‘ಟೆಂಟ್ ಪೆಗ್ಗಿಂಗ್‌’ ಎಂಬ ಕನಸಿನ ಬೆನ್ನೇರಿ

7

‘ಟೆಂಟ್ ಪೆಗ್ಗಿಂಗ್‌’ ಎಂಬ ಕನಸಿನ ಬೆನ್ನೇರಿ

Published:
Updated:

ಗುಲ್ಬರ್ಗ: ಅರಮನೆಯ ನಗರಿ ಮೈಸೂರಿನ ರಮಣೀಯ ಪರಿಸರದಲ್ಲಿ ಬಿಸಿಲ ನಾಡಿನ ಬಾಲಕನೊಬ್ಬ ‘ಟೆಂಟ್ ಪೆಗ್ಗಿಂಗ್‌’ ಅಭ್ಯಾಸದ ಮೂಲಕ ಗಮನ ಸೆಳೆದ್ದಿದಾನೆ.ಗುಲ್ಬರ್ಗ ಮಟ್ಟಿಗೆ ಈ ಕ್ರೀಡೆ ಹೊಸತು. ಸಾಹಸ ಪ್ರವೃತ್ತಿ ಮೈಗೂಡಿಸಿಕೊಳ್ಳಲು ನೆರವಾಗುವ ಈ ಕ್ರೀಡೆಯನ್ನು ಹಲವು ವರ್ಷಗಳಿಂದ ಅಪ್ಪಾ ಪಬ್ಲಿಕ್‌ ಶಾಲೆಯ ವಿದಾ್ಯರ್ಥಿ ರಾಜೇಂದ್ರ ಅಭ್ಯಾಸ ಮಾಡುತ್ತಿದ್ದಾನೆ. ಮೈಸೂರು ಬಲ್ಲವರಿಗೆ ದಸರಾ ವೇಳೆ ನಡೆಯುವ ಪಂಜಿನ ಕವಾಯಿತು ಪರಿಚಿತ. ನೆರಳು–ಬೆಳಕಿನ ಚಿತ್ತಾರ ಮೂಡಿಸುವ ಈ ಪ್ರದರ್ಶನ ಎಂಥವರನ್ನೂ ಬೆರಗುಗೊಳಿಸು ತ್ತದೆ. ಸಾಹಸಿಗರು ಕುದುರೆ ಏರಿ ಪ್ರದರ್ಶಿಸುವ ಟೆಂಟ್‌ ಪೆಗಿ್ಗಂಗ್‌ ಆಟ ರೋಚಕತೆಗೆ ಸಾಕ್ಷಿ. ನೆಲೆಕ್ಕೆ ಕಚ್ಚಿಕೊಂಡಿರುವ ಪಂಜು ಎತ್ತಿಕೊಂಡು ಸಾಗುವ ಪರಿ ಅಚ್ಚರಿ ಮೂಡಿಸುತ್ತಾರೆ.ಇಂಥಹ ಸಾಹಸ ಕ್ರೀಡೆ ಹಾಗೂ ಕುದುರೆ ಸವಾರಿಯಲ್ಲಿ ಅಪ್ಪಾ ಪಬ್ಲಿಕ್ ಶಾಲೆಯ ರಾಜೇಂದ್ರ ಪಾಟೀಲ ಪರಿಣಿತಿ ಸಾಧಿಸಿದಾ್ದನೆ. ಒಂದು ವರ್ಷ ಕಾಲ ಕುದುರೆ ಸವಾರಿಯ ತರಬೇತಿ ಪಡೆದಿದ್ದಾನೆ. ಕುದುರೆ ಸವಾರಿ ಮೂಲಕ ಆಡುವ ಬಹುತೇಕ ಕ್ರೀಡೆಗಳಲ್ಲಿ ಭಾಗಿಯಾಗಿದ್ದಾನೆ.

5ನೇ ತರಗತಿ ವಿದ್ಯಾರ್ಥಿ ಯಾಗಿರುವ ರಾಜೇಂದ್ರ ಬಹುಮುಖ ಪ್ರತಿಭೆ. ಓದಿನ ಜತೆಗೆ ಕ್ರೀಡಾಸಕ್ತಿ ಅವನ ರೂಢಿ. ಸಾಹಸ ಪ್ರದರ್ಶನ ಈತನಿಗೆ ಅಚ್ಚುಮೆಚ್ಚು, ಈಜು, ಟೆಂಟ್ ಪೆಗ್ಗಿಂಗ್‌ನಲ್ಲಿ ಸಕ್ರಿಯವಾಗಿದ್ದಾನೆ. ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಈಜುಕೊಳದಲ್ಲಿ ಈಚೆಗೆ ಏರ್ಪಡಿಸಿದ್ದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಈಜು ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ರಾಜೇಂದ್ರ ಅತ್ಯುತ್ತಮ ಅಶ್ವರೋಹಿ. ಕುದುರೆ ಮೇಲೆ ಹಲವು ಗಂಟೆ ಕಾಲ ಏಕಾಂಗಿಯಾಗಿ ಸವಾರಿ ಮಾಡಬಲ್ಲ. ಇದಕ್ಕೆ ಪೂರಕವಾದ ತರಬೇತಿ ಸಹ ಪಡೆದಿದ್ದಾನೆ. ಮೈಸೂರಿನ ಜ್ಞಾನ ಸರೋವರ ಅಂತರರಾಷ್ಟ್ರೀಯ ವಸತಿಶಾಲೆಯ ವಿದ್ಯಾರ್ಥಿಯಾಗಿದ್ದಾಗ ಈ ಸವಾರಿ ಶುರುವಾಯಿತು. ಶಾಲೆ ಅಂಗಳದಲಿ್ಲ ದಿನವೂ ಅಭ್ಯಾಸ ಮಾಡುತ್ತಿದ್ದ. ಮೈಸೂರಿನ ಅಶ್ವಾರೋಹಿ ತರಬೇತಿ ಕೇಂದ್ರದ ಜಿಲ್ಲಾ ಕಮಾಂಡೆಂಟ್ ಮರಿಬಾಶೆಟ್ಟಿ ಮಾರ್ಗದರ್ಶನ ದಲಿ್ಲ ಕುದುರೆ ಸವಾರಿ ತಂತ್ರ ಕಲಿತಿದ್ದಾನೆ.ಮೈಸೂರಿನ ಈ ಅಶ್ವಾರೋಹಿ ಸಂಸ್ಥೆಯ ಕುದುರೆಗಳು ಪೊಲೀಸರ ತರಬೇತಿ ನೀಡಲು ಮಾತ್ರ ಮೀಸಲು. ಆದರೆ, ಕುದುರೆಗಳ ಒಟ್ಟು ಸಂಖ್ಯೆಯ ಶೇ 10ರಷ್ಟು ನಾಗರಿಕರಿಗೆ ತರಬೇತಿಗೆ ಬಳಸಲು ಅವಕಾಶವಿದೆ. ಅದರಲ್ಲೂ ಮಕ್ಕಳಿಗೆ ಆದ್ಯತೆ ಇದೆ. ಆ ವಿಭಾಗ ದಲಿ್ಲ ರಾಜೇಂದ್ರ ಅವಕಾಶ ಗಿಟ್ಟಿಸಿಕೊಂಡಿ ದಾ್ದನೆ. ಪ್ರತಿ ಎರಡು ತಿಂಗಳಿಗೊಮ್ಮೆ ಅಲ್ಲಿಗೆ ಹೋಗಿ ತರಬೇತಿ ಪಡೆದು ಮತ್ತೆ ಗುಲ್ಬರ್ಗಕ್ಕೆ ಮರಳುತ್ತಾನೆ. ಬೆಂಗಳೂರು, ಮೈಸೂರಿನ ವಿವಿಧೆಡೆ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾನೆ. ಚಾಮುಂಡಿಬೆಟ್ಟದ ತಪ್ಪಲಿನ ವಿಶಾಲವಾದ ಪೊಲೀಸ್ ತರಬೇತಿ ಮೈದಾನದಲ್ಲಿ ಗಂಟೆಗೆ ಸುಮಾರು 60 ಕಿ.ಮೀ ವೇಗದಲ್ಲಿ ಅರೇಬಿಯನ್ ತಳಿಯ ಕುದುರೆ ಓಡಿಸಬಲ್ಲ ಸಾಮರ್ಥ್ಯ ಈತನಲಿ್ಲದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry