ಅಂತಿಮ ಪಟ್ಟಿಯಲ್ಲಿ 16.86 ಲಕ್ಷ ಮತದಾರರು

ಮಂಗಳವಾರ, ಏಪ್ರಿಲ್ 23, 2019
31 °C
ಚಾಮರಾಜನಗರ ಕ್ಷೇತ್ರ: ಕೊನೆಯ ಎರಡು ತಿಂಗಳಲ್ಲಿ 19,320 ಮಂದಿ ಸೇರ್ಪಡೆ

ಅಂತಿಮ ಪಟ್ಟಿಯಲ್ಲಿ 16.86 ಲಕ್ಷ ಮತದಾರರು

Published:
Updated:
Prajavani

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್‌ 18ರಂದು ನಡೆಯಲಿರುವ ಮತದಾನದಲ್ಲಿ ಮತಹಕ್ಕು ಚಲಾಯಿಸಲು 16,86,364 ಮಂದಿ ಅರ್ಹರಾಗಿದ್ದಾರೆ.

ಅಂತಿಮ ಮತದಾರರ ಪಟ್ಟಿಯ ವಿವರಗಳು ಲಭ್ಯವಾಗಿದ್ದು, ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 8,42,872 ಪುರುಷರು, 8,43,379 ಮಹಿಳೆಯರು ಹಾಗೂ 113 ಇತರೆ (ಲೈಂಗಿಕ ಅಲ್ಪಸಖ್ಯಾತರು) ಮತದಾರರಿದ್ದಾರೆ. 

19,320 ಮಂದಿ ಸೇರ್ಪಡೆ: ಚುನಾವಣಾ ವೇಳಾಪಟ್ಟಿ ಪ್ರಕಟವಾದ ಸಂದರ್ಭದಲ್ಲಿ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಮತದಾರರ ಪಟ್ಟಿಯಲ್ಲಿ ಒಟ್ಟು 16,67,044 ಮತದಾರರು ಇದ್ದಾರೆ ಎಂದು ಹೇಳಲಾಗಿತ್ತು. 2019ರ ಜನವರಿ 16ರವರೆಗಿನ ಅಂಕಿ ಅಂಶ ಅದಾಗಿತ್ತು.

ಆದರೆ, ಚುನಾವಣಾ ಆಯೋಗವು ಮಾರ್ಚ್‌ 16ರವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಿತ್ತು. ಎರಡು ತಿಂಗಳ ಅವಧಿಯಲ್ಲಿ, ಅಂದರೆ ಜನವರಿ 17ರಿಂದ ಮಾರ್ಚ್‌ 16ರವರೆಗಿನ ಅವಧಿಯಲ್ಲಿ ಚಾಮರಾಜನಗರ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 19,320 ಮಂದಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಮಹಿಳಾ ಮತದಾರರು ಹೆಚ್ಚು: ಪುರುಷರಿಗೆ ಹೋಲಿಸಿದರೆ ಕ್ಷೇತ್ರದಲ್ಲಿ 507 ಹೆಚ್ಚು ಮಹಿಳಾ ಮತದಾರರಿದ್ದಾರೆ.

ಅಂಕಿ ಅಂಶ

16,86,364 ಅಂತಿಮ ಪಟ್ಟಿಯಲ್ಲಿರುವ ಮತದಾರರ ಸಂಖ್ಯೆ

8,42,872 ಪುರುಷ ಮತದಾರರು

8,43,379 ಮಹಿಳಾ ಮತದಾರರು

113 ಲೈಂಗಿಕ ಅಲ್ಪಸಂಖ್ಯಾತ ಮತದಾರರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !