ಮಂಗಳವಾರ, ನವೆಂಬರ್ 12, 2019
27 °C

ಗುಲ್ಬರ್ಗ: ಬಾಲಕನ ಪಾಲಕರ ಪತ್ತೆಗೆ ಮನವಿ

Published:
Updated:

ಗುಲ್ಬರ್ಗ: ನಗರ ರೈಲು ನಿಲ್ದಾಣದ ಬಳಿ ಮಾರ್ಚ್ 30ರಂದು ನಾಲ್ಕು ವರ್ಷದ ಗಂಡು ಮಗು ಪತ್ತೆಯಾಗಿದ್ದು, ನಗರದ ಅಮೂಲ್ಯ ಶಿಶುಗೃಹದಲ್ಲಿ ದಾಖಲಿಸಲಾಗಿದೆ. ಈ ಮಗುವು ಕಪ್ಪು ಬಣ್ಣ ಹೊಂದಿದ್ದು, ಪೋಲಿಯೋಗೆ ತುತ್ತಾಗಿದೆ.ಈತನ ಪಾಲಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹ ಕೇಂದ್ರಕ್ಕೆ 60 ದಿನದೊಳಗೆ ಸೂಕ್ತ ದಾಖಲಾತಿಗಳನ್ನು ಪ್ರಸ್ತುತಪಡಿಸಿ ಮಗುವನ್ನು ಪಡೆದುಕೊಂಡು ಹೋಗುವಂತೆ ಶಿಶುಗೃಹದ ಅಧೀಕ್ಷಕರು ಕೋರಿದ್ದಾರೆ. ಬಾರದೇ ಇದ್ದಲ್ಲಿ ಮಗುವಿನ ದತ್ತು ಪ್ರಕ್ರಿಯೆ ಕಾನೂನು ಪ್ರಕಾರ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ    ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)