ಭಾನುವಾರ, ಮೇ 9, 2021
27 °C

ಉಡಚಣ: ಬಾಲಕಿ ವಿವಾಹಕ್ಕೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಲೆಂಗಟಿಯ ಮಹಾದೇವಲಿಂಗ ದೇವಾಲಯದಲ್ಲಿ ಮೇ 29ರಂದು ನಡೆಯಲಿದ್ದ ಅಫಜಪುರ ತಾಲ್ಲೂಕಿನ ಉಡಚಣದ 8ನೇ ತರಗತಿಯ ಬಾಲಕಿಯ ವಿವಾಹವನ್ನು ತಡೆಯುವಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ಬಾಲಕಿಯ ಮದುವೆ ಬಗ್ಗೆ ದೊರೆತ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ  ನಿರ್ದೇಶಕಿ ರತ್ಮಾಕಲಂದಾನಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ರವಾನಿಸಿದ್ದರು. ರಕ್ಷಣಾಧಿಕಾರಿ ಎನ್. ನಾರಾಯಣಸ್ವಾಮಿ ಮಾರ್ಗದರ್ಶನದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತರ, ಅಫಜಲಪುರ ಸಿಡಿಪಿಒ ವೀರೇಂದ್ರ ನಾವದಗಿ, ಮೇಲ್ವಿಚಾರಕಿ ಗುರುಬಾಯಿ ಮುದ್ದೇಬಿಹಾಳ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಬಾಲಕಿಯ ಮನೆಗೆ ಭೇಟಿ ನೀಡಿ ಬಾಲ್ಯ ವಿವಾಹದ ದುಷ್ಪರಿಣಾಮದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು.ಬಳಿಕ ಪೋಷಕರಿಂದ ಬಾಲ್ಯವಿವಾಹ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆಯಿಸಿಕೊಂಡರು. ಮದುವೆ ನಿಗದಿಯಾಗಿದ್ದ ಮೇ 29 ರಂದು ಮತ್ತೆ ಭೇಟಿ ನೀಡಿದ ಆಳಂದ ಸಿಡಿಪಿಒ ಅಶೋಕ ರಾಜನ್ ಹಾಗೂ ಪರಿವೀಕ್ಷಣಾಧಿಕಾರಿ ಕಲ್ಯಾಣ ಮಂಟಪದಲ್ಲಿ ವಿಚಾರಿಸಿದಾಗ ಮದುವೆ ರದ್ದಾಗಿರುವುದು ಖಚಿತಪಟ್ಟಿದೆ. ಬಾಲ್ಯವಿವಾಹ ತಡೆಯುವಲ್ಲಿ ಘಟಕವು ಯಶಸ್ವಿಯಾಗಿದೆ.ಬಾಲ್ಯ ವಿವಾಹದ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ದೂರವಾಣಿ 08472-243219 ಅಥವಾ ಮೊಬೈಲ್: 9243963219 ಸಂಪರ್ಕಿಸಲು ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.