ಮಂಗಳವಾರ, ಆಗಸ್ಟ್ 20, 2019
22 °C

ವಿವಿಧೆಡೆ `ಕ್ಷೀರಭಾಗ್ಯ' ಯೋಜನೆಗೆ ಚಾಲನೆ

Published:
Updated:

ಗುಲ್ಬರ್ಗ: ಜಿಲ್ಲೆಯ ವಿವಿಧೆಡೆ ಗುರುವಾರ ಆರಂಭವಾದ ಸರ್ಕಾರಿ ಶಾಲೆ ಮತ್ತು ಅಂಗನವಾಡಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಹಾಲು ವಿತರಣೆಯ ಕ್ಷೀರಭಾಗ್ಯ ಯೋಜನೆಗೆ ಕಾರ್ಯಕ್ರಮಗಳಲ್ಲಿ ಹಾಲು ವಿತರಿಸಿ ಚಾಲನೆ ನೀಡಲಾಯಿತು.ಆಳಂದ ವರದಿ: ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಅಧಿಕಾರಿಗಳು ವಿವಿಧೆಡೆ ಭಾಗವಹಿಸಿ ವ್ಯವಸ್ಥಿತವಾಗಿ ಹಾಲು ವಿತರಣೆ ಕಾರ್ಯಕ್ರಮ ನಡೆಸಿದರು.  ತಾಲ್ಲೂಕಿನ 266 ಪ್ರಾಥಮಿಕ, 44 ಪ್ರೌಢ ಶಾಲೆಗಳು ಮತ್ತು 23 ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಸುಮಾರು 52 ಸಾವಿರ ಮಕ್ಕಳಿಗೆ ಈ ಯೋಜನೆಯ ಲಾಭ ಮುಟ್ಟುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಂದಾರ ತಿಳಿಸಿದರು.ಜಯಪ್ರಕಾಶ ನಾರಯಣ ಪ್ರೌಢ ಶಾಲೆ: ಪುರಸಭೆ ಸದಸ್ಯ ಮಲ್ಲಿನಾಥ ಹತ್ತರಕಿ ಮಕ್ಕಳಿಗೆ ಹಾಲು ವಿತರಣೆ  ಮಾಡಿದರು. ಪ್ರಾಚಾರ್ಯ ಅಶೋಕ ರೆಡ್ಡಿ ಮಾತನಾಡಿದರು. ಮುಖ್ಯಗುರು ಎಲ್.ಎಸ್.ಬೀದಿ ಅಧ್ಯಕ್ಷತೆ ವಹಿಸಿದರು. ಪುರಸಭೆ ಸದಸ್ಯರಾದ ರಾಮಚಂದ್ರ ಹತ್ತರಕಿ, ಲಿಂಗರಾಜ ಪಾಟೀಲ, ಸಿದ್ದು ರಟಗಲೆ, ಶಾಂತವೀರ ಪಾಟೀಲ, ಕಲ್ಲಪ್ಪ ಮಂಠಾಳೆ, ಸತೀಶ ಕೊಗನೂರೆ ಇದ್ದರು.ಅಂಗನವಾಡಿ ಮಕ್ಕಳಿಗೂ ಹಾಲು: ಪಟ್ಟಣದ ಶರಣನಗರದ ಅಂಗನವಾಡಿ ಕೇಂದ್ರದಲ್ಲಿ ಸಿಡಿಪಿಓ ಮೇಲ್ವಿಚಾರಕಿ ಮಹಾದೇವಿ ವಚ್ಚೆ ಮಕ್ಕಳಿಗೆ ಹಾಲು ವಿತರಿಸಿದರು. ತಾಲ್ಲೂಕಿನಲ್ಲಿ 414 ಅಂಗನವಾಡಿ ಕೇಂದ್ರಗಳಿದ್ದು, ಒಟ್ಟು 33,120 ಮಕ್ಕಳಿಗೆ ಈ ಕಾರ್ಯಕ್ರಮ ತಲುಪಲಿದೆ. ಈಗಾಗಲೇ ಸೂಕ್ತ ಮಾಹಿತಿಯನ್ನು ಕಾರ್ಯಕರ್ತೆಯರಿಗೆ ನೀಡಲಾಗಿದೆ ಎಂದರು. ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಮಹಾದೇವಿ ಜುಳೆಜುಳೆ, ಪುರಸಭೆ ಸದಸ್ಯ ಅಶೊಕ ಇಟಾಮಳೆ, ಗುರುನಾಥ ಕಳಸೆ, ಲಲಿತಾ ಸನ್ಮಖ, ಶಶಿಕಲಾ ಮುದಗಲೆ, ನೀಲಾವತಿ ಆಲ್ಮದ ಇದ್ದರು.ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮೀಣ ಬೀಳಗಿ ಕ್ಷೀರಭಾಗ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ ಸಲಾಂ, ಸಿದ್ದರಾಮ ಚನ್ನಗೊಂಡ  ಮತ್ತಿತರರು ಇದ್ದರು.ಚಿತ್ತಾಪುರ ವರದಿ:  ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕ್ಷೀರ ಯೋಜನೆಯಲ್ಲಿ ಗುರುವಾರ ತಾಲ್ಲೂಕಿನ ವಿವಿಧೆಡೆ ಶಾಲೆಗಳ ಮತ್ತು ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಹಾಲು ವಿತರಣೆ ಮಾಡಲಾಯಿತು.ದಂಡೋತಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಲಿಂಗಪ್ಪ ಸಜ್ಜನಶೆಟ್ಟಿ, ಮಹಾಂತಪ್ಪ ಕವಡೆ, ಮುಖಂಡರಾದ ಸುಭಾಶ್ಚಂದ್ರ ತಿಮ್ಮನಾಯಕ, ಮುನ್ನಪ್ಪ ಕೊಳ್ಳಿ, ಗ್ರಾಮ ಲೇಖಪಾಲಕ ಪ್ರಕಾಶ ಅವರು ಸಾಮೂಹಿಕವಾಗಿ ಮಕ್ಕಳಿಗೆ ಹಾಲು ವಿತರಣೆ ಮಾಡಿ ಯೋಜನೆಗೆ ಚಾಲನೆ ನೀಡಿದರು.ಅಂಗನವಾಡಿ ಮೇಲ್ವಿಚಾರಕಿ ಮೀನಾಕ್ಷಿ, ಕಾರ್ಯಕರ್ತೆ ವಿದ್ಯಾನಿಧಿ ರಮೇಶ ಕವಡೆ, ಸರಸ್ವತಿ ಅರ್ಜುನ ಹಾದಿಮನಿ ಹಾಗೂ ವಿವಿಧ ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿ ಉಪಸ್ಥಿತರಿದ್ದರು.ಕೋರವಾರ: ಚಿತ್ತಾಪುರ ತಾಲ್ಲೂಕಿನ ಕೋರವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ದೇವೇಂದ್ರ ವಾಡೇಕರ ಕ್ಷೀರಭಾಗ್ಯ ಯೋಜನೆ ಉದ್ಘಾಟಿಸಿದರು.  ಮುಖ್ಯಗುರುಗಳಾದ ರವಿಕುಮಾರ ಕೋಡ್ಲಾ, ಗುರುಲಿಂಗಯ್ಯ ಕರದಳ್ಳಿ, ಜಯಶ್ರೀದೇವಿ, ಚನ್ನವೀರಯ್ಯಸ್ವಾಮಿ ಮತ್ತಿತರರು ಇದ್ದರು.ಸರ್ಕಾರಿ ಪ್ರೌಢ ಶಾಲೆ: ಜಿಲ್ಲಾ ಪಂಚಾಯಿತಿ ಸದಸ್ಯ ರಮೇಶ ಮರಗೋಳ ಅವರು ಮಕ್ಕಳಿಗೆ ಹಾಲು ವಿತರಣೆ ಮಾಡುವ ಮೂಲಕ ಕ್ಷೀರ ಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಬಣ್ಣ ಕೊಳ್ಳಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಲಲಿನಿ ಜಮಖಂಡಿ, ಶಿಕ್ಷಕರಾದ ಅಣಿವೀರಪ್ಪ ನಾಗೂರ, ಜಯಪ್ರಕಾಶ, ಜಗನ್ನಾಥ ಇದ್ದರು.ಡೋಣಗಾಂವ: ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಬಣ್ಣ ಜಡಿ ಮಕ್ಕಳಿಗೆ ಹಾಲು ವಿತರಣೆ ಮಾಡುವ ಮೂಲಕ ಕ್ಷೀರ ಯೋಜನೆ ಉದ್ಘಾಟಿಸಿದರು. ಮುಖಂಡರಾದ ದೇವಪ್ಪ ಅಲ್ಲೂರಕರ್, ಶರಣಗೌಡ, ಭೀಮರಾಯ ಮಾತಗಾ, ಶಿವಶರಣರೆಡ್ಡಿ ಸಾಹು, ಶಾಲೆಯ ಮುಖ್ಯಗುರು ದೇವಿಂದ್ರಪ್ಪ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.ಶಹಾಬಾದ ವರದಿ: ರಾಜ್ಯ ಸರ್ಕಾರದ ಮಹತ್ವದ ಶಾಲಾ ಮಕ್ಕಳ `ಕ್ಷೀರಭಾಗ್ಯ' ಯೋಜನೆಗೆ ಶಹಾಬಾದ ಕ್ಲಸ್ಟ್‌ರ್ ಮಟ್ಟದ ವಿವಿಧ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಗುರುವಾರ ಚಾಲನೆ ನೀಡಲಾಯಿತು.ಭಂಕೂರ ಪ್ರೌಢಶಾಲೆ: ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿ. ಸಿರಗೊಂಡ ಚಾಲನೆ ನೀಡಿದರು. ಉಪಾಧ್ಯಕ್ಷ ಮಹಮದ್ ಅಲಿಂ, ಮುಖ್ಯಗುರು ಸುಮಿತ್ರಾ ಕಟ್ಟಿಮನಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಸುಮಾರು 200 ಮಕ್ಕಳಿಗೆ ಹಾಲು ವಿತರಿಸಲಾಯಿತು.ಪ್ರಕಾಶ ಅಂಬೇಡ್ಕರ್: ಭಂಕೂರನ ಪ್ರಕಾಶ ಅಂಬೇಡ್ಕರ್ ಅನುದಾನಿತ ಪ್ರೌಢಶಾಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಈರಣ್ಣ ಕಾರ್ಗಿಲ್ ಯೋಜನೆಗೆ ಚಾಲನೆ ನೀಡಿದರು. ಮುಖ್ಯಗುರು ಚಂದ್ರಶೇಖರ್ ಗಾರಂಪಳ್ಳಿ, ಶಿಕ್ಷಕರಾದ ಪಿ.ಡಿ.ಜೈನ್, ಶರಣಮ್ಮ, ಸುನಂದ, ರೇಖಾ ಪಾಲ್ಗೊಂಡಿದ್ದರು.

ಭಂಕೂರ ಪ್ರಾಥಮಿಕ ಶಾಲೆ: ಭಂಕೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಕಮಲಾಬಾಯಿ ಪಾಟೀಲ, ರೈತ ಮುಖಂಡ ಮಲ್ಲಿಕಾರ್ಜುನ ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಸಿರಗೊಂಡ, ಸದಸ್ಯ ಕಮಲಾಕರ ತೇಗನೂರ, ಮುಖ್ಯಗುರು ನೀಲಮ್ಮ  ಹಾಲು ವಿತರಿಸಿದರು. ಉರ್ದು, ಕನ್ನಡ ಶಾಲೆ: ನಗರದ ಸರ್ಕಾರಿ ಪ್ರೌಢಶಾಲೆಯ ಕಾರ್ಯಕ್ರಮಕ್ಕೆ ನಗರಸಭೆ ಸದಸ್ಯರಾದ ಡಾ.ಅಹಮದ್‌ಪಟೇಲ ಹಾಗೂ ಗಿರೀಶ್ ಕಂಬಾನೂರ ಚಾಲನೆ ನೀಡಿದರು. ಮುಖ್ಯಗುರು ಜಿ.ಜಿ. ವಣಕ್ಯಾಳ, ಕಸಾಪ ಅಧ್ಯಕ್ಷ ಸಂತೋಷ ಇಂಗಿನಶೆಟ್ಟಿ, ನಾಗಪ್ಪ ಬೆಳಮಗಿ, ಶಿವರಾಜ ಕೋರೆ ಮತ್ತು ಶಿಕ್ಷಕರು ಇದ್ದರು. ಇದೆ ಸಂದರ್ಭದಲ್ಲಿ ಇಕೋ ಕ್ಲಬ್ ಉದ್ಘಾಟಿಸಿ ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು.ಕಾಳಗಿ ವರದಿ: ಅಂಗನವಾಡಿ ಕೇಂದ್ರ ಮತ್ತು ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಗಳ ಮಕ್ಕಳಿಗೆ ವಾರಕ್ಕೆ ಮೂರು ದಿನ ಹಾಲು ಕೊಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ `ಕ್ಷೀರಭಾಗ್ಯ' ಯೋಜನೆಯು ಪಟ್ಟಣ ಸೇರಿದಂತೆ ಸುತ್ತಲಿನ ಶಾಲೆಗಳಲ್ಲಿ ಗುರುವಾರದಿಂದ ಜಾರಿಗೆ ಬಂದಿತು.ಇಲ್ಲಿನ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ವಿದ್ಯಾರ್ಥಿಗಳಿಗೆ ಹಾಲು ನೀಡಿ ಮತ್ತು ತಾವೂ ಕುಡಿದು ಯೋಜನೆಗೆ ಚಾಲನೆ ನೀಡಿದರು.ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸುರೇಶ ಮೋರೆ, ಎಸ್‌ಡಿಎಂಸಿ ಸದಸ್ಯ ಅಬ್ದುಲ್ ರಹಿಮಾನ್, ಮುಖ್ಯಗುರು ಭಾಗೀರಥಿ ರಾಜೇಶ್ವರ, ಶಿವರಾಜ ಜೀರಗಿ, ಅರವಿಂದ ಸಿತಾಳೆ, ಹಣಮಂತರಾವ ಕುಂಬಾರ, ಬಾಬುರಾವ ಮಹಾಜನ ಇತರರು ಇದ್ದರು. ಸರ್ಕಾರಿ ಪ್ರೌಢ ಶಾಲೆಯಲ್ಲಿ ಉಪಪ್ರಾಂಶುಪಾಲೆ ಭಾರತಿ ದೊಡ್ಡಮನಿ, ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಕಾಂತ ಗುರುಮಠಕಲ್ ಅನೇಕರು ಇದ್ದರು. ಅಂಗನವಾಡಿ ಕೇಂದ್ರದಲ್ಲಿ ಮೀರಾ ಗಾಣೋರೆ, ಸುಲೋಚನಾ ಜಾಧವ ಇದ್ದರು.ಗೋಟೂರ: ಇಲ್ಲಿನ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಸಿದ್ದಣ್ಣ ಜಮಾದಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭು ಭಾವಿ ಮಕ್ಕಳಿಗೆ ಹಾಲು ಕುಡಿಸಿ ಯೋಜನೆಗೆ ಚಾಲನೆ ನೀಡಿದರು.ಸೇಡಂ ವರದಿ:  ಪಟ್ಟಣದ ವಾಸವದತ್ತಾ ಸಿಮೆಂಟ್ ಕಂಪೆನಿ ಆವರಣದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗೋವಿಂದ ಯಾಕಂಬರಿ ಗುರುವಾರ ಮಕ್ಕಳಿಗೆ ಹಾಲು ಕುಡಿಸಿ ಕ್ಷೀರ ಭಾಗ್ಯ ಯೋಜನೆಗೆ ಚಾಲನೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತರೆಡ್ಡಿ ಅವರು `ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನಿತ 1 ರಿಂದ 10ನೇ ತರಗತಿಯ ಒಟ್ಟು 277 ಶಾಲೆಗಳಲ್ಲಿ 36177 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಪ್ರತಿ ಮಗುವಿಗೆ 18 ಗ್ರಾಂ ಹಾಲಿನ ಪುಡಿಯಿಂದ ಸಿದ್ದಪಡಿಸುವ ಹಾಲಿಗೆ 10 ಗ್ರಾಮ ಸಕ್ಕರೆ ಬೆರೆಸಿ ನೀಡಲಾಗುವುದು' ಎಂದು ವಿವರಿಸಿದರು. ವಾಸವದತ್ತಾ ಸಿಮೆಂಟ್ ಕಂಪೆನಿಯ ಸಹಾಯಕ ಉಪಾಧ್ಯಕ್ಷ ಆರ್.ಎಸ್.ಪಾಟೀಲ ಮಾತನಾಡಿದರು.  ತಾಲ್ಲೂಕು ಪಂಚಾಯಿತಿ ಸದಸ್ಯ ಜೈಭೀಮ ಉಡಗಿ, ಗ್ರಾಮೀಣ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಜೆ. ವಿದ್ಯಾಸಾಗರರಾವ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುಭಾಷ, ಎಸ್‌ಡಿಎಂಸಿ ಅಧ್ಯಕ್ಷ ರಾಮಕೃಷ್ಣ, ಉಪಾಧ್ಯಕ್ಷ ದಶರಥ, ಕೆಎಂಎಫ್ ಅಧಿಕಾರಿ ಜಿ. ಕುಮಾರ್, ಸಮನ್ವಯ ಅಧಿಕಾರಿ ಕೆ. ರಾಮಲಿಂಗ, ಕಂದಾಯ ಶಿರಸ್ತೆದಾರ ಪಂಪಯ್ಯ ಶಿಕ್ಷಣ ಸಂಯೋಜಕ ಸಿದ್ರಾಮಪ್ಪ, ಪುರಸಭೆ ಸದಸ್ಯೆ ಅನಿತಾಬಾಯಿ ರಾಠೋಡ, ಬಸವರಾಜ ಹೊನ್ನಳ್ಳಿ,  ಸಾವಿತ್ರಿ ಸಾಹು, ಶಿಕ್ಷಣ ಸಂಸ್ಯೆ ಅಧ್ಯಕ್ಷ ಶಂಕರ ಬಿರಾದಾರ ಇದ್ದರು. ಜಿ.ಆರ್.ಜೋಶಿ ಸ್ವಾಗತಿಸಿದರು. ಶಿಕ್ಷಕಿ ಸರೋಜಾ ಪ್ರಾರ್ಥಿಸಿದರು. ದತ್ತಾತ್ರೇಯ ವಿಶ್ವಕರ್ಮ ನಿರೂಪಿಸಿದರು. ನಿಂಗಣ್ಣ ಸಣ್ಣಕ್ಕಿ ವಂದಿಸಿದರು.ಅಫಜಲಪುರ ವರದಿ:  `ಸರ್ಕಾರ ಮಕ್ಕಳಿಗೆ ಉಚಿತವಾಗಿ ನೀಡುತ್ತಿರುವ ಮದ್ಯಾಹ್ನದ ಬಿಸಿಯೂಟ ಮತ್ತು ಹಾಲು ವಿತರಣೆಯಲ್ಲಿ ಮೇಲ್ವಿಚಾರಕರು ಸ್ವಚ್ಛತೆ ಕಾಪಾಡ ಬೇಕು. ಮಕ್ಕಳಿಗೆ ಯಾವುದೇ ತೊಂದರೆ ಆಗುವದಿಲ್ಲ' ಎಂದು  ಮಹಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ನಿದೇರ್ಶಕ ಸದಾಶಿವ ಮೇತ್ರಿ ಹೇಳಿದ್ದಾರೆ.ಇಲ್ಲಿನ ಮಹಾಂತೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಪ್ರಾಥಮಿಕ ಮತ್ತು ಪ್ರೌಡ ಶಾಲಾ ವಿದ್ಯಾರ್ಥಿಗಳಿಗೆ ಗುರುವಾರ ಕ್ಷೀರ ಭಾಗ್ಯ ಯೋಜನೆಯ ಹಾಲು ವಿತರಿಸಿ ಮಾತನಾಡಿದರು .ಮುಖ್ಯಗುರು ಎಸ್.ಜಿ.ಪಾಟೀಲ, ಶ್ರೀಪಾದ ಕುಲಕರ್ಣಿ ಹಾಗೂ ಸಹ ಶಿಕ್ಷಕರಾದ ಎಸ್.ಎ.ತೋಳನೂರ, ಅಶೋಕ ನಾಗಶೆಟ್ಟಿ, ಗುರಣ್ಣ ಕಲ್ಲೋಳಿ, ಬಿ.ಎಸ್.ಬಿರಾದಾರ ಇದ್ದರು.ಕುಲಾಲಿ:  ಅಫಜಲಪುರ ತಾಲ್ಲೂಕಿನ ಕುಲಾಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆ ಆರಂಭಿಸಲಾಯಿತು. ಶಿವಕುಮಾರ ಪಾಟೀಲ, ಭೀಮರಾಯ ಕುಮಸಗಿ, ದತ್ತು ಪಾಟೀಲ, ಕುಪೇಂದ್ರ ನಿಂಬಾಳ, ದತ್ತು, ಅಮರೇಶ ಪಾಟೀಲ, ಈರಣ್ಣ ಸಾವಳಗಿ, ಗೌರಿಶಂಕರ ಉಡಗಿ ಮತ್ತಿತರರು ಇದ್ದರು.ಗುಡೂರ: ಅಫಜಲಪುರ ತಾಲ್ಲೂಕಿನ ಗುಡೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆ ಆರಂಭಿಸಲಾಯಿತು. ಸೋಮಶೇಖರ ಹಂಚನಾಳ, ವಿಜಯಕುಮಾರ, ಗುಂಡೇರಾವ ಗುತ್ತೇದಾರ, ಅಪ್ಪಾ ಪಟೇಲ, ಉಗ್ರಮೂರ್ತಿ, ಶಿವಶರಣ, ಮೈನೋದ್ದೀನ್ ಕುಮಸಗಿ ಮತ್ತಿತರರು ಇದ್ದರು.ಕೋಗನೂರ: ಅಫಜಲಪುರ ತಾಲ್ಲೂಕಿನ ಕೋಗನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆ ಆರಂಭಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬುರಾವ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗುಂಡುರಾವ ಗುತ್ತೇದಾರ, ಅಪ್ಪಾ ಪಟೇಲ, ಗೋಪಾಲಕೃಷ್ಣ ಕೋಠಾರಿ, ರಾಜೇಂದ್ರ, ರೇವಣಸಿದ್ಧ ಮತ್ತಿತರರು ಇದ್ದರು.ಸ್ಟೇಷನ್ ಗಾಣಗಾಪುರ: ಅಫಜಲಪುರ ತಾಲ್ಲೂಕಿನ ಸ್ಟೇಷನ್ ಗಾಣಗಾಪುರ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆ ಆರಂಭಿಸಲಾಯಿತು. ಮೈನೋದ್ದೀನ್ ಎಲ್. ಚೌದರಿ, ಪರಶುರಾಮ ಸಿಂಧೆ, ಚಂದ್ರಶೇಖರ ದಂಡೋತಿ, ಶ್ರೀನಿವಾಸ ಗಲಾಂಡೆ ಮತ್ತಿತರರು ಇದ್ದರು.

Post Comments (+)