ಭಾನುವಾರ, ಏಪ್ರಿಲ್ 11, 2021
33 °C

9ರಂದು ಜೇವರ್ಗಿಯಲ್ಲಿ ಅಹಿಂದ ಜಾಗೃತಿ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತರ ಸಂಘಟನೆಗಾಗಿ ಏಪ್ರಿಲ್ 9ರಂದು ಜೇವರ್ಗಿ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಅಹಿಂದ ಸಮುದಾಯದ ‘ಜಾಗೃತ ಸಮಾವೇಶ’ ನಡೆಯಲಿದೆ.ಬೆಳಿಗ್ಗೆ 11.30ಕ್ಕೆ ಪ್ರವಾಸಿ ಮಂದಿರದಿಂದ ಮೆರವಣಿಗೆ ಆರಂಭಿಸಿ, ಮಧ್ಯಾಹ್ನ 12.30ಕ್ಕೆ ಬಹಿರಂಗ ಸಭೆ ಸೇರಲಿದೆ. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ ಉದ್ಘಾಟಿಸುವರು. ಅಹಿಂದ ರಾಜ್ಯಾಧ್ಯಕ್ಷ ಕೆ.ಮುಕಡಪ್ಪಾ ಅಧ್ಯಕ್ಷತೆ ವಹಿಸುವರು. ಟೋಕ್ರೆ ಕೋಲಿ (ಕಬ್ಬಲಿಗ) ಸಮಾಜದ ರಾಜ್ಯಾಧ್ಯಕ್ಷ ವಿಠ್ಠಲ ಹೇರೂರ ಧ್ವಜಾರೋಹಣ ಮಾಡುವರು. ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಎನ್.ವೆಂಕಟೇಶ, ಅಹಿಂದ ಮುಖಂಡ ಬೈಲಪ್ಪ ನೇದಲಗಿ, ಮಾಜಿ ಶಾಸಕ ಎ.ಕೆ.ಸುಬ್ಬಯ್ಯ, ಶಾಸಕ ವರ್ತೂರ ಪ್ರಕಾಶ, ಕಾಡಾ ಅಧ್ಯಕ್ಷ ಗಿರೀಶ ಮಟ್ಟಣನವರ, ಸರ್ವಜನ ಸಮಾಜ ವೇದಿಕೆಯ ಬಿ. ಗೋಪಾಲ ಮತ್ತಿತರರು ಆಗಮಿಸುವರು ಎಂದು ಜಿ.ಪಂ. ಸದಸ್ಯೆ ಶೋಭಾಬಾಣಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಇದೊಂದು ಪಕ್ಷಾತೀತ ಸಂಘಟನಾ ಸಮಾವೇಶ. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಸಮುದಾಯಗಳನ್ನು ರಾಜಕೀಯವಾಗಿ ಗಟ್ಟಿಗೊಳಿಸಲು ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಹೀಗಾಗಿ ರಾಜಕೀಯ ಪಕ್ಷಗಳ ಭೇದ ಹೊರತುಪಡಿಸಿ ನಾವು ಒಂದಾಗಿದ್ದೇವೆ. ಆ ಮೂಲಕ ಸಂಘಟನೆ ಬಲಪಡಿಸುತ್ತಿದ್ದೇವೆ ಎಂದು ಅವರು ಹೇಳಿದರು. ಬೈಲಪ್ಪ ನೇಲೋಗಿ, ಶಿವಶರಣಪ್ಪ ಜಂಬೇದಾರ, ಪುಂಡಲೀಕ ಗಾಯಕವಾಡ, ಭೂತಾಳಿ ದಾವಜಿ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.