ಗುರುವಾರ , ನವೆಂಬರ್ 21, 2019
21 °C

`ತಾವೇ ಚೂರಿ ಹಾಕಿಕೊಂಡ ನಮೋಶಿ'

Published:
Updated:

ಗುಲ್ಬರ್ಗ: ದಿ. ಚಂದ್ರಶೇಖರ್ ಪಾಟೀಲ ರೇವೂರ ಅವರು ಗುಲ್ಬರ್ಗದಲ್ಲಿ ಬಿಜೆಪಿ ಬೆಳೆಸುವ ಮೂಲಕ ಕೊಡುಗೆ ನೀಡಿದ್ದಾರೆ. ಉಪಚುನಾವಣೆ ಸಂದರ್ಭದಲ್ಲಿ ಕೆಲವರ ಚಿತಾವಣೆಯಿಂದಾಗಿ ರೇವೂರ ಕುಟುಂಬಕ್ಕೆ ಅನ್ಯಾಯವಾಗಿತ್ತು. ಇದೀಗ ಸರಿಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸೋಮವಾರ ಇಲ್ಲಿ ಹೇಳಿದರು.ನಗರದ ಸಂಗಮೇಶ್ವರ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಶಶೀಲ್ ನಮೋಶಿ ಮಧ್ಯಸ್ಥಿಕೆಯಿಂದಾಗಿ ಉಪಚುನಾವಣೆಯಲ್ಲಿ ರೇವೂರ ಕುಟುಂಬಕ್ಕೆ ಟಿಕೆಟ್ ಕೈ ತಪ್ಪಿತ್ತು. ನಮೋಶಿ ಅವರಿಗೆ ಯಾರೂ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ, ತಮ್ಮ ಬೆನ್ನಿಗೆ ತಾವೇ ಚೂರಿ ಹಾಕಿಕೊಂಡಿದ್ದಾರೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಹಾಗೂ ಡಾ. ನಂಜುಂಡಪ್ಪ ವರದಿ ಅನುಷ್ಠಾನದ ಅಧ್ಯಕ್ಷ ಸ್ಥಾನಗಳನ್ನು ಬಿಜೆಪಿ ಕೊಟ್ಟಿದ್ದರೂ, ನಮೋಶಿ ಅವರು ಪಕ್ಷಕ್ಕೆ ದ್ರೋಹ ಮಾಡಿದರು ಎಂದು ಆರೋಪಿಸಿದರು. ವ್ಯಕ್ತಿಗಿಂತ ಪಕ್ಷ ಮುಖ್ಯ ಎನ್ನುವ ಸಿದ್ಧಾಂತಕ್ಕೆ ಬದ್ಧವಾಗಿ ರೇವೂರ ಕುಟುಂಬದವರಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದರು.ಬಿಜೆಪಿಗೆ ಸೇರ್ಪಡೆ: ಶಾಸಕಿ ಅರುಣಾ ಸಿ. ಪಾಟೀಲ, ಅಶೋಕ ನಾಗನಳ್ಳಿ ಅವರು ಜೆಡಿಎಸ್ ತೊರೆದು ಮುಖ್ಯಮಂತ್ರಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ಪ್ರತಿಕ್ರಿಯಿಸಿ (+)