ಭಾನುವಾರ, ಜೂಲೈ 12, 2020
29 °C

ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ವಾಲ್ಮೀಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ಹೆಣ್ಣು ಮಗು ಜನಸಿತು ಎಂದು ಯಾರೂ ನೊಂದುಕೊಳ್ಳಬಾರದು. ಹೆಣ್ಣು ಮಗು ಜನಿಸಿದಾಗ ಸಮಾಜ ಯಾವ ರೀತಿಯಿಂದ ಕಾಣುತ್ತಿದೆ ಎನ್ನುವ ಸತ್ಯವನ್ನು ಅರಿತುಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಹುಟ್ಟಿದ ಹೆಣ್ಣು ಮಗುವಿನಿಂದ ಹಿಡಿದು ಸಮಗ್ರ ಮಹಿಳೆಯರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದನ್ನು ಮಹಿಳೆಯರು ಸದ್ಬಳಕೆ ಮಾಡಿಕೊಂಡು ಸಬಲರಾಗಬೇಕು ಎಂದು ಶಾಸಕ ವಾಲ್ಮೀಕಿ ನಾಯಕ್ ಮಹಿಳೆಯರಿಗೆ ಕರೆ ನೀಡಿದರು.ಶಿಶು ಅಭಿವೃದ್ಧಿ ಯೋಜನೆ ಇಲಾಖೆಯಿಂದ ಬುಧವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭಾಗ್ಯಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಬಾಂಡ್ ಮತ್ತು ತಾಯಂದಿರಿಗೆ ಸೀರೆ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮಗುವಿನ ಸಂರಕ್ಷಣೆ, ಆರ್ಥಿಕ ಸಬಲತೆ, ಉತ್ತಮ ಭವಿಷ್ಯ ರೂಪಿಸಲು ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.ಈ ಹಿಂದಿನ ಯಾವ ಸರ್ಕಾರಗಳು ಮಹಿಳೆಯರ ಪರವಾಗಿ ಜಾರಿಗೆ ತರದಂತ ಯೋಜನೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪನವರ ಜನಪರ ಕಾಳಜಿಯಿಂದ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ದೇಶದ ಯಾವ ರಾಜ್ಯದಲ್ಲೂ ಇರಲಾರದ ಮಹಿಳಾ ಪರವಾದ ಯೋಜನೆಗಳು ರಾಜ್ಯದಲ್ಲಿ ಮಾತ್ರ ಇವೆ ಎಂದು ಬಣ್ಣಿಸಿದರು.ಸರ್ಕಾರ ಯಾವುದೇ ಸಮೀಕ್ಷೆ ಕಾರ್ಯ ಮಾಡುವಾಗ ಜನರು ಸರಿಯಾದ ಮಾಹಿತಿ ನೀಡಬೇಕೆ ಹೊರತು ಅದರ ಬಗ್ಗೆ ಅಸಡ್ಡೆ ತೋರಬಾರದು. ಹಾಗೆ ಮಾಡಿದರೆ ವಿವಿಧ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಭಾಗ್ಯಲಕ್ಷ್ಮೀ ಯೋಜನೆ ಲಾಭ ಪಡೆಯಲು ಯಾರೂ ಹಣ ಕೊಡಬಾರದು. ಒಂದು ವೇಳೆ ಹಣ ಕೇಳಿದರೆ ಅದರ ಬಗ್ಗೆ ನನ್ನ ಗಮನಕ್ಕೆ ತರಬೇಕು. ಇದನ್ನು ಇಲಾಖೆಯ ಅಧಿಕಾರಿ ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು.ಅತಿಥಿ ತಾಪಂ ಪ್ರಭಾರ ಕಾರ್ಯನಿರ್ವಾಹಕ ಐಎಎಸ್ ಅಧಿಕಾರಿ ಕು.ಪಲ್ಲವಿ ಆಕುರಾತಿ ಮಾತನಾಡಿದರು. ಸಿ.ಡಿ.ಪಿ.ಓ ಆರ್.ಎಸ್. ರತ್ನಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣಾಧಿಕಾರಿ ಚವ್ಹಾಣ ಶೆಟ್ಟಿ, ಲೋಕೋಪಯೋಗಿ ಅಧಿಕಾರಿ ಮಹ್ಮದ್ ಇಸ್ಮ್ಾ ಪಟೇಲ್ ಅತಿಥಿಗಳಾಗಿದ್ದರು.ಸರಸ್ವತಿ, ಅಕ್ಕಮಹಾದೇವಿ ಪ್ರಾರ್ಥನೆ ಗೀತೆ ಹಾಡಿದರು. ಸಹಾಯಕ ಶಿಶು ಯೋಜನಾಧಿಕಾರಿ ಭಿಮಸೇನ್ ಚವ್ಹಾಣ್ ಸ್ವಾಗತಿಸಿದರು. ಮಲ್ಲಮ್ಮ ಘಂಟೆ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.