ನಗರದಲ್ಲಿ ವೈವಿಧ್ಯತೆಯ `ಕಲಾದರ್ಶನ'

7

ನಗರದಲ್ಲಿ ವೈವಿಧ್ಯತೆಯ `ಕಲಾದರ್ಶನ'

Published:
Updated:

ಗುಲ್ಬರ್ಗ: ಮೀರತ್‌ನ ಖಾದಿ, ಲಕ್ನೋದ ಚಿಕನ್ ವರ್ಕ್, ದೆಹಲಿಯ ಸೆಣಬು ಚೀಲಗಳು, ಪಾಣಿಪತ್ ಸೋಫಾ ಕವರ್‌ಗಳು, ಜೈಪುರದ ಆಹಾರ ಪದಾರ್ಥ, ಮೀರತ್‌ನ ಪಿಂಗಾಣಿ ಪಾತ್ರೆಗಳು, ಆದಿವಾಸಿಗಳ ತಲೆಗೂದಲಿನ ಎಣ್ಣೆ, ಮಹಿಳೆಯರ ಸೌಂದರ್ಯ ಸಾಧನಗಳು, ಮುಂಬೈಯ ತಾಂತ್ರಿಕ ವಸ್ತುಗಳು, ಅಡುಗೆ ಮನೆ ಕೆಲಸ ಕಡಿಮೆ ಮಾಡುವ ಸಾಧನಗಳು, ಮುಂಬಯಿ ಚಪ್ಪಲಿಗಳು, ಜೀವನ ಶೈಲಿಯ ಸಾಧನಗಳು, ಬೊಜ್ಜು ಇಳಿಸುವ ಸಾಧನಗಳು, ಒಡಿಸ್ಸಾದ ಮಕ್ಕಳ ಆಟಿಕೆಗಳು, ಗೋಲ್ಕಾ ಸೇರಿದಂತೆ ದೇಶದ ವಿವಿಧೆಡೆಯ ವಸ್ತುಗಳು ಹಾಗೂ ಗುಲ್ಬರ್ಗದ ಗ್ರಾಹಕರು...-ಇದು ನಗರದ ಗುಡ್‌ಲಕ್ ಹೋಟೆಲ್ ಮುಂಭಾಗದ ಖೂಬಾ ಮೈದಾನದಲ್ಲಿ ನಡೆಯುತ್ತಿರುವ `ಕಲಾದರ್ಶನ'ದ ವೈವಿಧ್ಯತೆ. ಮೂರನೇ ವರ್ಷದಲ್ಲಿ ಆರನೇ ಬಾರಿ ಕಲಾದರ್ಶನ ಪ್ರದರ್ಶನ ಮತ್ತು ಮಾರಾಟ ಮಳಿಗೆ ನಗರಕ್ಕೆ ಬಂದಿದೆ. ಇಲ್ಲಿ ದೇಶದ ವಿವಿ ರಾಜ್ಯಗಳ ಜನರು ಗುಡಿ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ತಯಾರಿಸಿದ ವಸ್ತುಗಳನ್ನು ಸ್ವತಃ ಮಾರಾಟ ಮಾಡುತ್ತಿದ್ದಾರೆ.`ಇಲ್ಲಿ ಒಟ್ಟು 116 ಮಳಿಗೆಗಳಿವೆ. ಒಂದಕ್ಕಿಂತ ಒಂದು ವಿಭಿನ್ನ. ಉತ್ಪಾದಕರೇ ನೇರವಾಗಿ ಮಾರಾಟ ಮಾಡುತ್ತಿದ್ದಾರೆ. ದಲ್ಲಾಳಿ ಲಾಭವನ್ನು ನೇರವಾಗಿ ಗ್ರಾಹಕರಿಗೆ ನೀಡುತ್ತೇವೆ. ವಸ್ತುಗಳು ಗುಣಮಟ್ಟ ಹೊಂದಿದ ಕಾರಣ ನಾವು ಆರನೇ ಬಾರಿಗೆ ಇಲ್ಲಿಗೆ ಬರಲು ಸಾಧ್ಯವಾಯಿತು. ನಮ್ಮಲ್ಲಿ ಬಂದ ಗ್ರಾಹಕರು ಮತ್ತೆ ಮತ್ತೆ ಬರುತ್ತಾರೆ' ಎನ್ನುತ್ತಾರೆ ಆಯೋಜಕ ಸುಬ್ರಹ್ಮಣ್ಯ ರಾಜು.`ಗುಲ್ಬರ್ಗ ಮತ್ತು ಕಲಾದರ್ಶನದ ಮಧ್ಯೆ ಅವಿನಾಭಾವ ಸಂಬಂಧ ಬೆಳೆದಿದೆ. ಬಡ, ಮಧ್ಯಮ ವರ್ಗದ ಜನರಿಂದ ಶ್ರೀಮಂತರ ತನಕದ ಗ್ರಾಹಕರಿದ್ದಾರೆ. 5 ರೂಪಾಯಿಯಿಂದ 5 ಸಾವಿರಕ್ಕೂ ಅಧಿಕದ ವಸ್ತುಗಳು ಇಲ್ಲಿ ಲಭ್ಯ. ಸಾಂಪ್ರದಾಯಿಕ ಕರಕುಶಲ ಕರ್ಮಿಗಳು ತಯಾರಿಸಿದ ಸೊತ್ತುಗಳು ಪ್ರದರ್ಶನ ಮಳಿಗೆಗಳಿಗಿಂತ ಶೇ 25ರಷ್ಟು ಕಡಿಮೆ ದರದಲ್ಲಿ ಸಿಗುತ್ತದೆ' ಎಂದು ವಿವರಿಸಿದರು.`ಧಾರವಾಡದ ಕಲಾಭವನದಲ್ಲಿ ಮೊದಲ ಬಾರಿಗೆ ಕಲಾದರ್ಶನ ಆರಂಭಿಸಿದೆವು. ಕೆಲ ದಿನಗಳಲ್ಲಿ ಆಂಧ್ರಪ್ರದೇಶದ ವಾರಂಗಲ್‌ಗೆ ಹೋಗುತ್ತೇವೆ. ಬೆರಳೆಣಿಕೆ ದಿನ ಮಾತ್ರ ಇಲ್ಲಿ ಮಾರಾಟ ನಡೆಯಲಿದೆ.ಗ್ರಾಹಕರ ವಿಶ್ವಾಸವೇ ನಮ್ಮ ಯಶಸ್ಸಿನ ಗುಟ್ಟು. ಒಂದು ವ್ಯಕ್ತಿ, ಕುಟುಂಬ, ಮನೆಗೆ ಬೇಕಾದ ಎಲ್ಲ ವಸ್ತುಗಳು ನಮ್ಮಲ್ಲಿವೆ. ಎಲ್ಲರೂ ಬರುತ್ತಿದ್ದಾರೆ. ನೀವೂ ಬಂದು ನೋಡಿ' ಎಂದು ಆಹ್ವಾನಿಸಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry