ಕೇಂದ್ರೀಯ ವಿದ್ಯಾಲಯ: ರಸ್ತೆ ತಡೆದು ಪಾಲಕರ ಆಕ್ರೋಶ

7

ಕೇಂದ್ರೀಯ ವಿದ್ಯಾಲಯ: ರಸ್ತೆ ತಡೆದು ಪಾಲಕರ ಆಕ್ರೋಶ

Published:
Updated:

ಗುಲ್ಬರ್ಗ: ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರ ವರ್ತನೆ ಹಾಗೂ ಪಾಲಕರ ಸಭೆಯನ್ನು ದಿಢೀರ್ ರದ್ದುಗೊಳಿಸಿರುವ ಕ್ರಮವನ್ನು ಖಂಡಿಸಿ ನೂರಾರು ಪೋಷಕರು ನಗರ ಹೊರ­ವಲಯದ ಕೇಂದ್ರೀಯ ವಿದ್ಯಾಲಯ ಸಮೀಪದ ಗುಲ್ಬರ್ಗ–ಜೇವರ್ಗಿ ರಸ್ತೆ ತಡೆದು ಭಾನುವಾರ ಪ್ರತಿಭಟನೆ ನಡೆಸಿದರು.‘ವಿದ್ಯಾಲಯದಲ್ಲಿ ಸೆ. 22ರಂದು ಪಾಲಕರ ಸಭೆ ಇದೆ ಎಂದು ಈ ಮೊದಲು ತಿಳಿಸಿದ್ದರು. ಅದರಂತೆ ಸಭೆ­ಯಲ್ಲಿ ಪಾಲ್ಗೊಳ್ಳಲು ಆಗಮಿಸಿದರೆ ಸಭೆ­ಯನು್ನ ರದ್ದುಗೊಳಿಸಲಾಗಿದೆ ಎಂದು ಹೇಳಿದ ಪ್ರಾಂಶುಪಾಲರು ಯಾರನ್ನೂ ವಿದ್ಯಾಲಯದ ಆವರಣದ ಒಳಗೆ ಬಿಡದೇ ಗೇಟ್ ಬಂದ್ ಮಾಡಿದರು.ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಜಿಲ್ಲಾಧಿಕಾರಿ ಸಭೆ ನಡೆಸುವುದು ಬೇಡ ಎಂದು ಹೇಳಿದ್ದಾರೆ ಎಂಬ ಸಬೂಬು ನೀಡಿದರು. ಇದರಿಂದ ಆಕ್ರೋಶ­ಗೊಂಡ ರಸ್ತೆ ತಡೆ ಮಾಡಬೇಕಾ­ಯಿತು’ ಎಂದು ಪೋಷಕರು ಹೇಳಿದರು.‘ಪ್ರಾಂಶುಪಾಲರ ವರ್ತನೆ ಸರಿಯಿಲ್ಲ. ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿದ್ದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಇದನ್ನು ಸಮರ್ಥಿಸಿಕೊಳ್ಳಲು ಮುಂದಾಗಿರುವ ಪ್ರಾಂಶುಪಾಲರು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಂದ ನಕಲು ಮಾಡಿಸುತ್ತಿದ್ದಾರೆ.ಕೂಡಲೇ ಕಾಯಂ ಶಿಕ್ಷಕರನ್ನು ನೇಮಕ ಮಾಡಬೇಕು. ಪ್ರಾಂಶುಪಾಲ­ರನ್ನು ಇಲ್ಲಿಂದ ವರ್ಗಾವಣೆ ಮಾಡ­ಬೇಕು’ ಎಂದು ಪೋಷಕರು ಒತ್ತಾಯಿಸಿದರು.ಸ್ಥಳಕ್ಕೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಹರ್ಷಾಶೆಟ್ಟಿ, ಪೋಷಕರ ಮನವಿ ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.ಸಂಚಾರ ಅಸ್ತವ್ಯಸ್ಥ: ಗುಲ್ಬರ್ಗ–ಜೇವರ್ಗಿ ರಸ್ತೆ ತಡೆ ನಡೆಸಿದ್ದರಿಂದ ಸುಮಾರು ಅರ್ಧ ಗಂಟೆ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು. ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry