`ಮಾಧ್ಯಮ ಅಶ್ಲೀಲತೆ ದಮನ ಅಗತ್ಯ'

7

`ಮಾಧ್ಯಮ ಅಶ್ಲೀಲತೆ ದಮನ ಅಗತ್ಯ'

Published:
Updated:

ಗುಲ್ಬರ್ಗ: ಟೆಲಿವಿಷನ್ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಸಿನೆಮಾ, ರಿಯಾಲಿಟಿ ಷೋ, ಫ್ಯಾಷನ್ ಷೋ, ಜಾಹೀರಾತು ಮೊದಲಾದವುಗಳಲ್ಲಿ ಮಹಿಳೆಯನ್ನು ಭೋಗದ ವಸ್ತುವಾಗಿ ಚಿತ್ರಿಸಲಾಗುತ್ತಿದೆ. ಕಂಪ್ಯೂಟರ್, ಮೊಬೈಲ್ ಫೋನ್‌ಗಳ್ಲ್ಲಲೂ ಅಂತರ್ಜಾಲದ ಮೂಲಕ ಅಶ್ಲೀಲ ವೆಬ್ ತಾಣಗಳು ದೊರಕುತ್ತಿವೆ. ಇವುಗಳನ್ನು ದಮನ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡುತ್ತಿಲ್ಲ ಎಂದು ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎ.ಐ.ಎಂ.ಎಸ್.ಎಸ್.)ರಾಜ್ಯ ಸಮಿತಿ ಕಾರ್ಯದರ್ಶಿ ಸದಸ್ಯೆ ಜಾಹೀದಾ ಶಿರೀನ್ ಆರೋಪಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕಾದಲ್ಲಿ 40 ವರ್ಷಗಳಿಗೂ ಹೆಚ್ಚು ಕಾಲ ನಡೆಸಿದ ವೈಜ್ಞಾನಿಕ ಸಂಶೋಧನೆಯ ಪ್ರಕಾರ ಮಾಧ್ಯಮದಲ್ಲಿ ಪ್ರಸಾರವಾಗುವ ಹಿಂಸೆ ಆಕ್ರಮಣಕಾರಿ ಧೋರಣೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ದೃಢಪಟ್ಟಿದೆ.ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ವಿವಿಧ ರಾಜ್ಯದಲ್ಲಿ ಹಾಗೂ ಕರ್ನಾಟಕದಲ್ಲಿ ದಿನನಿತ್ಯ ಅಂತಹ ಸುದ್ದಿಗಳನ್ನು ಕೇಳುತ್ತಿದ್ದೇವೆ. ಮಾಧ್ಯಮದಲ್ಲಿ ವರದಿಯಾದಂತೆ, ರಾಜ್ಯ ಅಪರಾಧ ದಾಖಲೆಗಳ ವಿಭಾಗ(ಎಸ್.ಸಿ.ಆರ್.ಬಿ)ದಲ್ಲಿ ಲಭ್ಯವಿರುವ ಅಂಕಿ-ಸಂಖ್ಯೆಗಳ ಪ್ರಕಾರ 2003ರಿಂದ 2012(ಅಕ್ಟೋಬರ್) ಅವಧಿಯಲ್ಲಿ 4,479 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕೇವಲ 315 ಅಪರಾಧಿಗಳು ಮಾತ್ರ ಶಿಕ್ಷೆಗೆ ಒಳಗಾಗಿದ್ದಾರೆ. ಇದು ಕಳವಳಕಾರಿಯಾಗಿದೆ ಎಂದು ಅವರು ತಿಳಿಸಿದರು.ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಹೆಣ್ಮಕ್ಕಳಿಗೆ ಕರಾಟೆ ತರಬೇತಿ ನೀಡಲು ತೀರ್ಮಾನಿಸಿದಂತೆ, ಖಾಸಗಿ, ಅರೆ ಖಾಸಗಿ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೂ ತರಬೇತಿ ನೀಡಬೇಕೆಂದು ಅವರು ಆಗ್ರಹಿಸಿದರು. ಸೆ.19ರಂದು ಧರಣಿ:          ಅಶ್ಲೀಲತೆ, ಮದ್ಯಪಾನ ಹಾವಳಿ ಹಾಗೂ ಮಹಿಳೆಯರ ಮೇಲಿನ ಲೈಂಗಿಕ ಆಕ್ರಮಣಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಂಘಟನೆಯ ರಾಜ್ಯ ಸಮಿತಿ ವತಿಯಿಂದ ಸೆ.19ರಂದು ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಮಹಿಳೆಯರ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ರಾಜ್ಯದ ಎಲ್ಲಾ ಭಾಗದ ಮಹಿಳೆಯರು ಭಾಗವಹಿಸುವರು ಎಂದು ಜಾಹೀದಾ ತಿಳಿಸಿದರು.ಧರಣಿಯಲ್ಲಿ ಹಿರಿಯ ರಂಗಕರ್ಮಿ ಎಚ್.ಜಿ.. ಸೋಮಶೇಖರ ರಾವ್, ವಕೀಲರಾದ ಹೇಮಲತಾ ಮಹಿಷಿ, ಡಾ.ವಿಜಯಾ, ರೂಪಾ ಹಾಸನ ಮತ್ತಿತರರು ಭಾಗವಹಿಸುವರು ಎಂದು ಅವರು ತಿಳಿಸಿದರು.ಡಾ. ಸೀಮಾ ದೇಶಪಾಂಡೆ, ವಿಶಾಲಾಕ್ಷಿ ಪಾಟೀಲ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry