ನೂರನೇ ಟೆಸ್ಟ್‌ ಟ್ಯೂಬ್‌ ಬೇಬಿ ಜನನ

7

ನೂರನೇ ಟೆಸ್ಟ್‌ ಟ್ಯೂಬ್‌ ಬೇಬಿ ಜನನ

Published:
Updated:

ಸೊಲ್ಲಾಪುರ: ಇಲ್ಲಿನ ಶೋಭಾ ನರ್ಸಿಂಗ್‌ ಹೋಮ್‌ ಹಾಗೂ ಮಾಫಿರ್ಯಸ್‌ ಶೋಭಾ ಫರ್ಟಿಲಿಟಿ ಸೆಂಟರ್‌ ಎರಡು ವರ್ಷಗಳಲ್ಲಿ 100 ಟೆಸ್ಟ್‌ಟ್ಯೂಬ್‌ ಬೇಬಿ ಮಕ್ಕಳಿಗೆ ಜನ್ಮ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಡಾ.ಮಿಲಿಂದ ಪಾಟೀಲ ತಿಳಿಸಿದರು.ನಗರದಲ್ಲಿ ಈಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡೂವರೆ ವರ್ಷಗಳ ಮುಂಚೆ ಜರ್ಮನಿಯ ಮಾರ್ಫಿ­ಯಸ್‌ ಫರ್ಟಿಲಿಟಿ ಸಂಸ್ಥೆಯು ಭಾರತದಲ್ಲಿ ಮಂಬಯಿ, ನಾಗಪುರ, ಬೆಂಗಳೂರು, ಅಹಮದಾಬಾದ್, ಚೆನ್ನೈ, ಹೈದರಾಬಾದ್‌, ವೈಜ್ಹಾಕ್‌, ಕೊಯಂಮತ್ತೂರು, ಪುಣೆ, ನಾಶಿಕ್‌, ಸೋಲಾಪುರ ಮುಂತಾದ ಪಟ್ಟಣ­ಗಳಲ್ಲಿ ಕೇಂದ್ರಗಳನ್ನು ಪ್ರಾರಂಭಿಸ­ಲಾಗಿದೆ ಎಂದು ಹೇಳಿದರು.ಈ ಸಾಧನೆಯಲ್ಲಿ ಡಾ.ಶೈಲೇಶ ಪಾಟೀಲ, ಡಾ.ಮನೀಷಾ ಪಾಟೀಲ, ಅನೀಲ ಹುಲಸೂರಕರ್‌, ಡಾ.­ಮನೀಷಾ, ಭುತಡಾ, ಡಾ.ಪ್ರತಿಭಾ ಪಾಟೀಲ, ಬಿ.ವಿ.ಪಾಟೀಲ, ಸತೀಶ ಗುಲ್ಬರ್ಗ ಶ್ರಮಿಸಿದವರಾಗಿದ್ದಾರೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry