ಮನುಷ್ಯತ್ವದ ಹುಡುಕಾಟಕ್ಕಾಗಿ ಕಾಲ್ನಡಿಗೆ ಜಾಥಾ 17ಕ್ಕೆ

ಮಂಗಳವಾರ, ಜೂನ್ 25, 2019
22 °C
ದಲಿತ ಯುವಕನ ಮೇಲೆ ಹಲ್ಲೆಗೆ ಖಂಡನೆ

ಮನುಷ್ಯತ್ವದ ಹುಡುಕಾಟಕ್ಕಾಗಿ ಕಾಲ್ನಡಿಗೆ ಜಾಥಾ 17ಕ್ಕೆ

Published:
Updated:

ಮೈಸೂರು: ‘ಗುಂಡ್ಲುಪೇಟೆ ತಾಲ್ಲೂಕಿನ ಶ್ಯಾನಾಡ್ರಹಳ್ಳಿ ಗ್ರಾಮದ ಎಸ್‌.ಪ್ರತಾಪ್‌ ಎಂಬ ಯುವಕನನ್ನು ಜಾತಿ ಮತಾಂಧರು, ಪರಿಶಿಷ್ಟ ಜಾತಿಯವ ಎಂಬ ಕಾರಣಕ್ಕೆ ಬೆತ್ತಲುಗೊಳಿಸಿ, ಮೆರವಣಿಗೆ ಮಾಡಿರುವುದು ಅಮಾನುಷ ಕೃತ್ಯ’ ಎಂದು ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವೇದಿಕೆ ಅಧ್ಯಕ್ಷರಾದ ಹರಿಹರ ಆನಂದಸ್ವಾಮಿ ಕಿಡಿಕಾರಿದರು.

‘ದೇಗುಲದ ಪೂಜಾರಿ ಪೂರ್ವಾಪರ ವಿಚಾರಿಸಿದ ಸಂದರ್ಭ, ಜಾತಿ ತಿಳಿಯುತ್ತಿದ್ದಂತೆ ಹೊಲೆ–ಮಾದಿಗರು ದೇವಸ್ಥಾನಕ್ಕೆ ನುಗ್ಗುವಷ್ಟು ಸೊಕ್ಕು ಬಂದಿತೆ ಎಂದು ಪ್ರತಾಪ್‌ ಕೈಗಳನ್ನು ಹಗ್ಗದಿಂದ ಕಟ್ಟಿ ಹಾಕಿ, ಮನೋಸೋಇಚ್ಛೆ ಥಳಿಸಿದ್ದಲ್ಲದೆ, ಯುವಕನ ಬಟ್ಟೆಗಳನ್ನು ಕಳಚಿ ಬೆತ್ತಲುಗೊಳಿಸಿ ಮೆರವಣಿಗೆ ಮಾಡಿ, ಸವರ್ಣೀಯರು ವಿಜೃಂಭಿಸಿದ್ದಾರೆ’ ಎಂದು ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಪೋಲಿಸರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಸಂಗತಿಯನ್ನು ಆಧರಿಸಿ ಪ್ರಕರಣವನ್ನು ದಾಖಲು ಮಾಡಬೇಕಿತ್ತು. ಆದರೆ ನಿರ್ಲಕ್ಷಿಸಿದ್ದಾರೆ. ಯಾವುದೇ ರೈತಪರ ಸಂಘಟನೆಗಳು ಪ್ರಕರಣವನ್ನು ಕುರಿತು ಬೆಂಬಲ ನೀಡಿಲ್ಲ. ಹಾಗೆಯೇ ಗುಂಡ್ಲುಪೇಟೆ ಶಾಸಕ ನಿರಂಜನ್‌ ಕುಮಾರ್‌ ಈ ಪ್ರಕರಣದ ಕುರಿತು ಏನು ಮಾತನಾಡದೆ ಮೌನ ವಹಿಸಿರುವುದು ಖಂಡನೀಯ’ ಎಂದು ಹೇಳಿದರು.

‘ದಲಿತ ಯುವಕನ ಮೇಲಿನ ಹಲ್ಲೆ ಖಂಡಿಸಿ, ಜಾತಿ–ಧರ್ಮ–ಮತ ಮೌಢ್ಯದ ವಿರುದ್ಧ, ಮನುಷ್ಯತ್ವದ ಹುಡುಕಾಟಕ್ಕಾಗಿ ಕಾಲ್ನಡಿಗೆ ಜಾಥವನ್ನು ಜೂನ್‌ 17ರ ಸೋಮವಾರ ಬೆಳಿಗ್ಗೆ 11ಕ್ಕೆ ಗುಂಡ್ಲುಪೇಟೆಯಿಂದ ವೀರನಪುರ ಗೇಟಿನ ಶನಿದೇವರ ದೇವಸ್ಥಾನದವರೆಗೆ ಹಮ್ಮಿಕೊಳ್ಳಲಾಗಿದೆ’ ಎಂದು ಆನಂದಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವೇದಿಕೆ ಉಪಾಧ್ಯಕ್ಷ ಸೋಮಯ್ಯ ಮಲೆಯೂರು, ಎಪಿಎಂಸಿ ಉಪಾಧ್ಯಕ್ಷ ಚಿಕ್ಕಜವರಯ್ಯ, ಚಾಮರಾಜನಗರ ಜಿಲ್ಲೆಯ ಮಾನವ ಬಂಧುತ್ವ ವೇದಿಕೆ ಸಂಚಾಲಕ ಸುಭಾಷ್‌ ಮಾಡ್ರಹಳ್ಳಿ, ಆಲಗೂಡು ಚಂದ್ರಶೇಖರ್‌ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !