‘ಕತ್ತಲೆಯಿಂದ ಬೆಳಕಿನಡೆಗೆ ತರುವುದೇ ಧರ್ಮ’

7

‘ಕತ್ತಲೆಯಿಂದ ಬೆಳಕಿನಡೆಗೆ ತರುವುದೇ ಧರ್ಮ’

Published:
Updated:

ವಾಡಿ: ಭಗವಂತ ನಿಸರ್ಗದ ಎಲ್ಲ ಸಂಪತನ್ನು ಮನುಷ್ಯನಿಗೆ ಕೊಟ್ಟಿದ್ದರೂ ತೃಪ್ತಿಯಿಲ್ಲ. ಭೌತಿಕ ಸಂಪತ್ತಿನ ವ್ಯಾಮೊಹಕ್ಕೆ ಬಲಿಯಾಗಿ ತನ್ನ ಸುಂದರವಾದ ಬದುಕನ್ನೇ ನಾಶ ಮಾಡಿ ಕೊಳ್ಳುತ್ತಿದ್ದಾನೆ. ಇಂಥ ಕತ್ತಲೆಯಿಂದ ಬೆಳಕಿನಡೆಗೆ ಕರೆದೊಯ್ಯುವುದೇ ನಿಜವಾದ ಧರ್ಮದ ಸಿದ್ಧಾಂತವಾಗಿದೆ ಎಂದು ಬಾಳೆಹೊನ್ನೂರ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ನುಡಿದರು.ಪಟ್ಟಣದ ಸಮೀಪ ಇರುವ ಹಲಕರ್ಟಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಾಣ ಮಾಡಿದ ಮಂಗಲ ಭವನ ಉದ್ಘಾಟಿಸಿದ ನಂತರ ನಡೆದ ಧರ್ಮ ಸಭೆಯ ಸಾನಿಧ್ಯವಹಿಸಿ ಅವರು ಮಾತನಾಡಿದರು.ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಧರ್ಮ ಪ್ರಜ್ಞೆ ಮತ್ತು ಸಾಮಾಜಿಕ ಅರಿವು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಹಲಕರ್ಟಿ ವೀರಭದ್ರೇಶ್ವರ ದೇವಸ್ಥಾನದ ಪೀಠಾಧಿಪತಿ ಮುನೀಂದ್ರ ಶಿವಾಚಾರ್ಯ ಕಟ್ಟಿಮನಿ ಹಿರೆಮಠ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ರಾಷ್ಟ್ರ, ರಾಷ್ಟ್ರಗಳ ಮಧ್ಯೆ ಶಾಸ್ತ್ರಸ್ತ್ರಗಳ ಪೈಪೊಟಿ ನಡೆದಿದೆ. ಇದರಿಂದ ಜಗತ್ತಿನಲ್ಲಿ ಅಶಾಂತಿ ಮನೆ ಮಾಡಿದೆ. ಆದ್ದರಿಂದ ಇಂಥ ಕೃತ್ಯಗಳಿಗೆ ಮನುಷ್ಯ ಕಡಿವಾಣ ಹಾಕದಿದ್ದರೆ ಮಾನವ ಸಂಪತ್ತು ನಾಶವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಚಿತ್ತಾಪುರದ ಸೋಮಶೇಖರ ಕಂಬಳೇಶ್ವರ ಮಠ, ಮುಗಳ ನಾಗಾಂವನ ಸಿದ್ದಲಿಂಗ ಶಿವಾಚಾರ್ಯ, ಸಿದ್ದರಾವ ಕಲೆಕೆರಿ ಶಿವಾಚಾರ್ಯ, ರಾಣೆಬೆನ್ನೂರಿನ ಸಿದ್ದಲಿಂಗ ದೇವರು, ಮಾಲಗತ್ತಿಯ ಚನ್ನಬಸವ ಶರಣರು ಮಾತನಾಡಿದರು.ಮಾಜಿ ಶಾಸಕರಾದ ದೊಡ್ಡಪ್ಪಗೌಡ ನರಿಬೊಳ, ವಾಲ್ಮೀಕ ನಾಯಕ ಮತ್ತು ಭಾಗಣ್ಣಗೌಡ ನಾಲವಾರ, ಜಿಲ್ಲಾ ಪಂಚಾಯಿತಿ ಸದಸ್ಯ ಶಂಭುಲಿಂಗ ಗುಂಡಗುರ್ತಿ, ಬಂಜಾರ ಸಮಾಜದ ಜಿಲ್ಲಾ ಅಧ್ಯಕ್ಷ ರವಿ ಆರ್.ಬಿ ಚವ್ಹಾಣ, ಬಸವರಾಜ ಪಂಚಾಳ, ಇಂಬ್ರಾಹಿಮ್ ಪಟೇಲ, ಹಲಕರ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವೆಗೌಡ ತೊಟದ ಇದ್ದರು.ಇದಕ್ಕೂ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ರಂಭಾಪುರಿ ಮಠದ ಜಗದ್ಗುರುಗಳ ಅಡ್ಡಪಲ್ಲಕಿ ಉತ್ಸವ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry