ಇವಣಿ: ಮೂಲಸೌಲಭ್ಯ ವಂಚಿತ ಗ್ರಾಮ

7
ಗ್ರಾಮಾಯಣ

ಇವಣಿ: ಮೂಲಸೌಲಭ್ಯ ವಂಚಿತ ಗ್ರಾಮ

Published:
Updated:

ಚಿತ್ತಾಪುರ: ತಾಲ್ಲೂಕಿನ ಇವಣಿ ಗ್ರಾಮದಲ್ಲಿ ಮೂಲಸೌಲಭ್ಯಗಳ ಕೊರತೆಯಿಂದ ಜನರು ಪರದಾಡುವಂತಾಗಿದೆ.ಗ್ರಾಮದಲ್ಲಿ ವಿಶ್ವಬ್ಯಾಂಕ್ ನೆರವಿನಲ್ಲಿ ನಿರ್ಮಲ ಗ್ರಾಮ ಯೋಜನೆಯ ಕೆಲಸಗಳನ್ನು ಕೈಗೊಳ್ಳಲಾಗಿದೆ. ಸುವರ್ಣ ಗ್ರಾಮ ಯೋಜನೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ನಡೆಸಲಾಗಿದೆ. ಆದರೂ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆ , ಸಾರ್ವಜನಿಕ ಚರಂಡಿ, ಮಹಿಳಾ ಶೌಚಾಲಯ ಸಮಸ್ಯೆ, ನೈರ್ಮಲ್ಯ ಸಮಸ್ಯೆ, ಸಾರಿಗೆ ಬಸ್ ಸೌಲಭ್ಯ, ಸಮುದಾಯ ಭವನ ಕೊರತೆ...ಹೀಗೆ ಅನೇಕ ಸಮಸ್ಯೆಗಳಿಂದ ಜನ ಇನ್ನೂ ತೊಂದರೆ ಅನುಭವಿಸುತ್ತಿದ್ದಾರೆ.ಎತ್ತರ ಪ್ರದೇಶದಲ್ಲಿರುವ ಗ್ರಾಮದಲ್ಲಿ ಸಿಮೆಂಟ್ ರಸ್ತೆಗಳನ್ನು ಮಾಡಿಸಲಾಗಿದೆ. ಮಳೆ ಮತ್ತು ಬಚ್ಚಲು ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಿಸಲಾಗಿದೆ. ಮತ್ತು ಕೆಲವು ಕಡೆಗೆ ರಸ್ತೆಯ ಮೇಲೆ ಹರಿದು ನೀರು ತೆಗ್ಗಿನ ಪ್ರದೇಶಕ್ಕೆ ಹೋಗುತ್ತದೆ.

ಆದರೆ, ಗ್ರಾಮದ ಆಶ್ರಯ ಬಡಾವಣೆಯಲ್ಲಿ ಸರಿಯಾದ ಸಿಮೆಂಟ್ ರಸ್ತೆಗಳಿಲ್ಲ. ಚರಂಡಿಗಳಂತೂ ಮೊದಲೇ ಇಲ್ಲ.ಈ ಬಡವಾಣೆ ತಗ್ಗಿನ ಪ್ರದೇಶದಲ್ಲಿರುವುದರಿಂದ ಗ್ರಾಮದ ಚರಂಡಿ ಮತ್ತು ಮಳೆ ನೀರು ಈ ಬಡಾವಣೆಗೆ ನುಗ್ಗುತ್ತದೆ. ಬೆಳಗುಂಪಾ ಗ್ರಾಮಕ್ಕೆ ಹೋಗುವ ಈ ಮಾರ್ಗದ ರಸ್ತೆಯ ಪಕ್ಕದಲ್ಲಿ ನಿರ್ಮಿಸಿದ್ದ ಚರಂಡಿಯನ್ನು ಮುಚ್ಚಲಾಗಿದೆ. ಇದರಿಂದ ವರ್ಷಪೂರ್ತಿ  ತೊಂದರೆ ಅನುಭವಿಸಬೇಕಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.ಮನೆಗಳ ಸುತ್ತಮುತ್ತ ನಿಂತ ಕೊಳಚೆ ನೀರು ಹಸಿರುಗಟ್ಟಿದೆ. ಗಬ್ಬು ವಾಸನೆ ಹರಡುತ್ತಿದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ ವಿಪರೀತವಾಗುತ್ತದೆ. ಇದರಿಂದಾಗಿ ಮಲೇರಿಯಾ, ಮೊದಲಾದ ರೋಗಗಳಿಂದ ಇಲ್ಲಿನವರಿಗೆ ಬಿಡುಗಡೆ ಇಲ್ಲ. 6 ತಿಂಗಳ ಹಿಂದೆ ಮಗುವೊಂದಕ್ಕೆ ಡೆಂಗೆ ಜ್ವರವೂ ಬಂದಿತ್ತು. ಹಾವುಗಳ ಕಾಟವೂ ಹೆಚ್ಚಾಗಿದೆ. ಅವು ಆಗಾಗ ಮನೆಗಳಿಗೂ ನುಗ್ಗುತ್ತವೆ ಎನ್ನುತ್ತಾರೆ ಮಹಿಳೆ ಶಾಕೇರಾ ಬಗ್ದಾದ್.ಗ್ರಾಮದ ದಲಿತರ ಬಡಾವಣೆಯಲ್ಲಿ ಕೆಲವು ಕಡೆಗೆ ಸಿಮೆಂಟ್ ರಸ್ತೆ ಮಾಡಲಾಗಿದೆ. ಇನ್ನೂ ಕೆಲವು ಕಡೆಗೆ ರಸ್ತೆ ನಿರ್ಮಾಣ ಮಾಡಬೇಕಾಗಿದೆ. ಹೊಸ ಬಡಾವಣೆಗೆ ಸಿಮೆಂಟ್ ರಸ್ತೆ ಮತ್ತು ಚರಂಡಿ, ಕುಡಿವ ನೀರು ಸರಬರಾಜಿಗೆ ವ್ಯವಸ್ಥೆ ಮಾಡಬೇಕು. ಅಲ್ಲದೆ ಸಾರ್ವಜನಿಕ ನಳದ ವ್ಯವಸ್ಥೆಯನ್ನೂ ಕಲ್ಪಿಸಬೇಕು, ಜನರ ಅನುಕೂಲಕ್ಕೆ ಸಮುದಾಯ ಭವನ ನಿರ್ಮಿಸಬೇಕು ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

ಸಾಮೂಹಿಕ ಶೌಚಾಲಯವಿಲ್ಲದ ಕಾರಣ ಗ್ರಾಮದ ಮಹಿಳೆಯರು ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿಗೆ ಬಸ್ ಭಾಗ್ಯವೇ ಇಲ್ಲ. ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟ ಕಾರಣ ಬಸ್ ಸಂಚಾರ ಆರಂಭಿಸಿಲ್ಲ. ಇದರಿಂದ ಖಾಸಗಿ ವಾಹನ ಮತ್ತು ಬಾಡಿಗೆ ವಾಹನಗಳನ್ನೆ ಗ್ರಾಮಸ್ಥರು ಅವಲಂಬಿಸಬೇಕಾಗಿದೆ.ಗುಂಡಗುರ್ತಿ ಪ್ರೌಢ ಶಾಲೆ ಮತ್ತು ಕಾಲೇಜು ವ್ಯಾಸಂಗಕ್ಕೆ ಹೋಗಿ ಬರಲು ವಿದ್ಯಾರ್ಥಿಗಳು ತೊಂದರೆ ಪಡುವಂತಾಗಿದೆ. ಖಾಸಗಿ ಜೀಪು, ಕ್ರೂಸರ್‌ನಲ್ಲಿ ದುಬಾರಿ ಹಣ ತೆತ್ತು ಶಾಲೆಗೆ ಹೋಗಬೇಕಾಗಿದೆ. ಇದರಿಂದ ಬಡ ಮಕ್ಕಳು ವಿದ್ಯಾಭ್ಯಾಸ ಮೊಟಕುಗೊಳಿಸಬೇಕಾದ ದುಃಸ್ಥಿತಿಯಿದೆ.ರೂ.1.50 ಕೋಟಿ ವೆಚ್ಚದಲ್ಲಿ ಗುಲ್ಬರ್ಗ-ಸೇಡಂ ಮುಖ್ಯ ರಸ್ತೆಯಿಂದ ಇವಣಿವರೆಗಿನ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಈಚೆಗಷ್ಟೆ ಚಾಲನೆ ನೀಡಿದ್ದಾರೆ. ಇದರಿಂದಾಗಿ ಗ್ರಾಮಕ್ಕೆ ಬಸ್ ಸೌಲಭ್ಯ ಸಿಗಲಿದೆ ಎನ್ನುವ ಭರವಸೆ ಮೂಡಿದೆ.ಸಮಸ್ಯೆ ನಿವಾರಿಸಿ’

ಆಶ್ರಯ ಬಡಾವಣೆ ಯಲ್ಲಿ ನಿಲ್ಲುವ ಕೊಳಚೆ ನೀರಿನ ಸಮಸ್ಯೆ ಪರಿಹರಿಸಿ ಎಂದು ಪಂಚಾಯಿತಿ ಸದಸ್ಯರಿಗೆ ಹೇಳಿದರೆ, ನಿಮ್ಮ ಮನೆ ಬಿದ್ದರೆ ನಾವು ಕಟ್ಟಿಸಿಕೊಡುತ್ತೇವೆ ಎಂದು ಹೇಳುತ್ತಾರೆ. ನಮಗೆ ಮನೆ ಬೇಡ ಸಮಸ್ಯೆಯಿಂದ ಬಿಡುಗಡೆ ಬೇಕು.

–ರುಮ್ಮೋದ್ದಿನ್ ಭಾಗೋಡಿ,ಆಶ್ರಯ ಬಡಾವಣೆ ನಿವಾಸಿ, ಇವಣಿ‘ಸೌಲಭ್ಯ ಒದಗಿಸಿ’

ಇವಣಿ ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸಲು ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು.

ಇರುವ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ತೆಗೆದುಕೊಂಡು ಅಗತ್ಯ ಅನುದಾನ ನೀಡಿ ರಸ್ತೆ, ನೀರು,  ಬಸ್, ಶೌಚಾಲಯ ಮೊದಲಾದ ಮೂಲಸೌಲಭ್ಯಗಳನ್ನು ಒದಗಿಸಬೇಕು.

–ವಿಜಯಕುಮಾರ ಸಂಗಾವಿ, ಅಧ್ಯಕ್ಷರು, ದಲಿತ ಸೇನೆ, ಗ್ರಾಮ ಘಟಕ‘ಶೀಘ್ರ ಸೂಕ್ತ ಕ್ರಮ’

ಇವಣಿ ಗ್ರಾಮದ ಆಶ್ರಯ ಬಡವಾಣೆಯಲ್ಲಿ ನಿಲ್ಲುವ ಕೊಳಚೆ ನೀರಿನ ಸಮಸ್ಯೆ ಕುರಿತು ಯಾರೂ ಸರಿಯಾದ ಮಾಹಿತಿ  ನೀಡಿ­ರ­­ಲಿಲ್ಲ. ಪಂಚಾ­­ಯಿತಿ ಸದಸ್ಯ ರೊಂದಿಗೆ ಚರ್ಚಿಸಿ ನಮ್ಮಲ್ಲಿ ಲಭ್ಯವಾಗುವ ಅನುದಾನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿಸಿ ಜನರಿಗೆ ಅನುಕೂಲ ಮಾಡಿಕೊಡಲು ಕ್ರಮ ತೆಗೆದುಕೊಳ್ಳುತ್ತೇನೆ. ಇಲಾಖೆಯ ಮೇಲಾ ಧಿಕಾರಿಗಳ ಗಮನಕ್ಕೆ ತರಲು ಪತ್ರ ಬರೆಯುತ್ತೇನೆ.

–ದಾಮೋದರಾವ್ ಕುಲಕರ್ಣಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಗುಂಡಗುರ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry