ಅರೆಕಾಸಿನ ಮಜ್ಜಿಗೆಯಾದ ಅತಿಥಿ ಶಿಕ್ಷಕರ ನೇಮಕ

7
ಕೆರಳ್ಳಿ ಸರ್ಕಾರಿ ಶಾಲೆ, 268 ಮಕ್ಕಳಿಗೆ ಇಬ್ಬರು ಶಿಕ್ಷಕರು!

ಅರೆಕಾಸಿನ ಮಜ್ಜಿಗೆಯಾದ ಅತಿಥಿ ಶಿಕ್ಷಕರ ನೇಮಕ

Published:
Updated:

ಚಿಂಚೋಳಿ: ತಾಲ್ಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಒಟ್ಟು 570 ಹುದ್ದೆಗಳು ಖಾಲಿ ಇವೆ. ಇದರಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರದ್ದು ಸಿಂಹಪಾಲು. 12 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. 50ಕ್ಕೂ ಹೆಚ್ಚು ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ.ಶಿಕ್ಷಕರಿಲ್ಲದೇ ತೊಂದರೆ ಎದುರಿಸುತ್ತಿರುವ ಮಕ್ಕಳ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ನಿತ್ಯ ಎಡತಾಕುತ್ತಿದ್ದಾರೆ. ಈ ಮಧ್ಯ ಶಿಕ್ಷಣ ಇಲಾಖೆ ಅಧಿಕಾರಿಗಳು ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಸ್ವೀಕರಿಸಿ ಈಗ ಮುಖ್ಯಗುರುಗಳಿಗೆ ನೇಮಕಾತಿಯ ಹೊಣೆ ಹೊರಿಸಿದ್ದಾರೆ.’500 ಹುದ್ದೆ ಖಾಲಿ ಇದ್ದರೆ ಕೇವಲ 160 ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು, ಸರ್ಕಾರಿ ಶಾಲೆ ಮಕ್ಕಳ ಬಗ್ಗೆ ಸರ್ಕಾರ ಹೊಂದಿರುವ ಕಾಳಜಿಗೆ ಸಾಕ್ಷಿ’ ಎಂದು ಬಹುಜನ ಸಮಾಜ ಪಕ್ಷದ ಶರಣಪ್ಪ ಮಾಳಗೆ ವ್ಯಂಗ್ಯವಾಡಿದ್ದಾರೆ.’ಕನಿಷ್ಠ 400 ಅತಿಥಿ ಶಿಕ್ಷಕರನ್ನು ನೀಡಿದರೆ ಸಮಸ್ಯೆ ಸುಧಾರಿಸಬಹುದಿತ್ತು ಆದರೆ ಕೇವಲ 160 ಅತಿಥಿ ಶಿಕ್ಷಕರನ್ನು ನೀಡಿದ್ದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಯಂತಾಗಿದೆ’ ಎಂದು ತಾಲ್ಲೂಕು ಹೈದರಾಬಾದ ಕರ್ನಾಟಕ ಯುವ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಸುಲೇಪೇಟ ಹೇಳುತ್ತಾರೆ.ತಾಲ್ಲೂಕಿನ ಕೆರಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 268 ಮಕ್ಕಳಿದ್ದಾರೆ. ಇವರಿಗೆ ಪಾಠ ಬೋಧಿಸಲು ಕೇವಲ ಇಬ್ಬರು ಶಿಕ್ಷಕರು ಇದ್ದಾರೆ. ಒಬ್ಬರು ಸಭೆ, ಸಮಾರಂಭ, ತರಬೇತಿ ಎಂದು ಶಾಲೆಯಿಂದ ಹೊರ ಹೋದರೆ ಒಬ್ಬರೇ ಶಿಕ್ಷಕರು 7 ತರಗತಿ ನಿರ್ವಹಿಸಬೇಕಾಗುತ್ತದೆ. ಹೀಗಾಗಿ ನಮಗೆ ಇನ್ನೂ 5 ಮಂದಿ ಶಿಕ್ಷಕರನ್ನು ನೀಡುವಂತೆ ಕೆರಳ್ಳಿ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದರು.ಅಣವೀರಪ್ಪ ಸೂರವಾರ್, ಮಕ್ಬೂಲ್‌ ಸಾಬ್‌, ಬಸವರಾಜ ಸುಲೇ ಪೇಟ, ಸೋಮಶೇಖರ, ಸಂಗಾ ರೆಡ್ಡಿ, ಖಲೀಲಸಾಬ್‌, ಸಂಗಣ್ಣ ನಾಗೂರು, ರಾಜಕುಮಾರ ಮುನ್ನೂರು, ಮುನೀರ್‌ ಸಾಬ್‌, ಖಾಸಿಂ ಸಾಬ್‌ ಇದ್ದರು.‘ಅತಿಥಿ ಶಿಕ್ಷಕ ನೇಮಕದ ಜವಾಬ್ದಾರಿ ಎಸ್‌ಡಿಎಂಸಿ ಹಾಗೂ ಮುಖ್ಯ ಗುರುಗಳಿಗೆ ನೀಡಲಾಗಿದೆ. ಇಬ್ಬರನ್ನು ನೀವು ನೇಮಕ ಮಾಡಿಕೊಳ್ಳಿ. 3 ಜನ ಹೆಚ್ಚುವರಿ ಶಿಕ್ಷಕರನ್ನು ನಿಯೋಜನೆ ಮೇರೆಗೆ ಬೇರೆ ಶಾಲೆಯಿಂದ ಕಳು ಹಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಎಸ್‌. ನಾಟಿಕಾರ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry