ಶುಕ್ರವಾರ, ನವೆಂಬರ್ 15, 2019
22 °C

ಬೀದರ್: ಭುವಿಗೆ ತಂಪೆರೆದ ಮಳೆರಾಯ

Published:
Updated:
ಬೀದರ್: ಭುವಿಗೆ ತಂಪೆರೆದ ಮಳೆರಾಯ

ಬೀದರ್: ಬಿಸಿಲಿನಿಂದ ಕಾದು ಕೆಂಡವಾಗಿರುವ ಭುವಿಗೆ ಗುರುವಾರ ಸುರಿದ ಮಳೆ ತಂಪೆರೆಯಿತು. ಮಧ್ಯಾಹ್ನ ಸುಮಾರು ಎರಡು ಗಂಟೆ ಕಾಲ ಧಾರಾಕಾರ ಮತ್ತು ಜಿಟಿಜಿಟಿಯಾಗಿ ಸುರಿದ ಮಳೆ ತಣ್ಣನೆಯ ವಾತಾವರಣ ಸೃಷ್ಟಿಸಿತು. ಇದರಿಂದಾಗಿ ಬಿಸಿಲ ಬೇಗೆಯಿಂದ ಬಸವಳಿದಿರುವ ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಮಕ್ಕಳು ಮರಿಗಳು ಮಳೆಯಲ್ಲಿಯೇ ಆಟವಾಡಿ ಆನಂದಿಸಿದರು. ಬೈಕ್ ಸವಾರರು ಹಾಗೂ ಪಾದಚಾರಿಗಳು ಮಳೆಯಲ್ಲಿ ನೆನೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಗುಡುಗು ಮಿಂಚಿನೊಂದಿಗೆ ಮಳೆ ಸುರಿದರೂ ಯಾವುದೇ ಅನಾಹುತ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಧಾರಾಕಾರ ಮಳೆಯಿಂದಾಗಿ ನಗರದ ಬಸವೇಶ್ವರ ವೃತ್ತದಿಂದ ಬೊಮ್ಮಗೊಂಡೇಶ್ವರ ವೃತ್ತದ ಕಡೆಗೆ ಹೋಗುವ ರಸ್ತೆಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಿತ್ತು. ವಾಹನ  ಸವಾರರು ಕೆಲಹೊತ್ತು ಸಮಸ್ಯೆ ಎದುರಿಸಬೇಕಾಯಿತು.

ಪ್ರತಿಕ್ರಿಯಿಸಿ (+)