`ಪರೀಕ್ಷಾ ದೃಷ್ಟಿಯ ಶಿಕ್ಷಣ ಅಪಾಯಕಾರಿ'

7

`ಪರೀಕ್ಷಾ ದೃಷ್ಟಿಯ ಶಿಕ್ಷಣ ಅಪಾಯಕಾರಿ'

Published:
Updated:

ಗುಲ್ಬರ್ಗ: `ಪರೀಕ್ಷಾ ದೃಷ್ಟಿಯಿಂದಲೇ ಸಾಗುತ್ತಿರುವ ಇಂದಿನ ಶಿಕ್ಷಣ ಅಪಾಯಕಾರಿಯಾದದ್ದು. ಇದರಿಂದ ರಾಷ್ಟ್ರದ ಐಕ್ಯತೆಯ ಕೊರತೆ ಕಾಣುತ್ತಿದ್ದೇವೆ' ಎಂದು ಪ್ರೊ. ಸೂಗಯ್ಯ ಹಿರೇಮಠ ಹೇಳಿದರು.ನಗರದ ಸೇಂಟ್ ಜೋಸೆಫ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಸೋಮವಾರ ಏರ್ಪಡಿಸಲಾಗಿದ್ದ `ವ್ಯಕ್ತಿತ್ವ ವಿಕಸನ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ಆದರ್ಶದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು.ಅಂದಾಗಲೇ ಯುವಕರಿಂದ ಭವ್ಯಭಾರತ ಕಟ್ಟಲು ಸಾಧ್ಯ ಎಂದರು. ಡಾ. ಮಾಣಿಕರಾವ ಧನಶ್ರೀ, ಪ್ರಾಂಶುಪಾಲ ಸಿಸ್ಟಿರ್ ಪ್ರಫುಲ್ಲ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry