ಮಂಗಳವಾರ, ಆಗಸ್ಟ್ 20, 2019
25 °C

ಭೀಮಾ ಬ್ಯಾರೇಜ್, ವಿದ್ಯುತ್ ಉತ್ಪಾದನೆ ಆರಂಭ

Published:
Updated:

ಅಫಜಲಪುರ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಭೀಮಾ ನದಿಗೆ ಬಿಡುತ್ತಿರುವುದರಿಂದ ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ಹತ್ತಿರ ಭೀಮಾ ಬ್ಯಾರೇಜ್ ಭರ್ತಿಯಾಗುತ್ತಿದೆ. ಭಾನುವಾರದಿಂದ ಅಲ್ಲಿನ ವಿದ್ಯುತ್ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಿದೆ.ಭೀಮಾ ಬ್ಯಾರೇಜ್‌ನಲ್ಲಿ ನೀರಿನ ಒಳ ಹರಿವು ಹೆಚ್ಚಳವಾಗಿದ್ದು, ಅಲ್ಲಿಯ ಕಾರ್ಯಪಾಲಕ ಎಂಜಿನಿಯರ ಎನ್.ಸಿ.ಬಿರಾದಾರ ಅವರು ಬುಧವಾರ ಪ್ರಜಾವಾಣಿಗೆ ಮಾಹಿತಿ ನೀಡಿ ಪಂಡರಾಪುರದಿಂದ ಇನ್ನೂ ಹೆಚ್ಚುವರಿಯಾಗಿ 10,400 ಕ್ಯೂಸೆಕ್ಸ್ ನೀರು ಭೀಮಾ ನದಿಗೆ ಬಿಡಲಾಗಿದೆ. ಅದಕ್ಕಾಗಿ ನಾವು ಬ್ಯಾರೇಜ್‌ನ ಮೂರು ಗೇಟ್‌ಗಳಿಂದ ಭೀಮಾ ನದಿಗೆ ನೀರು ಬಿಡುತ್ತಿದ್ದೆವೆ. ಸುಮಾರು 14 ಸಾವಿರ ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ ಎಂದು ಅವರು ತಿಳಿಸಿದರು. ಜ್ಯಾಸ್ಪರ್ ಎನರ್ಜಿ ಲಿಮಿಟೆಡ್ ಅಧಿಕಾರಿ ಬಿ.ಅರ್ಜುನ ಮಾಹಿತಿ ನೀಡಿ ಭಾನುವಾರದಿಂದ ವಿದ್ಯುತ್ ಘಟಕದ ಮೂಲಕ ನದಿಗೆ ನೀರು ಬಿಡುಲಾಗುತ್ತಿದೆ.  ಸೊನ್ನ ಬ್ಯಾರೇಜ್‌ನಲ್ಲಿ 2 ವಿದ್ಯುತ್ ಘಟಕಗಳಿಂದ ದಿನಕ್ಕೆ 8 - 9 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ದಿನಕ್ಕೆ 10. 5 ಮೆಗಾವ್ಯಾಟ್ ವರೆಗೂ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ ಎಂದು ಅವರು ಹೇಳುತ್ತಾರೆ.

Post Comments (+)