`ಮಹಾಲನೋಬಿಸ್ ಸಂಖ್ಯಾಶಾಸ್ತ್ರ ಅಳವಡಿಸಿ'

ಮಂಗಳವಾರ, ಜೂಲೈ 23, 2019
26 °C

`ಮಹಾಲನೋಬಿಸ್ ಸಂಖ್ಯಾಶಾಸ್ತ್ರ ಅಳವಡಿಸಿ'

Published:
Updated:

ಗುಲ್ಬರ್ಗ: ರಾಷ್ಟ್ರದ ಪ್ರಗತಿಯಾಗಬೇಕಾದರೆ ಸಾಂಖಿಕ ತಜ್ಞ ಪಿ.ಸಿ.ಮಹಾಲನೋಬಿಸ್ ಅವರು ಪ್ರತಿಪಾದಿಸಿದ ಸಂಖ್ಯಾಶಾಸ್ತ್ರ ಅಳವಡಿಸಿಕೊಳ್ಳುವುದು ಅವಶ್ಯ ಎಂದು ಡಾ.ಅಂಬೇಡ್ಕರ್ ಮಹಾವಿದ್ಯಾಲಯದ ಪ್ರಾಚಾರ್ಯ ಬಸವರಾಜ ಕುಮ್ನೂರ ತಿಳಿಸಿದರು.ನಗರದ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಾರ್ಯಾಲಯದಲ್ಲಿ ಶನಿವಾರ ಜರುಗಿದ ಸಾಂಖಿಕ ತಜ್ಞ ಪಿ.ಸಿ.ಮಹಾಲನೋಬಿಸ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಹಾಲನೋಬಿಸ್ ಹಾಕಿ ಕೊಟ್ಟ ಸಂಖ್ಯಾಶಾಸ್ತ್ರದ ಮಾದರಿಗಳನ್ನು ಅಳವಡಿಸಿಕೊಂಡು ಯೋಜನೆಗಳನ್ನು ರೂಪಿಸಬೇಕು ಎಂದ ಅವರು ಮಹಾಲನೋಬಿಸ್‌ರ ಜೀವನ ಚರಿತ್ರೆ ಪುಸ್ತಕ ಹೊರತರುವಂತೆ ವಿಶ್ವವಿದ್ಯಾಲಯ ಸಂಖ್ಯಾಶಾಸ್ತ್ರ ಉಪನ್ಯಾಸಕರಿಗೆ ಸಲಹೆ ನೀಡಿದರು.ಗುಲ್ಬರ್ಗ ವಿವಿ ಸಂಖ್ಯಾಶಾಸ್ತ್ರದ ಮುಖ್ಯಸ್ಥ ಕೆ.ವಾಲಿ ಮಾತನಾಡಿ, ಮಹಾಲನೋಬಿಸ್‌ರ ಜೀವನ ಸಾಧನೆ ವಿವರಿಸಿದರು.ಸಹಾಯಕ ನಿರ್ದೇಶಕಿ ಮಾಧುರಿ ತವಗ, ತಿಮ್ಮಪ್ಪ ತಳವಾರ,  ಗುಲ್ಬರ್ಗ ವಿವಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ವಾಸುದೇವರಾವ ಸೇಡಂ, ಕಾರ್ಮಿಕ ಅಧಿಕಾರಿ ಜಿ.ಸಿದ್ದಲಿಂಗಪ್ಪ, ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ ಉಪನ್ಯಾಸಕ ಆನಂದ ಕಿತ್ತೂರ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಬಿ. ವಿರೂಪಾಕ್ಷಪ್ಪ ಕಿರಣಗಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry