ರಾಜಾಪುರ:1.5ಲಕ್ಷ ಪರಿಹಾರದ ಚೆಕ್ ವಿತರಣೆ

7

ರಾಜಾಪುರ:1.5ಲಕ್ಷ ಪರಿಹಾರದ ಚೆಕ್ ವಿತರಣೆ

Published:
Updated:

ಕಾಳಗಿ: ಸಮೀಪದ ರಾಜಾಪುರ ಗ್ರಾಮದಲ್ಲಿ ಸೆ.8ರಂದು ಸಿಡಿಲು ಬಡಿದು ಮೃತಪಟ್ಟಿದ್ದ ಪದ್ಮಾವತಿ ನಿಂಗಾರೆಡ್ಡಿ ಪೋತಲ್ (50) ಎಂಬುವರ ಮನೆಗೆ ಸೋಮವಾರ ಭೇಟಿ ನೀಡಿದ ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ರೂ. 1.5ಲಕ್ಷ ಪರಿಹಾರ ಧನದ ಚೆಕ್ ನೀಡಿ ಮೃತರ ಕುಟುಂಬದ ಸದಸ್ಯರಿಗೆ  ಸಾಂತ್ವನ ಹೇಳಿದರು.ಸೆ.8ರಂದು ಭಾನುವಾರ ಹೊಲದಲ್ಲಿ ಕಳೆ ತೆಗೆಯಲು ಹೋಗಿದ್ದ ಪದ್ಮಾವತಿ ನಿಂಗಾರೆಡ್ಡಿ ಪೋತಲ್ ಮತ್ತು ಚಂದ್ರಕಲಾ ಚೆನ್ನಾರೆಡ್ಡಿ ಪಟೇಲ್ ಎಂಬುವರಿಬ್ಬರು ಅಂದು ಮಧ್ಯಾಹ್ನ 2.45ರ ವೇಳೆಗೆ ಸುರಿಯುತ್ತಿದ್ದ ಮಳೆಯ ರಕ್ಷಣೆಗಾಗಿ ಬನ್ನಿಗಿಡದ ಕೆಳಗೆ ನಿಂತಿದ್ದರು. ಆಗ ಸಿಡಿಲು ಬಡಿದು ಪದ್ಮಾವತಿ ಸ್ಥಳದಲ್ಲೇ ಮೃತಪಟ್ಟಿದರೆ, ಚಂದ್ರಕಲಾ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ಗುಲ್ಬರ್ಗ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 5ಜನರು ಸಿಡಿಲಿಗೆ ಬಲಿಯಾಗಿದ್ದಾರೆ. ಸಂಬಂಧಿತ ಸಚಿವ ಮತ್ತು ಶಾಸಕರು ಅಂಥ ಕುಟುಂಬಗಳಿಗೆ ಪರಿಹಾರ ಧನ ವಿತರಿಸಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿರುವುದಾಗಿ ಸಚಿವ ಖಮರುಲ್ ಹೇಳಿದರು.ಶಾಸಕ ಡಾ.ಉಮೇಶ ಜಾಧವ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಭಾಗಣ್ಣಗೌಡ ಸಂಕನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೇವ ಗುತ್ತೇದಾರ, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಮುಖಂಡ ವೆಂಕಟರಾವ ಪಾಟೀಲ, ಪರಮೇಶ್ವರ ಭಾವಿ, ಮಾರುತಿ ಭೂತಾಳೆ, ಶಿವಶರಣಪ್ಪ ಕಮಲಾಪುರ, ವಿಶ್ವನಾಥ ವನಮಾಲಿ, ಗೋವಿಂದರೆಡ್ಡಿ ತುಮಕುಂಟಾ, ಸುಧಾಕರ ಪಾಟೀಲ, ಸಂತೋಷ ಚವ್ಹಾಣ, ಕಂದಾಯ ನಿರೀಕ್ಷಕ ಮಾಣಿಕರಾವ ಮೊದಲಾದವರು ಉಪಸ್ಥಿತರಿದ್ದರು.ಭರವಸೆ: ಗಾಯಾಳು ಚಂದ್ರಕಲಾ ಚನ್ನಾರೆಡ್ಡಿ ಪಟೇಲ್ ಎಂಬುವರ ಮನೆಗೆ ಭೇಟಿಕೊಟ್ಟ ಚಿತ್ತಾಪುರ ತಾಲ್ಲೂಕು ತಹಶೀಲ್ದಾರ ಮಲ್ಲೇಶಾ ತಂಗಾ, ಚಂದ್ರಕಲಾ ಅವರಿಗೆ ಧೈರ್ಯ ಹೇಳಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಬಗ್ಗೆ ದಾಖಲೆಗಳನ್ನು ಒದಗಿಸಿ, ತಕ್ಕಮಟ್ಟಿಗೆ ಪರಿಹಾರ ಧನ ನೀಡುವುದಾಗಿ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry