ಭಾನುವಾರ, ಡಿಸೆಂಬರ್ 8, 2019
25 °C

ಬಿಸಿಲ ಊರಿಗೆ ಮಂಜಿನ ಹೊದಿಕೆ

Published:
Updated:
ಬಿಸಿಲ ಊರಿಗೆ ಮಂಜಿನ ಹೊದಿಕೆ

ಶಹಾಬಾದ: ಫರಸಿ ಕಲ್ಲು ಮತ್ತು ಬಿಸಿಲೂರಿಗೆ ಖ್ಯಾತಿ ಪಡೆದ ಶಹಾಬಾದ ನಗರದಲ್ಲಿ ಗುರುವಾರ ಬೆಳಗಿನ ಜಾವ ಏಳು ಗಂಟೆಗೆ ಮಂಜು ಮುಸುಕಿದ ವಾತಾವರಣವಿತ್ತು.ನಗರದಲ್ಲಿ ಎಲ್ಲಿ ನೋಡಿದರಲ್ಲಿ ಒಬ್ಬರ ಮುಖ ಒಬ್ಬರಿಗೆ ಕಾಣದ ಸ್ಥಿತಿಯಲ್ಲಿ, ಸುಮಾರು ಎರಡು ಗಂಟೆಗಳ ಕಾಲ ಈ ಅಪರೂಪದ ದೃಶ್ಯ ನೋಡಿ ಜನ ಆನಂದಿಸಿದರು.ಬೆಳಗಿನ ಜಾವ ಶಹಾಬಾದ ರೈಲ್ವೆ ನಿಲ್ದಾಣದ ಮೂಲಕ ಓಡಾಡುವ ರೈಲುಗಳ ಸಂಖ್ಯೆ ಹೆಚ್ಚು. ಹಾಗಾಗಿ ರೈಲ್ವೆ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಕೆಲ ನಿಮಿಷ ರೈಲನ್ನು ಮರೆತು ಮಂಜಿನ ದೃಶ್ಯಾವಳಿಗೆ ಮನ ಸೋತಿದ್ದರು. ‘ಮಳೆಗಾಲದಲ್ಲಿ ವಾತಾವರಣದ ಶಾಖ ಕಡಿಮೆ ಯಾದಾಗ ನೀರಿನ ಸೂಕ್ಮ ಕಣಗಳು ಮಂಜು ಹೊಗೆ ಸೃಷ್ಟಿಸುತ್ತವೆ. ಕಳೆದ ವರ್ಷವೂ ಇಂತಹ ದೃಶ್ಯ ಕಂಡು ಬಂದಿತ್ತು‘ ಎಂದು ತೋಟಗಾರಿಕಾ ತಜ್ಞ ಆರ್.ಎ. ಮಹೇಂದ್ರಕರ್ ನೆನಪಿಸಿಕೊಂಡರು

ಪ್ರತಿಕ್ರಿಯಿಸಿ (+)