`ಒಂದು ಮರ ಹತ್ತು ಮಕ್ಕಳಿಗೆ ಸಮಾನ'

ಭಾನುವಾರ, ಜೂಲೈ 21, 2019
27 °C

`ಒಂದು ಮರ ಹತ್ತು ಮಕ್ಕಳಿಗೆ ಸಮಾನ'

Published:
Updated:

ಗುಲ್ಬರ್ಗ: ಒಂದು ಗಿಡ ಬೆಳೆಸುವುದು ಹತ್ತು ಮಕ್ಕಳನ್ನು ಸಲಹಿದಷ್ಟು ಪುಣ್ಯ ಪ್ರಾಪ್ತವಾಗುತ್ತದೆ ಎಂದು ಕಾಶೀ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ನಗರದ ಶೇಖರೋಜಾದ ಶ್ರೀ ಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಸಿದ್ಧಾಂತ ಶಿಖಾಮಣಿ ಮತ್ತು ವಚನ ಸಾಹಿತ್ಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಎಲ್ಲ ಜೀವರಾಶಿಗಳಿಗೆ ಜೀವದಾನ ಮಾಡುವ ಗಿಡಗಳನ್ನು ಬೆಳೆಸುವುದು ಪುಣ್ಯದ ಕೆಲಸವಾಗಿದೆ. ಜನರಿಗೆ ಪ್ರಾಣವಾಯು ನೀಡುವ ಗಿಡಗಳನ್ನು ಪೋಷಿಸಿ ಬೆಳೆಸಬೇಕಾಗಿದೆ. ಪ್ರಕೃತಿಯಲ್ಲಿ ಮಣ್ಣು, ನೀರು, ಗಾಳಿಯನ್ನು ಶುದ್ಧವಾಗಿಟ್ಟಾಗ ಜೀವನ ಸುರಕ್ಷಿತವಾಗಬಲ್ಲದು ಎಂದು ಹೇಳಿದರು.ಬೀದರ್ ಪರಿಸರವಾಹಿನಿ ಅಧ್ಯಕ್ಷ ಶೈಲೇಂದ್ರ ಕವಡಿ ಮಾತನಾಡಿ, ಗಿಡಗಳು ನಾಡಿನ ಸಂಪತ್ತು, ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಿಗಿರುವುದರಿಂದ ಗಿಡಮರಗಳನ್ನು ಬೆಳೆಸಿ ಪರಿಸರ ರಕ್ಷಿಸಬೇಕು ಎಂದು ಕರೆ ನೀಡಿದರು.ಕಡಗಂಚಿ ವೀರಭದ್ರ ಶಿವಾಚಾರ್ಯ ನೇತೃತ್ವ ವಹಿಸಿದ್ದರು. ಚಿಮ್ಮಾ ಇದಲಾಯಿ ಸ್ವಾಮೀಜಿ, ಜೈನಾಪುರ ಸ್ವಾಮೀಜಿ, ಕಡಕೋಳ ಸ್ವಾಮೀಜಿ, ಪರುಷಮಠದ ಸ್ವಾಮೀಜಿ ಮತ್ತಿತರರು ಉಪಸ್ಥಿತದ್ದರು.ತಹಸೀಲ್ದಾರ್ ಜಿ.ಎಲ್.ಮೇತ್ರೆ, ಬಸವರಾಜ ಪಾಟೀಲ ಹಡಲಗಿ, ಹಂಪನಗೌಡ ಪಾಟೀಲ, ಬಾಬುರಾವ ಕೋಬಾಳ, ಗುರುಲಿಂಗಯ್ಯ ಹಿತ್ತಲಶಿರೂರ, ಮಹಾಂತಯ್ಯ ಲಿಂಗದಳ್ಳಿ ಇದ್ದರು.  ಸ್ವಾತಿ ಕೋಬಾಳ ಸಂಗೀತ ಹಾಡಿದರು. ನವಲಿಂಗ ಪಾಟೀಲ ನಗೆಹನಿ ನಡೆಸಿಕೊಟ್ಟರು. ಧರ್ಮವೀರ ಶಿವಶರಣಪ್ಪ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry