ಭಾನುವಾರ, ಆಗಸ್ಟ್ 25, 2019
24 °C

ಸರಕು ಸಾಗಣೆ: ನೋಂದಣಿಗೆ ಸೂಚನೆ

Published:
Updated:

ಗುಲ್ಬರ್ಗ:  ಸರಕು ಸಾಗಣೆ ವಾಹನಗಳ ಮೂಲಕ ಸರಕನ್ನು ಸಂಗ್ರಹಿಸುವ, ಸಾಗಿಸುವ, ಹಂಚುವ ವ್ಯವಹಾರದಲ್ಲಿ ತೊಡಗಿಸಿಕೊಂಡವರು ದಿ ಕ್ಯಾರೇಜ್ ಬೈ ರೋಡ್ ಆ್ಯಕ್ಟ್ 2007 ಮತ್ತು ಕಾಯ್ದೆ 2011ರ ಅಡಿ ನೋಂದಾವಣಿ ಮಾಡಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಸೂಚಿಸಿದೆ.ಕೇಂದ್ರ ಸರ್ಕಾರ 2011ರ ಮಾರ್ಚ್ 1ರಿಂದ ಈ ಕಾಯ್ದೆಯನ್ನು ಜಾರಿಗೆ ತಂದಿದೆ. ಸರಕನ್ನು ಸಂಗ್ರಹಿಸುವ, ಸಾಗಿಸುವ ಹಾಗೂ ಹಂಚುವ ವ್ಯವಹಾರದಲ್ಲಿ ತೊಡಗಿಸಿಕೊಂಡವರು, ಗೂಡ್ಸ್ ಬುಕ್ಕಿಂಗ್ ಕಂಪೆನಿ, ಗುತ್ತಿಗೆದಾರರು, ದಲ್ಲಾಳಿಗಳು, ಕೊರಿಯರ್ ಏಜೆನ್ಸಿಗಳು ಈ ಕಾಯ್ದೆ ವ್ಯಾಪ್ತಿಗೆ ಬರುತ್ತಾರೆ.ಈ ಕಾನೂನಿನ ಪ್ರಕಾರ ನೋಂದಣಿ ಮಾಡಿಸಿಕೊಳ್ಳದೆ ವ್ಯವಹಾರಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿ ಅಥವಾ ಕಂಪೆನಿಯ ಮೊದಲ ಅಪರಾಧಕ್ಕೆ ರೂ 5 ಸಾವಿರ, ನಂತರದ ಅಪರಾಧಕ್ಕೆ ರೂ 10 ಸಾವಿರ ದಂಡ ವಿಧಿಸಲಾಗುತ್ತದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್.ಟಿ.ಒ) ಈಶ್ವರ ಬಿ. ಅವಟಿ ತಿಳಿಸಿದ್ದಾರೆ.

Post Comments (+)