ಭಾನುವಾರ, ಡಿಸೆಂಬರ್ 15, 2019
26 °C

ಮಕ್ಕಳು ಇಲ್ಲಿ `ಮಿನುಗುತಾರೆ'

ಪ್ರಜಾವಾಣಿ ವಾರ್ತೆ/ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

ಮಕ್ಕಳು ಇಲ್ಲಿ `ಮಿನುಗುತಾರೆ'

ಔರಾದ್: ಸ್ಥಳೀಯ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆ ಮಕ್ಕಳು ತಾವೇ ಹೊರ ತಂದ ಮಿನುಗುವ ತಾರೆ ಪತ್ರಿಕೆಯಲ್ಲಿ ತಮ್ಮ ವೈವಿದ್ಯಮಯ ಕಲೆಯಿಂದ ಮಿಂಚಿದ್ದಾರೆ.ಸರ್ಕಾರ ಮತ್ತು ಮಹಿಳಾ ಸಮಖ್ಯಾ ಆಶ್ರಯದಲ್ಲಿ ನಡೆಯುತ್ತಿರುವ ಈ ಶಾಲೆ ಮಕ್ಕಳು ಪ್ರತಿ ಮೂರು ತಿಂಗಳಿಗೊಮ್ಮೆ ತ್ರೈಮಾಸಿಕ `ಮಿನುಗುವ ತಾರೆ' ಹೆಸರಿನ ಪತ್ರಿಕೆ ಹೊರ ತರುತ್ತಾರೆ. ಮೂರು ತಿಂಗಳ ಅವಧಿಯ ಪಾಠ ಮತ್ತು ಪಠ್ಯೇತರ ಚಟವಟಿಕೆ ಒಳಗೊಂಡ ಸಂಕ್ಷಿಪ್ತ ವಿವರಣೆ ಈ ಪತ್ರಿಕೆಯಲ್ಲಿ ಮುದ್ರಿತವಾಗಿರುತ್ತದೆ.ಆ ತಿಂಗಳ ಅವಧಿಯಲ್ಲಿ ಬರುವ ರಾಷ್ಟ್ರೀಯ ಹಬ್ಬಗಳ ಆಚರಣೆ, ವಿದ್ಯಾರ್ಥಿಗಳ ಮಾಸಿಕ ಪರೀಕ್ಷೆ ಸಾಧನೆ, ಅವರು ತಯಾರಿಸಿದ ವಿವಿಧ ಮಾದರಿಗಳು, ಕವನಗಳು, ಹಾಡುಗಳು, ಒಗಟುಗಳು, ಮಹತ್ವದ ಸುಭಾಷಿತ ಸಂಗ್ರಹಗಳು ಪತ್ರಿಕೆಗಳಲ್ಲಿ ಕಾಣಸಿಗುತ್ತವೆ. ಸಂಗೀತ, ಕರಾಟೆ ಪ್ರದರ್ಶನ, ಕಸೂತಿ ಹಾಗೂ ವೈವಿದ್ಯಯ ರಂಗೋಲಿ ಕಲೆ ಯಥಾವತ್ತಾಗಿ ಪತ್ರಿಕೆಗಳಲ್ಲಿ ಮೂಡಿ ಬರುತ್ತಿರುವುದು ಈ ಮಕ್ಕಳ ಕಲಾ ಪ್ರತಿಭೆ ಮೆಚ್ಚುವಂತಹದ್ದು.ಕಳೆದ ಎರಡು ವರ್ಷದಿಂದ ಈ ರೀತಿ ಮಕ್ಕಳಿಂದ ಮಕ್ಕಳಿಗಾಗಿ `ಪುಟಾಣಿಗಳ ಮಿನುಗುವ ತಾರೆ' ಎಂಬ ಹೆಸರಿನ ಎರಡು ಪುಟಗಳ ಪತ್ರಿಕೆ ಹೊರ ತರುತ್ತಿದ್ದೇವೆ. ಪತ್ರಿಕೆಯಲ್ಲಿ ಬರುವ ಎಲ್ಲ ವಿಷಯಗಳು ಮಕ್ಕಳೇ ತಯಾರಿಸಿ ಕೊಡುತ್ತಾರೆ. ಮಹಿಳಾ ಸಮಖ್ಯಾದವರ  ನೆರವಿನಿಂದ ಪ್ರತಿ ಮೂರು ತಿಂಗಳಿಗೊಮ್ಮೆ 100 ಪ್ರತಿಗಳು ಮುದ್ರಣ ಮಾಡುತ್ತೇವೆ ಎಂದು ಹೇಳುತ್ತಾರೆ ಮುಖ್ಯಗುರು ಮೀನಾಕುಮಾರಿ.11ರಿಂದ 14 ವರ್ಷದೊಳಗಿನ 140 ಹೆಣ್ಣು ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಾರೆ. ಅನಾಥ, ಕಡು ಬಡವ ಮತ್ತು ಶಾಲೆ ಬಿಟ್ಟ ಹೆಣ್ಣು ಹುಡುಗಿಯರು ಇಲ್ಲಿದ್ದಾರೆ. ಇವರೆಲ್ಲರಿಗೂ ವಸತಿ ಸಹಿತ ಆಠ ಪಾಠದ ವ್ಯವಸ್ಥೆ ಇದೆ. ಇಲ್ಲಿಯ ಪ್ರತಿಯೊಂದು ಮಗುವಿನಲ್ಲಿ ಒಂದಿಲ್ಲ ಒಂದು ಅದ್ಭುತ ಕಲೆ ಇದೆ. ಪೂಜಾ ಎಂಬ ವಿದ್ಯಾರ್ಥಿನಿ ಕರಾಟೆಯಲ್ಲಿ ವಿಭಾಗ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯ ಮಟ್ಟದಲ್ಲಿ ಸ್ಪರ್ಧೆ ಮಾಡಿದ್ದಾರೆ. ಕಳೆದ ಸ್ವಾತಂತ್ರ್ಯೋತ್ಸವ ದಿನದಂದು ಇಲ್ಲಿ ನಡೆದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.

 

ಪ್ರತಿಕ್ರಿಯಿಸಿ (+)