ಉಪ ನಿರ್ದೇಶಕರ `ಏಕಾಭಿನಯಪಾತ್ರ!'

ಶನಿವಾರ, ಜೂಲೈ 20, 2019
24 °C
ಗುಲ್ಬರ್ಗ ವಿಭಾಗೀಯ ಪ್ರವಾಸೋದ್ಯಮ ಇಲಾಖೆ

ಉಪ ನಿರ್ದೇಶಕರ `ಏಕಾಭಿನಯಪಾತ್ರ!'

Published:
Updated:

ಗುಲ್ಬರ್ಗ: ಗುಲ್ಬರ್ಗ ವಿಭಾಗೀಯ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಬೀದರ್, ರಾಯಚೂರು, ಯಾದಗಿರಿ ಜಿಲ್ಲೆಗಳ ಉಸ್ತುವಾರಿ ಜೊತೆಗೆ ಪ್ರಭಾರ ಸಹಾಯಕ ನಿರ್ದೇಶಕ ಹುದ್ದೆ, ದ್ವಿತೀಯ ದರ್ಜೆ ಗುಮಾಸ್ತನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ!ಆರು ವರ್ಷಗಳಿಂದ ಸಹಾಯಕ ನಿರ್ದೇಶಕರನ್ನು ನೇಮಿಸಿಲ್ಲ. ಹೀಗಾಗಿ ಉಪ  ನಿರ್ದೇಶಕರೇ ನಾಲ್ಕು ಜಿಲ್ಲೆಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.ಗುಲ್ಬರ್ಗ ಜಿಲ್ಲೆಯಲ್ಲಿ ಅಪ್ಪನಕೆರೆ, ಖ್ವಾಜಾ ಬಂದೇನವಾಜ್, ಹಪ್ತಗುಂಬಜ್, ಚೋರ್‌ಗುಂಬಜ್, ಬುದ್ಧ ವಿಹಾರ, ಶರಣಬಸವೇಶ್ವರ ದೇವಸ್ಥಾನ, ಉಪಳಾಂವ್ ಅರಣ್ಯ ಪ್ರದೇಶಗಳು ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿವೆ. ಆದರೆ ಬರುವ ಪ್ರವಾಸಿಗರಿಗೆ ಸಾಕಷ್ಟು ಮಾಹಿತಿ ಒದಗಿಸುವ ಅಧಿಕಾರಿ ಮತ್ತು ಸಿಬ್ಬಂದಿಯೇ ಇಲ್ಲ. ಬೀದರ್ ಜಿಲ್ಲೆಯಲ್ಲಿ ಒಬ್ಬ ದ್ವಿತೀಯ ದರ್ಜೆ ಗುಮಾಸ್ತ ಕಾರ್ಯ ನಿರ್ವಹಿಸುತ್ತಿದ್ದಾನೆ. ಇಲ್ಲಿ ಐತಿಹಾಸಕ ಬೀದರ್ ಕೋಟೆ, ಚೌಂಕಂಡಿ, ಅಷ್ಟೂರ್  ಗುಮ್ಮಟ, ಬರೀದ್‌ಶಾಹಿ ಗಾರ್ಡನ್ ಮದರಸಾ ಮಹ್ಮದ್ ಗವಾನ್ ವಿಶ್ವವಿದ್ಯಾಲಯ, ಚೌಬಾರ್            (ವಾಲ್ ಕ್ಲಾಕ್), ನರಸಿಂಹ ಝರಣಿ, ಗುರುನಾನಕ್ ಝರಿ, ಕಾರಂಜಾ ಡ್ಯಾಂ ಮುಂತಾದ ರಮಣೀಯ ಸ್ಥಳಗಳಿವೆ. ಇನ್ನೂ ರಾಯಚೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಧಿಕಾರಿ, ಸಹಾಯಕ ನಿರ್ದೇಶಕರಾಗಲಿ ಇಲ್ಲವೇ ಇಲ್ಲ. ಕಚೇರಿಯನ್ನು ಬಾಗಿಲ ಹಾಕುವಂತ ಸ್ಥಿತಿ ಇಲ್ಲಿಯೂ ನಿರ್ಮಾಣವಾಗಿದೆ.