ಗುರುವಾರ , ಮೇ 13, 2021
22 °C

`ಜಿಲ್ಲೆ: ಶೇ 4 ರಷ್ಟು ಅರಣ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಜಿಲ್ಲೆ: ಶೇ 4 ರಷ್ಟು ಅರಣ್ಯ'

ಗುಲ್ಬರ್ಗ: ಉತ್ತಮ ವಾತಾವರಣಕ್ಕೆ ಒಟ್ಟು ಭೂ ಪ್ರದೇಶದಲ್ಲಿ ಶೇ 33ರಷ್ಟು ಅರಣ್ಯ ಇರಬೇಕು. ಆದರೆ ರಾಜ್ಯದಲ್ಲಿ ಶೇ 21ರಷ್ಟು ಅರಣ್ಯವಿದೆ. ಈ ಪ್ರಮಾಣ ಹೆಚ್ಚಿಸಲು ರೈತರು ತಮ್ಮ ಕೃಷಿ ಭೂಮಿಯಲ್ಲಿ ಮರಗಳನ್ನು ಬೆಳೆಸಬೇಕು ಎಂದು ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಎ.ಸದಾಶಿವಯ್ಯ ಸಲಹೆ ನೀಡಿದರು.ಜಿಲ್ಲಾ ಅರಣ್ಯ ಇಲಾಖೆ ಸೋಮವಾರ ಏರ್ಪಡಿಸಿದ್ದ ಒಂದು ದಿನದ `ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ' ಕಾರ್ಯಾಗಾರದಲ್ಲಿ ಮಾತನಾಡಿದರು.ಗುಲ್ಬರ್ಗದಂತಹ ಹಿಂದುಳಿದ ಪ್ರದೇಶದಲ್ಲಿ ರೈತರು ಲಾಭ ಕೊಡುವ ಮರಗಳನ್ನು ಬೆಳೆಸುವುದು ಉತ್ತಮ. ಒಬ್ಬ ರೈತನ ಮನೆ ಎದುರು ಕನಿಷ್ಠ ಕರಿಬೇವು, ಪಪ್ಪಾಯಿ, ನುಗ್ಗೆಕಾಯಿ ಹಾಗೂ ನೆಲ್ಲಿಕಾಯಿಯ ಒಂದೊಂದು ಮರ ಇರಬೇಕು. ಇದರಿಂದ ಉತ್ತಮ ಆರೋಗ್ಯ ಮತ್ತು ಲಾಭ ಹೊಂದಬಹುದು. ಪರೋಕ್ಷವಾಗಿ ಪರಿಸರ ಉತ್ತಮಗೊಳಿಸಬಹುದು ಎಂದು                      ತಿಳಿಸಿದರು.ರಾಜ್ಯದಲ್ಲಿ ಈ ವರ್ಷ 2 ಕೋಟಿ ಸಸಿ ನೆಡುವ ಗುರಿ ಇಟ್ಟುಕೊಳ್ಳಲಾಗಿದ್ದು, ರೈತರು ಬೆಳೆಸುವ ಮರಗಳಿಗೆ ಪ್ರೋತ್ಸಾಹ ಧನ ಕೂಡ ನೀಡಲಾಗುತ್ತದೆ.ರೈತರು ಹೆಚ್ಚು ಮರಗಳನ್ನು ಬೆಳೆಸಿ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು. ಸಸಿ ನೆಡುವುದು ಮುಖ್ಯವಲ್ಲ, ಅದನ್ನು ಸಂರಕ್ಷಿಸಿ ಬೆಳೆಸುವುದು ಮುಖ್ಯ ಎಂದರು.ಉದ್ಘಾಟನೆ ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ರಾಧಾದೇವಿ ಮಾತನಾಡಿ, `ಗುಲ್ಬರ್ಗ ಜಿಲ್ಲೆಯಲ್ಲಿ ಶೇ 4ರಷ್ಟು ಮಾತ್ರ ಅರಣ್ಯವಿದೆ. ರೈತರೆಲ್ಲ ಸಹಕರಿಸಿದರೆ ಮಾತ್ರ ಅರಣ್ಯ ಹೆಚ್ಚಾಗಲು ಸಾಧ್ಯವಿದೆ.ರೈತರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಲಾಭ ತರುವ ಸಸಿಗಳನ್ನು ವಿತರಿಸಲಾಗುತ್ತಿದೆ. ಇದಕ್ಕಾಗಿ ರೈತ ಸಂಘವೊಂದನ್ನು ಮಾಡಲಾಗಿದೆ. ಅಲ್ಲದೆ ಸರ್ಕಾರೇತರ ಸಂಸ್ಥೆಗಳ ಮೂಲಕವೂ ಮರ ನೆಡಲು ಜಾಗೃತಿ ಮೂಡಿಸಲಾಗುತ್ತಿದೆ' ಎಂದು ತಿಳಿಸಿದರು.ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಬಿ.ಶಿವನಗೌಡ, ಮುಖ್ಯ ಅರಣ್ಯ ಸಂರಕ್ಷಣಾಧಿಖಾರಿ ಎನ್.ರಾಜಶೇಖರ್, ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಎನ್. ಸಂಪಂಗಿ ಮಾತನಾಡಿದರು.ಎಚ್.ಕೆ. ಶ್ರೀನಿವಾಸನ್ ಸ್ವಾಗತಿಸಿದರು. ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ ಪನ್ವಾರ್ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.