ಗುರುವಾರ , ಮೇ 13, 2021
17 °C
ಪ್ರಜಾವಾಣಿ ಫಲಶ್ರುತಿ

ಭಿತ್ತಿಪತ್ರ ಹಾವಳಿ: ಎಚ್ಚೆತ್ತುಕೊಂಡ ಪಾಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಭಿತ್ತಿಪತ್ರ ಹಾವಳಿಯಿಂದ ನಗರದ ವೃತ್ತಗಳು ಹಾಗೂ ರಸ್ತೆ ವಿಭಜಕಗಳು ವಿರೂಪಗೊಳ್ಳುತ್ತಿರುವ ಬಗ್ಗೆ `ಪ್ರಜಾವಾಣಿ' ಜೂನ್ 3ರ ಸಂಚಿಕೆಯ `ನಗರ ಸಂಚಾರ' ದಲ್ಲಿ ಗಮನ ಸೆಳೆದಿತ್ತು.ಈ ವರದಿಯಿಂದ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ ಅಧಿಕಾರಿಗಳು ಭಿತ್ತಿಪತ್ರ ತೆರೆವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ವೃತ್ತ ಹಾಗೂ ಪ್ರಮುಖ ರಸ್ತೆಗಳಲ್ಲಿನ ವಿಭಜಕಗಳಿಗೆ ಅಂಟಿಸಿದ್ದ ಭಿತ್ತಿಪತ್ರಗಳನ್ನು ಮಂಗಳವಾರ ಮಧ್ಯಾಹ್ನದಿಂದಲೇ ಪಾಲಿಕೆ ಸಿಬ್ಬಂದಿ ಕಿತ್ತುಹಾಕಿ ಸ್ವಚ್ಛಗೊಳಿಸುವ ಕೆಲಸ ಆರಂಭಿಸಿದ್ದಾರೆ.ಧೂಳು ಹಾಗೂ ಮರಗಳ ಕೊರತೆಯಿಂದ ಸೌಂದರ್ಯ ಕುಂಠಿತವಾಗಿರುವ ಗುಲ್ಬರ್ಗದಲ್ಲಿ ಭಿತ್ತಿಪತ್ರಗಳು ಕನಿಷ್ಠ ಸೌಂದರ್ಯವನ್ನು ಹಾಳು ಮಾಡುತ್ತಿವೆ ಎಂದು `ಪ್ರಜಾವಾಣಿ'ಯಲ್ಲಿ ಪ್ರಕಟಗೊಂಡ ವರದಿಯಲ್ಲಿ ವಿವಿಧ ಗಣ್ಯರು ಅಭಿಪ್ರಾಯ ವ್ಯಕ್ತಪಿಡಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.