21ರಿಂದ ಖ್ವಾಜಾ ಬಂದೇ ನವಾಜ್ ಉರುಸ್

7

21ರಿಂದ ಖ್ವಾಜಾ ಬಂದೇ ನವಾಜ್ ಉರುಸ್

Published:
Updated:

ಗುಲ್ಬರ್ಗ:ಇಲ್ಲಿನ ಐತಿಹಾಸಿಕ ಧಾರ್ಮಿಕ ಕೇಂದ್ರವಾದ ಖ್ವಾಜಾ ಬಂದೇ ನವಾಜ್ ದರ್ಗಾದಲ್ಲಿ ಸೆ. 21 ರಿಂದ 24ರ ವರೆಗೆ 609ನೇ ‘ಉರುಸ್–ಇ–ಶರೀಫ್’ ಧಾರ್ಮಿಕ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ.‘ನಾಲ್ಕು ದಿನಗಳ ಕಾಲ ನಡೆಯಲಿ ರುವ ಉರುಸ್ ಕಾರ್ಯಕ್ರಮದಲ್ಲಿ ದೇಶ–ವಿದೇಶಗಳ ಮುಸ್ಲಿಮರು ಸೇರಿದಂತೆ ವಿವಿಧ ಧರ್ಮಗಳ ಜನರು ಭಾಗವಹಿಸುವರು. ಸೆ. 22 ರಂದು ನಗರದ ಖ್ವಾಜಾ ಬಜಾರ್‌ನಲ್ಲಿ ಆಯೋಜಿಸಲಾಗಿರುವ ಅಖಿಲ ಭಾರತ ಕೈಗಾರಿಕಾ ವಸ್ತುಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು. ಸಂಸದ ಎನ್‌. ಧರ್ಮಸಿಂಗ್‌, ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಭಾಗವಹಿಸಲಿದ್ದಾರೆ’ ಎಂದು ಕೆಬಿಎನ್ ಟ್ರಸ್ಟ್‌ ಮುಖ್ಯಸ್ಥ ಡಾ. ಸೈಯದ್ ಶಹಾ ಖುಸ್ರೋ ಹುಸೇನಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.‘ದೇಶದ ವಿವಿಧ ಭಾಗಗಳ ಸೂಫಿ ಸಂತರು ಭಾಗವಹಿಸಲಿದ್ದು, ಖವ್ವಾಲಿ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಸೈಯದ್ ಜೆಸುದ್‌ ರಾಜ್ ಖುಸ್ರೋ ಹುಸೇನಿ ಅವರನ್ನು ಉತ್ತರಾಧಿಕಾರಿಯಾಗಿ (ಖಿಲಾಫತ್) ನೇಮಕ ಮಾಡಲಾಗುವುದು. 22 ರಂದು ರಾತ್ರಿ 10.30 ರಿಂದ 3.30ರ ವರೆಗೆ ಖವ್ವಾಲಿ ಗಾಯನ ನಡೆಯಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕ್ರಿಕೆಟ್, ಹಾಕಿ ಮತ್ತು ಫುಟಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ’ ಎಂದರು.ದರ್ಗಾ ಹಜರತ್ ಖ್ವಾಜಾ ಬಂದೇ ನವಾಜ್‌ ಕಾರ್ಯದರ್ಶಿ ಎಂ.ಎ. ಹಬೀಬ್, ಅಖಿಲ ಭಾರತ ಕೈಗಾರಿಕಾ ವಸ್ತುಪ್ರದರ್ಶನ ಸಮಿತಿ ಕಾರ್ಯದರ್ಶಿ ಸೈಯದ್ ಅಮೀರುಲ್ಲಾ ಹುಸೇನಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry