ಸೋಮವಾರ, ಜೂಲೈ 13, 2020
29 °C

ದರ ಏರಿಕೆ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅಗತ್ಯ ವಸ್ತುಗಳ ಬೆಲೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಕನ್ನಡ ನಾಡು ವೇದಿಕೆ ಕಾರ್ಯಕರ್ತರು ಎಮ್ಮೆ ಮೇಲೆ ಕುಳಿತು ಬುಧವಾರ ಇಲ್ಲಿ ವಿಶೇಷ ಪ್ರತಿಭಟನೆ ನಡೆಸಿದರು.ದುಬಾರಿ ಆಹಾರದ ಕೊರತೆಯಿಂದಾಗಿ ಬಡವರು ಸಾವಿಗೀಡಾಗುವ ಸಾಧ್ಯತೆ ಹೆಚ್ಚಾಗಿದೆ. ಮಧ್ಯಮ ವರ್ಗದವರು ಸಾಕಷ್ಟು ಬವಣೆ ಪಡುತ್ತಿದ್ದಾರೆ. ಒಂದೇ ತಿಂಗಳಲ್ಲಿ ಎರಡು ಸಲ ಪೆಟ್ರೊಲ್, ಡೀಸೆಲ್ ದರ ಏರಿಕೆ ಮಾಡಿರುವುದು ಖಂಡನೀಯ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡು ಜನಸಾಮಾನ್ಯರನ್ನು ಕಡೆಗಣಿಸಿದ್ದು, ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.ಈಗಲಾದರೂ ಸರ್ಕಾರಗಳು ಬಡವರ, ಮಧ್ಯಮವರ್ಗದವರ ರಕ್ಷಣೆಗೆ ಮುಂದಾಗಿ ಅಗತ್ಯ ವಸ್ತುಗಳ ಬೆಲೆಗಳಿಗೆ ಕಡಿವಾಣ ಹಾಕಬೇಕು ಎಂದು ವೇದಿಕೆ ಒತ್ತಾಯಿಸಿದೆ.ವೇದಿಕೆಯ ರಾಜ್ಯ ಅಧ್ಯಕ್ಷ      ನಾಗರಾಜ ಎಸ್.ಸ್ವಾದಿ, ನಗರ ಅಧ್ಯಕ್ಷ ಬಿ.ಜಯಸಿಂಗ್, ರಾಜಶೇಖರ ಶೀಲವಂತ, ಅನಿಲಕುಮಾರ ಕಲಶೆಟ್ಟಿ, ಹಣಮಂತ ವಿ. ಪೂಜಾರಿ, ಉದಯಕುಮಾರ ಜೇವರ್ಗಿ, ಮಹೇಶ ಹುಬ್ಬಳ್ಳಿ, ಪ್ರಕಾಶ ದೇವಣಿ, ಚಂದ್ರಕಾಂತ ಮೂಲಗೆ, ಅಣ್ಣಾರಾವ್ ಎಸ್. ಪಾಟೀಲ, ಶಂಕರ ಎಂ., ದತ್ತಾತ್ರೇಯ ಕಾಂಬಳೆ ಮತ್ತು ಎಂ. ಬಸವರಾಜ್ ಇನ್ನಿತರರು ಇದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.