ವಾರದಿಂದ ಬಿಸಿಯೂಟ ಅಲಭ್ಯ

7
ಕಲ್ಲಹಿಪ್ಪರ್ಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ವಾರದಿಂದ ಬಿಸಿಯೂಟ ಅಲಭ್ಯ

Published:
Updated:

ಕಾಳಗಿ: ಚಿತ್ತಾಪುರ ತಾಲ್ಲೂಕಿನ ಕಲ್ಲ ಹಿಪ್ಪರ್ಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಒಂದು ವಾರದಿಂದ ಅಕ್ಷರ ದಾಸೋಹದಡಿಯ ಮಧ್ಯಾಹ್ನ ನೀಡುವ ಬಿಸಿಯೂಟಕ್ಕೆ ಸಂಚಕಾರ ಬಂದಿದೆ.ಬುಧವಾರ ಅರಣಕಲ್ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾ ಬಸವರಾಜ ಪಾಟೀಲ ಹೇರೂರ ಮತ್ತು ಖಣದಾಳ ಕ್ಷೇತ್ರದ ಸದಸ್ಯೆ ಅನಿತಾ ಪವನಕುಮಾರ ವಳಕೇರಿ ಈ ಪ್ರಾಥಮಿಕ ಶಾಲೆಗೆ ಆಕಸ್ಮಿಕ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.ಅವರು ಶಾಲೆಯ ಕಚೇರಿಯಲ್ಲಿ ಕುಳಿತು ಅರ್ಧತಾಸು ಕಳೆದರೂ ಯಾರೂ ಇವರನ್ನು ಮಾತನಾಡಿಸಲು ಬರಲಿಲ್ಲ ಎನ್ನಲಾಗಿದೆ. ನಂತರ ಬಂದ ಶಿಕ್ಷಕರೊಬ್ಬರನ್ನು ಖಣದಾಳ ಸದಸೆ್ಯ ಅನಿತಾ ವಳಕೇರಿ ಪ್ರಶ್ನಿಸಿದ್ದಾಗ ಪ್ರಭಾರ ಮುಖ್ಯಗುರು ಚಾಂದಸಾಬ ಬಂದರು. ಜಿ.ಪಂ ಸದಸ್ಯೆಯರು, ಅವರಿಂದ ಶಾಲೆಯ ಬಗ್ಗೆ ಮಾಹಿತಿ ಪಡೆದರು.ಚಾಂದಸಾಬ್ ಅವರು, ’ಶಾಲೆಯಲ್ಲಿ ಒಟ್ಟು 136ಮಕ್ಕಳ ದಾಖಲಾತಿ ಇದೆ. ಇಲ್ಲಿ 1ರಿಂದ 8ನೇ ತರಗತಿಗಳು ನಡೆಯುತ್ತಿವೆ. 6ಜನ ಶಿಕ್ಷಕರಿದ್ದಾರೆ. ಅಭ್ಯಾಸ ಚೆನ್ನಾಗಿದೆ. ಹಾಲು ಕೊಡಲಾಗುತ್ತಿದೆ. ಆದರೆ ಆಹಾರ ಧಾನ್ಯಗಳ ಕೊರತೆಯಿಂದ ಕಳೆದ 5ದಿನಗಳಿಂದ ಬಿಸಿಯೂಟ ಕೊಡುತ್ತಿಲ್ಲ’ ಎಂದು ತಿಳಿಸಿದರು.ಜಿ.ಪಂ ಸದಸ್ಯೆಯರು ಮಕ್ಕಳನ್ನು ಮಾತನಾಡಿಸಿದಾ ದಾಗ, ಬಿಸಿಯೂಟ ಕೊಡುವುದನ್ನು ಸೆ.4 ರಿಂದ ನಿಲ್ಲಿಸಲಾಗಿದ್ದನ್ನು ತಿಳಿದು, ಕೂಡಲೇ ಬಿಸಿಯೂಟ ಅಧಿಕಾರಿಯನ್ನು ಸಂಪಕಿರ್ಸಲು ಪ್ರಯತ್ನಿಸಿದ್ದಾರೆ. ಆದರೆ ಬಿಸಿಯೂಟ ಅಧಿಕಾರಿಯ ಮೊಬೈಲ್ ವ್ಯಾಪ್ತಿ ಪ್ರದೇಶದ ಹೊರಗಿದ್ದದ್ದು ಕೇಳಿಬಂದಿದೆ.ಎಂಟನೇ ತರಗತಿಯ ಶಾಲೆಯಲ್ಲಿ ಒಂದೇ ಕೊಠಡಿಯಲ್ಲಿ 1ರಿಂದ 3ನೇ ತರಗತಿವರೆಗಿನ ನಲಿಕಲಿ ಮಕ್ಕಳು ಇನ್ನೊಂದರಲ್ಲಿ ಇನ್ನುಳಿದ ಮಕ್ಕಳು ಕುಳಿತುಕೊಂಡಿದ್ದು ಕಂಡುಬಂದಿದೆ. ಈ ಕುರಿತು ಸಂಬಂಧಪಟ್ಟ ಮೇಲಾ ಧಿಕಾರಿಗಳ ಗಮನಕ್ಕೆ ತಂದು ಮುಖ್ಯ ಗುರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸುವುದಾಗಿ ಈ ಸದಸೆ್ಯಯರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry