ಮಂಗಳವಾರ, ಮೇ 11, 2021
25 °C

`ವೃತ್ತಿಪರತೆ ಮೈಗೂಡಿಸಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಪದವಿ ಓದಿದ ಮಾತ್ರಕ್ಕೆ ಯಾರೂ ಉದ್ಯೋಗ ನೀಡುವುದಿಲ್ಲ. ಇದರೊಂದಿಗೆ ಬೇರೆಬೇರೆ ಕುಶಲತೆ ಬೆಳೆಸಿಕೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ `ಗುಲ್ಬರ್ಗ ಜಿಲ್ಲಾಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭ'ದಲ್ಲಿ ಯುವ ವಿಜ್ಞಾನಿಗಳನ್ನು ಸನ್ಮಾನಿಸಿ ಮಾತನಾಡಿದರು.ಪದವಿ, ಎಂಜಿನಿಯರಿಂಗ್ ಓದಿದ ಅನೇಕರು ನಿರುದ್ಯೋಗಿಗಳಾಗಿ ಉಳಿದಿದ್ದಾರೆ. ಇನ್ನೊಂದು ಕಡೆ ಹುದ್ದೆಗಳು ಖಾಲಿ ಇವೆ. ಓದುವ ಸಲುವಾಗಿ ಓದಿದರೆ ಸಾಕಾಗುವುದಿಲ್ಲ. ವಿದ್ಯಾಭ್ಯಾಸದೊಂದಿಗೆ ವೃತ್ತಿಪರತೆ ಬೆಳೆಸಿಕೊಂಡರೆ ಅವಕಾಶ ಹುಡುಕಿಕೊಂಡು ಬರುತ್ತವೆ ಎಂದು ಅಭಿಪ್ರಾಯಪಟ್ಟರು.ಪ್ರತಿವರ್ಷ ದೇಶದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಮೌಲ್ಯ ಕುಸಿಯುತ್ತಿದೆ. ಕೃಷಿ ಸೇರಿದಂತೆ ಹಲವು ಕ್ಷೇತ್ರಗಳ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸಬೇಕಿದೆ. ಮೂಲವಿಜ್ಞಾನಕ್ಕೆ ಒತ್ತು ನೀಡಲು ಸರ್ಕಾರ ವಿದ್ಯಾರ್ಥಿಗಳಿಗೆ ಹಲವು ಸೌಲಭ್ಯ ನೀಡುತ್ತಿದ್ದು, ಇದರ ಸದುಪಯೋಗ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.ಯುವ ವಿಜ್ಞಾನಿಗಳು: ಸೇಂಟ್ ಜೋಸೆಫ್ ಶಾಲೆಯ ಲಕ್ಷ್ಮೀ ಎಂ. ಮರಗೋಳ ಅವರಿಗೆ ಪ್ರಥಮ ಬಹುಮಾನ ರೂ 3,000 ನಗದು, ಎಸ್‌ಬಿಆರ್ ಶಾಲೆಯ ಪವನ ಜಿ. ಮದರಗಾಂವ ಅವರಿಗೆ ದ್ವಿತೀಯ ಬಹುಮಾನ ರೂ 2,000 ನಗದು ಹಾಗೂ ಶ್ರೀಗುರು ಪಿಯು ಕಾಲೇಜಿನ ದಿವಾಕರ್ ಆಲ್ಮಡ್ ಅವರಿಗೆ ತೃತೀಯ ಬಹುಮಾನ ರೂ 1 ಸಾವಿರ ನಗದು ಹಾಗೂ ಎಲ್ಲರಿಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ರಾಜ್ಯ ಘಟಕದ ಖಜಾಂಚಿ ಗಿರೀಶ ಕಡ್ಲೇವಾಡ, ಡಿಡಿಪಿಐ ಟಿ.ಜಯರಾಮು ಮಾತನಾಡಿದರು.

ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಎಸ್.ಎಸ್.ಗುಬ್ಬಿ, ಶ್ರಿಶೈಲ ಘೂಳಿ, ಬಿ.ಕೆ.ಚಳಕೇರಿ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.