ಅ.2ರಂದು ಬೃಹತ್ ಸತ್ಯಾಗ್ರಹ: ‘ಅಕ್ರಮ ಮದ್ಯ ತಡೆಗೆ ಒತ್ತಾಯ’

7

ಅ.2ರಂದು ಬೃಹತ್ ಸತ್ಯಾಗ್ರಹ: ‘ಅಕ್ರಮ ಮದ್ಯ ತಡೆಗೆ ಒತ್ತಾಯ’

Published:
Updated:

ಆಳಂದ: ’ತಾಲ್ಲೂಕಿನಲ್ಲಿ ನಿರಂತರವಾಗಿ ಅಕ್ರಮ ಮದ್ಯ ಮಾರಾಟ ದಂಧೆ ನಡೆಯುತ್ತಿದೆ. ಅದನ್ನು ತಡೆಗಟ್ಟಲು ಜಿಲ್ಲಾ ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಶಾಸಕ ಬಿ.ಆರ್.ಪಾಟೀಲ ಒತ್ತಾಯಿಸಿದ್ದಾರೆ.’ಇಲ್ಲದಿದ್ದರೆ ಬರುವ ಗಾಂಧಿ ಜಯಂತಿ ದಿನದಂದು ಸಾರ್ವಜನಿಕರೊಂದಿಗೆ ಸೇರಿ ತಹಶೀಲ್ದಾರ ಕಚೇರಿ ಎದುರು ಬೃಹತ್ ಸತ್ಯಾಗ್ರಹ ಕೈಗೊಳ್ಳಲಾಗುವುದು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.’ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಪತ್ರ ಬರೆದಿರುವೆ. ಚುನಾವಣೆಯಲ್ಲಿ ಹೆಚ್ಚಿನ ಜನತೆ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಲು ವಿನಂತಿಸಿ ನನ್ನನ್ನು ಬೆಂಬಲಿಸಿ ಮತ ನೀಡಿದ್ದಾರೆ. ಗೆದ್ದ ನಂತರ ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ತಹಶೀಲ್ದಾರ ಕಚೇರಿಯಲ್ಲಿ ಸಭೆ ನಡೆಸಲಾಗಿತ್ತು’ ಎಂದು ಶಾಸಕರು ವಿವರಿಸಿದರು.’ಜುಲೈ 8ರವರೆಗೆ ಕ್ರಮಕೈಗೊಳ್ಳುವ ಭರವಸೆ ನೀಡಿದ ಅಧಿಕಾರಿಗಳು ಅಂದು ತಾಲ್ಲೂಕಿನೆಲ್ಲಡೆ ದಾಳಿ ನಡೆಸಿದರು. ಅದರಿಂದ ಸ್ವಲ್ಪ ಮಟ್ಟಿಗೆ ಭಯ ಮೂಡಿ ಮಾರಾಟಕ್ಕೆ  ಕಡಿವಾಣ ಬಿದ್ದಿತ್ತು. ಇದನ್ನು ಸಹಿಸದ ಇಲ್ಲಿಯ ಮದ್ಯದ ದೊರೆಗಳು ಸವಾಲು ಹಾಕಿ ಮತ್ತೇ ಮಾರಾಟಕ್ಕೆ ಕುಮ್ಮುಕ್ಕು ನೀಡುತ್ತಿದ್ದಾರೆ. ಇದರಲ್ಲಿ ಹೆಚ್ಚಿನ ಲಾಭಗಳಿಸುವ ಹುನ್ನಾರ ಅಡಗಿದೆ’ ಎಂದು ಬಿ.ಆರ್.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.’ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದಾಗ ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಳ್ಳು ಭರವಸೆ ಸಚಿವ ಜಾರಕಿಹೊಳೆ ನೀಡಿದ್ದಾರೆ. ಅಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತಸಿಂಗ್ ಹಾಗೂ ಅಬಕಾರಿ ಅಧಿಕ್ಷಿಕರ ಇದನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳುವ ಇಂಗಿತ ವ್ಕಕ್ತಪಡಿಸಿದ್ದಾರೆ. ಆದರೆ ಮಾಜಿ ಶಾಸಕ ಸುಭಾಷ ಗುತ್ತೇದಾರ ಪ್ರೇರಣೆ ಮತ್ತು ಜಿದ್ದಿನಿಂದ ಅಕ್ರಮ ಮದ್ಯ ಮಾರಾಟ ನಡೆದಿದೆ’ ಎಂದು ಪಾಟೀಲ ಆರೋಪಿಸಿದರು.ಅಕ್ರಮ ಮದ್ಯ ಮಾರಾಟ ತಡೆಯದಿದ್ದರೆ ಅಕ್ಟೋಬರ್ 2ರಂದು ಸಾರ್ವಜನಿಕರೊಂದಿಗೆ ಸೇರಿ ಬೃಹತ್ ಪ್ರತಿಭಟನೆ ಕೈಗೊಳ್ಳುವ ಎಚ್ಚರಿಕೆಯನ್ನು ಶಾಸಕ ಪಾಟೀಲ ನೀಡಿದರು. ಮುಖಂಡ ವಿಠಲರಾವ ಪಾಟೀಲ, ಶಿವಪುತ್ತಪ್ಪ ಪಾಟೀಲ ಮುನ್ನೋಳ್ಳಿ ಇದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry