ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ

7

ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ

Published:
Updated:

ಗುಲ್ಬರ್ಗ: ನಗರದ ಹೀರಾಪುರ ಬಡಾವಣೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಮದರ ಥೆರೆಸಾ ಚಾರಿಟೇಬಲ್ ಅಸ್ಪತ್ರೆ, ಸಮೂಹ ಅಭಿವೃದ್ಧಿ ಸೇವಾ ಸಂಸ್ಥೆ, ಸಾರನಾಥ ವೆಲ್‌ಫೇರ್ ಸೊಸೈಟಿ ಮತ್ತು ಪ್ರಜ್ಞಾ ಯುವಕ ಸಂಘ ಆಶ್ರಯದಲ್ಲಿ ಮದರ ಥೆರೆಸಾ ಅವರ 116ನೇ ಜಯಂತಿ ನಿಮಿತ್ತ `ಮಕ್ಕಳ ಉಚಿತ ಆರೋಗ್ಯ ಶಿಬಿರ' ಏರ್ಪಡಿಸಲಾಗಿತ್ತು.ಫಾದರ್ ಸಂತೋಷ ಡಯಾಸ ಮಾತನಾಡಿ, `ವಿಶ್ವದಲ್ಲಿ ಅನಾಥ ಮಕ್ಕಳಿಗೆ ಮತ್ತು ತುಳಿತಕ್ಕೆ ಒಳಗಾದ ಜನ ಸಮುದಾಯಗಳಿಗೆ ಮದರ ಥೆರೆಸಾ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಅವರ ಕಾರ್ಯಗಳು ಇಂದಿನ ಮಕ್ಕಳಿಗೆ ಆದರ್ಶ ಪ್ರಾಯವಾಗಿವೆ. ಅವರ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸಿಕೊಳ್ಳಬೇಕು' ಎಂದರು.ಡಾ.ಆನಂದ, ಶೋಭಾ, ಎನ್,ಎಸ್.ಕುಂಬಾರ, ಲಿಂಗರಾಜ ಅನಸೂರ, ಸಾವಿತ್ರಿ ತಡಕಲ್ ಮತ್ತಿತರರು ಇದ್ದರು.

ಅನಿಲಕುಮಾರ ವಂದಿಸಿ, ಬ್ರಹ್ಮಾನಂದ ಶರ್ಮಾ ನಿರೂಪಿಸಿ, ಗುರುನಾಥ ವಂದಿಸಿದರು.450ಕ್ಕೂ ಹೆಚ್ಚು ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಯಿತು. 126 ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗೆ ಸಲಹೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry