ಬುಧವಾರ, ಮೇ 12, 2021
18 °C

ಅತಿಥಿ ಉಪನ್ಯಾಸಕರ ಕಾಯಂಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು ಮತ್ತು ವಿವಿಧ ಇಲಾಖೆಗಳಲ್ಲಿ  ಖಾಲಿ ಇರುವ ಹುದ್ದೆಗಳನ್ನು 371(ಜೆ) ಕಲಂ ಅನ್ವಯ ಶೀಘ್ರ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರಿಗೆ ಪಂಚ  ಜಿಲ್ಲೆ ಜನಪರ ಹೋರಾಟ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಮನವಿಪತ್ರ ಸಲ್ಲಿಸಿದರು.ಸರ್ಕಾರಿ ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಅರ್ಹ, ಯೋಗ್ಯ, ಅನುಭವಿ ಅತಿಥಿ ಶಿಕ್ಷಕ ಮತ್ತು ಉಪನ್ಯಾಸಕರು ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕಾಯಂ ಗೊಳಿಸಬೇಕು. 371(ಜೆ) ಕಲಂ ಅನ್ವಯ ಶೀಘ್ರವಾಗಿ ನೇಮಕ ಮಾಡಿಕೊಳ್ಳಬೇಕು.ಅತಿಥಿ ಉಪನ್ಯಾಸಕರ ಮಾಸಿಕ ವೇತನ ಹೆಚ್ಚಿಸಬೇಕು ಎಂದು ಪಂಚ ಜಿಲ್ಲೆ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಮನವಿ   ಮಾಡಿದ್ದಾರೆ.ವಿಭಾಗೀಯ ಉಪಾಧ್ಯಕ್ಷ ಡಾ.ಎಸ್.ಮಹೇಶ ಪಾಟೀಲ, ರವಿ ಹೂಗಾರ, ಅಶೋಕ  ಜೇರಟಗಿ, ದೇವಿಂದ್ರ ಚಿಗರಳ್ಳಿ, ನಾಗರಾಜ ಆಲೂರ, ದೇವು ಬಿಳ್ಳಾರ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.