ಮಂಗಳವಾರ, ಮೇ 11, 2021
27 °C

ಕಲ್ಲಹಿಪ್ಪರಗಾ: ದೌರ್ಜನ್ಯ ಖಂಡಿಸಿ ಕೂಲಿಕಾರರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಗಿ: ವಲಯದ ಕಲ್ಲಹಿಪ್ಪರಗಾ ಗ್ರಾಮದಲ್ಲಿ ಈಚೆಗೆ ಬಡ ದಲಿತರ ಮೇಲೆ ನಡೆದ ದೌರ್ಜನ್ಯ ಖಂಡಿಸಿ, ಆರೋಪಿ ಬಂಧಿನಕ್ಕೆ ಹಾಗೂ ದಲಿತ ಕುಟುಂಬಗಳ ರಕ್ಷಣೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಜಿಲ್ಲಾ ಸಂಘ ಇಲ್ಲಿನ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್‌ರ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿತು.`ಕಲ್ಲಹಿಪ್ಪರಗಾ ಗ್ರಾಮದ ಮುಸ್ಲಿಂ ಜನಾಂಗದ ಕೆಲವರು ಸೇರಿಕೊಂಡು ಬಡ ದಲಿತರ ಮೇಲೆ ಕೊಡಲಿ, ಚಾಕು, ಬಡಿಗೆಗಳಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದವರು ಕೈಕಾಲು ಮುರಿಸಿಕೊಂಡು ಒದ್ದಾಡುತ್ತಿದ್ದರೂ ಅವರ ಗೋಳು ಕೇಳುವವರು ಇಲ್ಲದಾಗಿದೆ' ಎಂದು ಪ್ರತಿಭಟನಾಕಾರರು ದೂರಿದರು.`ಈ ಕುರಿತು ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಅಲ್ಲದೆ ಆರೋಪಿಗಳಿಂದ ದೂರು ಪಡೆದುಕೊಂಡ ಪೊಲೀಸರು ದೌರ್ಜನ್ಯಕ್ಕೊಳಗಾದ ದಲಿತರ ಮೇಲೂ ಪ್ರಕರಣ ದಾಖಲಿಸಿಕೊಂಡಿದ್ದಾರೆ' ಎಂದು ಪ್ರತಿಭಟನಾಕಾರರು ಆಪಾದಿಸಿದರು.ಇಲ್ಲಿನ ಪೊಲೀಸ್ ಠಾಣೆಯ ಪೇದೆಯೊಬ್ಬದಿಂದ ಆರೋಪಿಗಳಿಗೆ ರಕ್ಷಣೆ ಸಿಗುತ್ತಿದೆ. ಕೂಡಲೇ ಈ  ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜತೆಗೆ ಕಲ್ಲಹಿಪ್ಪರಗಾ ಗ್ರಾಮದ ಕಳ್ಳತನದ ಆರೋಪಿಯೊಬ್ಬನಿಗೆ ಪೊಲೀಸರು ರಕ್ಷಣೆ ನೀಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮನವಿ ಪತ್ರ ಸ್ವೀಕರಿಸಿದ ಸಿಪಿಐ ವೀರೇಶ ಕರಡಿಗುಡ್ಡ , ಕಲ್ಲಹಿಪ್ಪರಗಾ ಗ್ರಾಮದಲ್ಲಿ ಅಂಥದೇನು ದೊಡ್ಡ ಘಟನೆ ನಡೆದಿಲ್ಲ. ಅಲ್ಲಿ ಶಾಂತಿಯಿದೆ. ನಮ್ಮ ಇಲಾಖೆ ಕೆಲಸ ಮಾಡದೆ ಎರಡೂ ಜನಾಂಗದ ದೂರಿನನ್ವಯ ಕಾನೂನು ಬದ್ಧವಾಗಿ ಪ್ರಕರಣದ ತನಿಖೆ ನಡೆಸುತ್ತಿದೆ. ಈಗಾಗಲೇ ಕೆಲವರನ್ನು ಬಂಧಿಸಿ ಇನ್ನುಳಿದವರ ಪತ್ತೆಗೆ ಜಾಲ ಬೀಸಲಾಗಿದೆ. ಕಾಳಗಿ ಪಿಎಸ್‌ಐ ಜಿ.ಎಸ್.ಬಿರಾದಾರ, ಮಾಡಬೂಳ ಪಿಎಸ್‌ಐ ಮಾನಯ್ಯ ದೊರೆ ಉಪಸ್ಥಿತರಿದ್ದರು.ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಕಾರ್ಯದರ್ಶಿ ಅಶೋಕ ಮ್ಯಾಗೇರಿ, ಸಹ ಕಾರ್ಯದರ್ಶಿ ಮಲ್ಲಮ್ಮ ಕೋಡ್ಲಿ, ಚಿತ್ತಾಪುರ ತಾಲ್ಲೂಕು ಅಧ್ಯಕ್ಷ ಅಶೋಕ ಕಲಶೆಟ್ಟಿ, ಚಿಂಚೋಳಿ ತಾಲ್ಲೂಕು ಅಧ್ಯಕ್ಷ ಗೋಪಾಲ ಭಜಂತ್ರಿ ಕಾರ್ಯದರ್ಶಿ ಕುಪೇಂದ್ರ ಐನೋಳ್ಳಿ, ಹಣಮಯ್ಯ ಜಂತಿ, ದೇವಾ ಗುಂಡಮಿ, ರೇವಯ್ಯ ಸಾಲಿ, ರಾಯಪ್ಪ ಮುಕರಂಬಿ, ಅಂಬಾದಾಸ ಸೇಗಾಂವಕರ್ ಇತರರು ಪ್ರತಿಭಟನೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.