‘ಬೇಕೇ ಬೇಕು ರಂಗಮಂದಿರ ಬೇಕು’

7

‘ಬೇಕೇ ಬೇಕು ರಂಗಮಂದಿರ ಬೇಕು’

Published:
Updated:
‘ಬೇಕೇ ಬೇಕು ರಂಗಮಂದಿರ ಬೇಕು’

ಗುಲ್ಬರ್ಗ: ನಗರದಲ್ಲಿ ಇತರ ಕ್ಷೇತ್ರ ಗಳಂತೆ ಸಾಂಸ್ಕೃತಿಕ ಕ್ಷೇತ್ರವು ಮೂಲ ಸೌಲಭ್ಯ ಕೊರತೆಯಿಂದ ನಲುಗುತ್ತಿದೆ.  ಸಾಂಸ್ಕ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಪೂರಕವಾದ ವ್ಯವಸ್ಥೆ ಇಲ್ಲ. ಸಾಂಸ್ಕ್ಕೃತಿಕ ಚಟುವಟಿಕೆಗಳಿಗೆ ಮುಖ್ಯವಾಗಿ ಬೇಕಿರುವ ರಂಗಮಂದಿರ ಗಳು ಬೆರಳೆಣಿಕೆಯಷ್ಟಿವೆ.ಇಲ್ಲಿ ಇರುವುದೊಂದೇ ಸುಸಜ್ಜಿತ ರಂಗಮಂದಿರ. ಅದು ಎಸ್.ಎಂ ಪಂಡಿತ ರಂಗಮಂದಿರ. ನಗರದ ಹೆಚ್ಚಿನ ರಂಗಮಂದಿರ, ಸಭಾಂಗಣಗ ಳಲ್ಲಿ ಮೂಲ ಸೌಕರ್ಯಗಳು ಇಲ್ಲ. ಹೆಚ್ಚಿನವುಗಳಲಿ್ಲ ಧ್ವನಿ, ಬೆಳಕಿನ ವ್ಯವಸ್ಥೆಗಳನ್ನು ಕಾರ್ಯಕ್ರಮ ಆಯೋಜಕರೇ ಮಾಡಬೇಕು. ಇನ್ನು ಕೆಲವದರಲ್ಲಿ ಪ್ರೇಕ್ಷಕರಿಗೆ ಕುಳಿತು ಕೊಳ್ಳಲು ಆಸನಗಳ ವ್ಯವಸ್ಥೆಯೇ ಇಲ್ಲ.ನೀನಾಸಂನಂತಹ ರಂಗಸಂಸ್ಥೆಗಳು ಇಲ್ಲಿ ಪ್ರತಿವರ್ಷವೂ ರಂಗ ಚಟುವಟಿಕೆ ಗಳನ್ನು ನಡೆಸುತ್ತದೆ. ಇದಕ್ಕಾಗಿ ಅದು ಖಾಸಗಿ ಸಂಸ್ಥೆಗಳ ಸಭಾಂಗಣಗಳನ್ನೆ ಬಳಸಿಕೊಳ್ಳಬೇಕಾದ ಅನಿವಾರ್ಯ ಇದೆ. ಇಲ್ಲಿ ಕೆಲವು ಬಯಲು ರಂಗಮಂದಿರಗಳಿದ್ದರೂ ಅವುಗಳಲ್ಲಿ ಸಾಂಸ್ಕ್ರತಿಕ ಚಟುವಟಿಕೆಗಳು ನಡೆ ಯುವುದೇ ಅಪರೂಪ.ಇಲ್ಲಿನ ರಂಗ ಕಲಾವಿದರಿಗೆ ನಾಟಕಗಳ ರಿಹರ್ಸಲ್ (ರಂಗ ತಾಲೀಮು) ಮಾಡಲು ಸೂಕ್ತ ರಂಗಮಂದಿರಗಳಿಲ್ಲ. ಈ ನಿಟ್ಟಿನಲ್ಲಿ ಕನ್ನಡ ಮತು್ತ ಸಂಸ್ಕೃತಿ ಇಲಾಖೆಯೂ ಯಾವುದೇ ಸಹಕಾರ ನೀಡುತ್ತಿಲ್ಲ ಎಂದು ರಂಗಕರ್ಮಿಗಳು ತಮ್ಮ ಸಂಕಷ್ಟ ತೋಡಿಕೊಳ್ಳುತ್ತಾರೆ.

ಎಸ್.ಎಂ.ಪಂಡಿತ ರಂಗಮಂದಿರ ಬಿಟ್ಟರೆ ಇಲ್ಲಿ ರಂಗಮಂದಿರ ಎಂಬ ಹೆಸರಿನಲ್ಲಿರುವುದು ಜಿಲ್ಲಾ ಸಾಹಿತ್ಯ ಪರಿಷತ್‌ನ ಅಧೀನದಲ್ಲಿರುವ ಭಾಪುಗೌಡ ರಂಗಮಂದಿರ ಮಾತ್ರ. ಇದು ಸುಸಜ್ಜಿತವಲ್ಲದಿದ್ದರೂ ರಂಗ ಕಲಾವಿದರ ಕೈಗೆಟಕುತ್ತದೆ. ಜಿಲ್ಲಾಡಳಿತದ ಅಧೀನದಲ್ಲಿರುವ ಜಿಲ್ಲಾ ಬಾಲಭವನದಲ್ಲೂ ಸಾಂಸ್ಕೃತಿಕ ಚಟುವಟಿಕೆಗಳು, ಮಕ್ಕಳ ಕಾರ್ಯ ಕ್ರಮಗಳು ನಡೆಯುತ್ತಿವೆ. ಆದರೆ ಅಲ್ಲೂ ಸೌಲಭ್ಯ ಕೊರತೆ ಎದ್ದು ಕಾಣುತ್ತಿದೆ.‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಸಿದ್ದಯ್ಯ ಪುರಾಣಿಕ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿರುವ ಚಿಕ್ಕ ಸಭಾಂಗಣವನ್ನೂ ರಂಗ ಚಟುವಟಿಕೆ ಗಳಿಗೆ ಬಳಸಬಹುದು’ ಎನ್ನುತ್ತಾರೆ ರಂಗಕರ್ಮಿಗಳು. ನಗರದ ವಿಶ್ವೇಶ್ವರಯ್ಯ ಸಭಾಂಗಣ ದಲ್ಲೂ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿವೆ. ಇದೀಗ ಸರ್ಕಾರ ಗುಲ್ಬರ್ಗದಲ್ಲೂ ರಂಗಾಯಣ ಸ್ಥಾಪಿ ಸಲು ಹೊರಟಿರುವುದರಿಂದ ಇಲ್ಲಿನ ರಂಗಕರ್ಮಿಗಳು ಖುಷಿಯಾಗಿದ್ದಾರೆ. ಆದರೆ ಇಲ್ಲಿ ಸೂಕ್ತ ಪ್ರೋತ್ಸಾಹ ಕೊರತೆಯಿಂದ ಈ ಭಾಗದಲ್ಲಿ ರಂಗ ಚಟುವಟಿಕೆಗಳು ಕುಂಠಿತಗೊಳ್ಳುತ್ತಿವೆ ಎಂಬುದು ಅವರ ಅಳಲು.ಕೇವಲ ರಂಗ ಚಟುವಟಿಕೆಗಳಷ್ಟೆ ಅಲ್ಲ, ಸಾಹಿತ್ಯಿಕ ಕಾರ್ಯಕ್ರಮಗಳು, ಮಕ್ಕಳ ಕಾರ್ಯಕ್ರಮಗಳಿಗೂ ಇಲ್ಲಿ ಸೂಕ್ತ ಸಭಾಂಗಣಗಳಿಲ್ಲ. ನಗರದ ಕೆಲವು ಖಾಸಗಿ ಸಂಸ್ಥೆಗಳ ಸಭಾಂಗಣಗಳು ಸಾಂಸ್ಕೃತಿಕ ಚಟುವಟಿಗಳಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿರುವುದನ್ನು ಮರೆಯುವಂತಿಲ್ಲ. ನಗರದ ಎನ್.ವಿ ಕಾಲೇಜು ಆವರಣದಲ್ಲಿರುವ ದತ್ತಾತ್ರೇಯ ಹೆರೂರ ರಂಗಮಂದಿರ, ಎಸ್‌.ಬಿ. ಕಾಲೇಜಿನ ರಂಗಮಂದಿ ರದಲ್ಲಿ ರಂಗ ಚಟುವಟಿಕೆಗಳು ನಡೆಯುತ್ತಿರುತ್ತವೆ. ಅಲ್ಲದೆ ನಗರದ ಐಡಿಯಲ್‌ ಫೈನ್‌ ಆರ್ಟ್ಸ್‌ ಸೊಸೈಟಿಯ ಎಂ.ಎಂ.ಕೆ. ದೃಶ್ಯಕಲಾ ಕಾಲೇಜಿನ ಆವರಣದಲ್ಲಿರುವ ವೇದಿಕೆಯಲ್ಲೂ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry