ವನ್ಯಜೀವಿಧಾಮವಾಗಿ ಕೊಂಚಾವರಂ ?

7

ವನ್ಯಜೀವಿಧಾಮವಾಗಿ ಕೊಂಚಾವರಂ ?

Published:
Updated:
ವನ್ಯಜೀವಿಧಾಮವಾಗಿ ಕೊಂಚಾವರಂ ?

ಚಿಂಚೋಳಿ: ತಾಲ್ಲೂಕಿನ ಕೊಂಚಾವರಂ ಕಾಯ್ದಿಟ್ಟ ಅರಣ್ಯವನ್ನು ವನ್ಯಜೀವಿಧಾಮವಾಗಿ ಘೋಷಿಸುವಂತೆ ಕೇಂದ್ರದ ಪರಿಸರ ಮಂತ್ರಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲು ಪ್ರಾದೇಶಿಕ ಅರಣ್ಯ ಇಲಾಖೆ ಉದ್ದೇಶಿಸಿದೆ.ಇದರ ಅಂಗವಾಗಿ ಬುಧವಾರ ಕೊಂಚಾವರಂನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆ ಏರ್ಪಡಿಸಲಾಗಿದೆ.

ಸಭೆಗೆ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಉಪಾಧ್ಯಕ್ಷ ಹಾಗೂ ಕ್ರಿಕೆಟ್‌ನ ಸ್ಪಿನ್ ಮಾತ್ರಿಕ ಅನಿಲ ಕುಂಬ್ಳೆ, ಶಾಸಕ ಸುನೀಲ ವಲ್ಯ್‌ಪುರ ಹಾಗೂ ವನ್ಯಜೀವಿ ಮಂಡಳಿಯ ಅಧ್ಯಕ್ಷ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ ಸಿಂಗ್, ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಎ.ರಾಧಾದೇವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ ಚಂದ್ರಶೇಖರಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ.ಪಿ. ಪ್ರಕಾಶ್ ಮತ್ತು ಕೊಂಚಾವರಂ ಅರಣ್ಯ ಭಾಗದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು, ಗ್ರಾಮ ಅರಣ್ಯ ಸಮಿತಿ ಸದಸ್ಯರು ಆಗಮಿಸಲಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ಬಸವರಾಜ ಡಾಂಗೆ ತಿಳಿಸಿದ್ದಾರೆ.ಸಭೆಗೆ ಎರಡರಿಂದ ಮೂರು ಸಾವಿರ ಜನ ಬರುವ ನಿರೀಕ್ಷೆಯಿದೆ, ಇದಕ್ಕಾಗಿ ಬೃಹತ್ ಶಾಮಿಯಾನ ಹಾಗೂ ಊಟ ಮತ್ತು ಕುಡಿವ ನೀರು ಸೇರಿದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.  ಸಭೆಯ ಹಿನ್ನೆಲೆಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ ಕೈಗೊಳ್ಳಲಾಗಿದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಬಸವರಾಜ ತಿಳಿಸಿದ್ದಾರೆ.

   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry