲಪುರ 18, ಗುಲ್ಬರ್ಗ ಗ್ರಾಮೀಣದಲ್ಲಿ 20 ಹಾಗೂ ಆಳಂದ 13 ನಾಮಪತ್ರಗಳು ಸ್ವೀಕೃತವಾಗಿವೆ.ನಾಮಪತ್ರ ಹಿಂಪಡೆಯಲು ಏ. 20 ಕೊನೆಯ ದಿನವಾಗಿದ್ದು, 20ರ ಸಂಜೆ ವೇಳೆಗೆ ಕಣದಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ದೊರೆಯಲಿದೆ.

ಪ್ರತಿಕ್ರಿಯಿಸಿ (+)