ಸೋಮವಾರ, ಆಗಸ್ಟ್ 26, 2019
21 °C

ಯುವತಿ ಮೇಲೆ ಅತ್ಯಾಚಾರ

Published:
Updated:

ಗುಲ್ಬರ್ಗ:  ಯುವತಿ ಮೇಲೆ ಅತ್ಯಾಚಾರ ಎಸಗಿದ ಘಟನೆ ನಗರ ಹೊರವಲಯದ ಹಾಗರಗಾ ಗ್ರಾಮದಲ್ಲಿ ನಡೆದಿದೆ.ಬಹಿರ್ದೆಸೆಗೆ ಹೋಗಿ ಬರುವಾಗ ನಿರ್ಜನ ಪ್ರದೇಶದಲ್ಲಿ ಅದೇ ಗ್ರಾಮದ ಯಶ್ವಂತ ಬಪ್ಪನ್ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ಮನೆಯವರಲ್ಲಿ ಹೇಳಿಕೊಂಡಿದ್ದಾಳೆ. ಇದನ್ನು ಪ್ರಶ್ನಿಸಲು ಹೋದ ಯುವತಿ ಸಹೋದರರ ಮೇಲೆಯೂ ಆರೋಪಿ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.  ಹೆಚ್ಚುವರಿ ಎಸ್ಪಿ ಕಾಶೀನಾಥ ತಳಕೇರಿ, ಡಿವೈಎಸ್ಪಿ ಎ.ಡಿ. ಬಸಣ್ಣನವರ, ವೃತ್ತ ನಿರೀಕ್ಷಕ ಸತೀಶ್, ಪಿಎಸ್‌ಐ ಹುಸೇನ್ ಭಾಷಾ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ದೂರು ದಾಖಲಾಗಿದೆ.

Post Comments (+)