ಕಚೇರಿಯೇ ಇಲ್ಲ!: ಯಾದಗಿರಿ ಜಿಲ್ಲೆಯಲ್ಲಿ ಹಲವು ಪ್ರವಾಸೋದ್ಯಮ ತಾಣಗಳು ಬೆಳವಣಿಗೆ ಹಂತದಲ್ಲಿವೆ. ಆದರೆ ಇಲ್ಲಿ ಇನ್ನೂ ಕೂಡಾ ಪ್ರವಾಸೋದ್ಯಮ ಇಲಾಖೆ ಕಚೇರಿಯನ್ನು ತೆರೆದಿಲ್ಲ.ಸರ್ಕಾರ ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡದೆ ಇರುವುದರಿಂದ ಎಲ್ಲ ಕೆಲಸಗಳನ್ನು ಉಪ ನಿರ್ದೇಶಕರೇ ನಿರ್ವಹಿಸುವಂತಾಗಿದೆ.`ಸಾಕಷ್ಟು ಕೆಲಸಗಳ ಒತ್ತಡ ಇರುವುದರಿಂದ ಬೇರೆ ಜಿಲ್ಲೆಗಳತ್ತ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ. ಮಾನವ ಸಂಪನ್ಮೂಲದ ಕೊರತೆ ಒಟ್ಟಾರೆ ಪ್ರವಾಸೋದ್ಯಮ ಇಲಾಖೆ ಮೇಲೆ ವ್ಯತಿರಿಕ್ತ ಪರಿಣಾಮ           ಬೀರುತ್ತಿದೆ.ಕೇಂದ್ರ ಸ್ಥಾನ                 ಗುಲ್ಬರ್ಗ)ದಲ್ಲಿಯೇ ಸಾಕಷ್ಟು ಕಚೇರಿ ಕೆಲಸಗಳು ಇರುವುದರಿಂದ ಉಳಿದ ಜಿಲ್ಲೆಗಳತ್ತ ಗಮನಹರಿಸುವುದು ಕಷ್ಟ' ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಎಂ.ರಮೇಶ `ಪ್ರಜಾವಾಣಿ'ಗೆ ತಿಳಿಸಿದರು. `ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಿರ್ಮಿತಿ ಕೇಂದ್ರಗಳ ಮೂಲಕ ಯಾತ್ರಿ ನಿವಾಸ ನಡೆಸುತ್ತಿದೆ. ಲೋಕೋಪಯೋಗಿ ಇಲಾಖೆ ಮೂಲಕ ಕೂಡು ರಸ್ತೆಗಳ ನಿರ್ಮಾಣ ಕಾರ್ಯಗಳನ್ನು ಮಾಡಿಸುತ್ತಿದೆ. ಗುಲ್ಬರ್ಗದ ಅಪ್ಪನಕೆರೆ ಅಭಿವೃದ್ಧಿಗೆ ರೂ 69 ಲಕ್ಷ ರೂಪಾಯಿಗಳನ್ನು ಇಲಾಖೆ ವತಿಯಿಂದ ನೀಡಲಾಗಿದ್ದು, ಅಲ್ಲಿ ಬೇಕಾಗಿರುವ ಎಲ್ಲ ಮೂಲ ಸೌಕರ್ಯ ಕಲ್ಪಿಸಲಾಗಿದೆ' ಎಂದು ರಮೇಶ ವಿವರಿಸಿದರು.ಈ ಭಾಗದಲ್ಲಿ `ಹೆಲಿ ಟೂರಿಸಂ' ಹಾಗೂ `ಸರ್ಕ್ಯೂಟ್ ಟೂರಿಸಂ'ಗೆ ಹೇರಳವಾದ ಅವಕಾಶವಿದೆ. ಶೀಘ್ರವೇ ವಿಮಾನ ನಿಲ್ದಾಣ ಕೂಡಾ ಆಗಲಿದೆ. ರೈಲು, ಸಾರಿಗೆ ಸಂಪರ್ಕ ಕೂಡಾ ಚೆನ್ನಾಗಿ ಇರುವುದರಿಂದ ವಿವಿಧ ಭಾಗಕ್ಕೆ ಇದು ಕೊಂಡಿಯಂತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry