ಬಿಸಿಲನಾಡಿನ ‘ಶ್ರದ್ಧಾ’ಯೋಗಾಯೋಗ

7

ಬಿಸಿಲನಾಡಿನ ‘ಶ್ರದ್ಧಾ’ಯೋಗಾಯೋಗ

Published:
Updated:
ಬಿಸಿಲನಾಡಿನ ‘ಶ್ರದ್ಧಾ’ಯೋಗಾಯೋಗ

ಗುಲ್ಬರ್ಗ: ಬಿಸಿಲನಾಡಿನಲ್ಲಿ ಪ್ರತಿಭೆಗಳಿಗೆ ಬರವಿಲ್ಲ. ಕ್ರೀಡೆ, ಸಾಂಸ್ಕೃತಿಕ ರಂಗದಲ್ಲಿ ಸಾಧನೆ ಮೆರೆಯುತ್ತಿರುವ ಹಲವರು ಇಲ್ಲಿದ್ದಾರೆ. ಸರ್ವಜ್ಞ ಚಿಣ್ಣರ ಲೋಕ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಶ್ರದ್ಧಾ ಅಂಥ ಸಾಧಕರ ಸಾಲಿಗೆ ಸೇರುತ್ತಾರೆ.ಹಳ್ಳಿಗಾಡಿನಿಂದ ಬಂದಿರುವ ಶ್ರದ್ಧಾ ಅತ್ಯುತ್ತಮ ಯೋಗಪಟು. ತಾಲ್ಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹತ್ತಾರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 200ಕ್ಕೂ ಹೆಚ್ಚು ಯೋಗದ ಆಸನಗಳನ್ನು ಸರಾಗವಾಗಿ ಪ್ರದರ್ಶಿಸಬಲ್ಲಳು. ಹಲವು ಸಾಂಸ್ಕೃತಿಕಕಾರ್ಯಕ್ರಮಗಳು ಈಕೆಯ ಯೋಗ ಪ್ರದರ್ಶನದಿಂದ ಕಳೆಗಟ್ಟಿವೆ. ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರು ಶ್ರದಾ್ಧಳ ಪ್ರತಿಭೆ ಕಂಡು ಬೆನ್ನುತಟ್ಟಿದ್ದಾರೆ.ಆಗಸ್ಟ್ 15ರಂದು ನಡೆದ ಸ್ವಾತಂತ್ರೋತ್ಸವ ಸಮಾರಂಭ ಶ್ರದ್ಧಾ ಪಾಲಿಗೆ ಮರೆಯಲಾಗದ ದಿನ. ಅಂದು ಜಿಲ್ಲಾ ಉಸ್ತುವಾರಿ ಸಚಿವರು, ಪೊಲೀಸ್ ಅಧಿಕಾರಿಗಳು ಹಾಗೂ ಗುಲ್ಬರ್ಗದ ನಾಗರಿಕರ ಮುಂದೆ ಯೋಗಾಸನ ಪ್ರದರ್ಶಿಸುವ ಯೋಗ ಒದಗಿತ್ತು. ಪ್ರದರ್ಶನ ಮೆಚ್ಚಿದ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರು 5,000 ರೂಪಾಯಿ ನಗದು ಪುರಸ್ಕಾರ ನೀಡಿ ಗೌರವಿಸಿದರು.ಶ್ರದ್ಧಾ  ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ (ಕೆ) ಸಮೀಪದ ನೇಳಕೊಡ ಗಾ್ರಮದವರು. ಪ್ರಸ್ತುತ ಗುಲ್ಬರ್ಗದ ಸರ್ವಜ್ಞ ಶಾಲೆಯ ವಿದ್ಯಾರ್ಥಿನಿ. ಶಾಲಾ ಹಂತದಲ್ಲಿಯೇ ಈಕೆಗೆ ಯೋಗ ಕಲಿಕೆಯತ್ತ ಆಸಕ್ತಿ ಬೆಳೆಯಿತು. ಈ ಹವ್ಯಾಸಕ್ಕೆ ತಂದೆ ಶರಣಬಸಪ್ಪ, ತಾಯಿ ಜ್ಯೋತಿ ಬೆಂಬಲವಾಗಿ ನಿಂತರು. ಪೋಷಕರ ಸಹಕಾರ, ಉತ್ತಮ ಮಾರ್ಗದರ್ಶಕರಿಂದ ಯೋಗದ ಹಲವು ಆಸನಗಳನ್ನು ಅಭ್ಯಾಸ ಮಾಡಿದರು. ಯಾವುದೇ ಜಿಲ್ಲೆಯಲ್ಲಿ ಸ್ಪರ್ಧೆ ನಡೆದರೂ ಅಲ್ಲಿ ಭಾಗವಹಿಸುತ್ತಾರೆ. ಇದಕ್ಕೆ ತಂದೆ ಶರಣಬಸಪ್ಪ ಬೆಂಬಲಿಸಿ ಆತ್ಮವಿಶ್ವಾಸ ತುಂಬುತ್ತಾರೆ.ಹುಮನಾಬಾದ್ ಶಕುಂತಲಾ ಪಾಟೀಲ ವಸತಿಶಾಲೆಯಲ್ಲಿ ನಡೆದ ಗುಲ್ಬರ್ಗ ವಿಭಾಗ ಮಟ್ಟದ ಯೋಗ ಸ್ಪರ್ಧೆಯಲ್ಲಿ ವೀರಾಗ್ರಣಿ ಪ್ರಶಸ್ತಿ, ಕಾರವಾರದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ಏಕೈಕ ಪ್ರತಿನಿಧಿಯಾಗಿ ಭಾಗಿಯಾಗಿದ್ದು ಈಕೆಯ ಆರಂಭದ ದಿನಗಳ ಹೆಗ್ಗಳಿಕೆ. ಕಳೆದ ವರ್ಷ ಮೈಸೂರು ದಸಾರಾ ಮಹೋತ್ಸವ

ಅಂಗವಾಗಿ ಅರಮನೆ ಆವರಣದಲ್ಲಿ ನಡೆದ ‘ಯೋಗ ದಸರಾ’ ಪ್ರದರ್ಶನದಲ್ಲಿ ಭಾಗವಹಿಸಿದ್ದು ಆತ್ಮವಿಶ್ವಾಸ ಇಮ್ಮಡಿಗೊಳಿಸಿದೆ. ದಸರಾದಲ್ಲಿ ಪಾಲ್ಗೊಂಡಿದ್ದ ದೇಶ–- ವಿದೇಶದ ಖ್ಯಾತ ಯೋಗಪಟುಗಳ ಮುಂದೆ ಪ್ರದರ್ಶಿಸಿದ್ದು ಈಕೆಗೆ ಹೆಮ್ಮೆ ಎನಿಸಿದೆ.ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಜನವರಿ ತಿಂಗಳಲ್ಲಿ ನವದೆಹಲಿಯಲ್ಲಿ ಎರಡು ವಾರಕಾಲ ನಡೆದ 14 ವರ್ಷದೊಳಗಿನ ಬಾಲಕಿಯರ ಯೋಗ ಸ್ಪರ್ಧೆಯಲ್ಲಿ ತೃತೀಯ ಸ್ಥಾನದ ಜತೆಗೆ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. ಇದು ರಾಷ್ಟ್ರಮಟ್ಟದಲ್ಲಿ ಶ್ರದ್ಧಾ ಮಾಡಿದ ದೊಡ್ಡ ಸಾಧನೆ. ಬಾಬಾ ರಾಮದೇವ ಅವರ ಯೋಗ ಶಿಬಿರ, ಗಣರಾಜ್ಯೋತ್ಸವ ಪರೇಡ್‌, ಕಲಾಶ್ರೀ, ಕಲಾ ಉತ್ಸವ, ಪ್ರತಿಭಾ ಕಾರಂಜಿ ಸ್ಪರ್ಧೆಗಳು ಉತ್ತಮ ವೇದಿಕೆ ಒದಗಿಸಿವೆ.ಓದು, ಯೋಗ ಅಭ್ಯಾಸ ಎರಡನ್ನೂ ಶ್ರದ್ಧಾ ಸರಿದೂಗಿಸಿಕೊಂಡು ಸಾಗುತ್ತಿದ್ದಾರೆ. ಹುಮನಾಬಾದ್‌ನ ಭಗತ್‌ಸಿಂಗ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೇ 97 ಫಲಿತಾಂಶದೊಂದಿಗೆ ಏಳನೇ ತರಗತಿ ತೇರ್ಗಡೆಯಾಗಿದ್ದಾರೆ. ಓದಿನೊಂದಿಗೆ ನಿತ್ಯವೂ ಬೆಳಗಿನ ಜಾವ 4 ಗಂಟೆಗೆ ಎದ್ದು ಯೋಗಾಭ್ಯಾಸ ಮಾಡುತ್ತಾರೆ. ಯೋಗಾಭ್ಯಾಸ ಎಂದಿಗೂ ತಪ್ಪಿಸಿಲ್ಲ. ನಿರಂತರ ಪರಿಶ್ರಮ ಸಾಧನೆಯ ಗುಟ್ಟು ಎಂಬುದು ಅನುಭವದ ನುಡಿ. ಈ ಮಟ್ಟಕ್ಕೆ ಬೆಳೆಯಲು ಕಾರಣರಾದ ಹೆತ್ತವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ.ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗೆ ಅಣಿಗೊಳಿ ಸಿದ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಅನಂತರೆಡ್ಡಿ ಭಗತ್‌ಸಿಂಗ್ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಸಿದ್ದಪ್ಪ ಹೆಗಣೆ, ಸಂಸ್ಥೆ ಕಾರ್ಯದರ್ಶಿ ಅಂಕುಶ ಗೋಖಲೆ, ಪ್ರಾಂಶುಪಾಲ ರಾದ ಗೀತಾ ಚಾವಾ್ಹಾಣ ಅವರ ಪ್ರೋತ್ಸಾಹದಿಂದ ಆರಂಭದ ದಿನಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು ಎಂದು ನೆನಪಿಸಿ ಕೊಳ್ಳುತ್ತಾರೆ.

‘ಶ್ರದ್ಧಾ 6ನೇ ತರಗತಿಯಿಂದಲೇ ಯೋಗಾಭ್ಯಾಸ ಆರಂಭಿಸಿದ್ದಾಳೆ. ರಾಜ್ಯ ಮಟ್ಟದ ಬಹುತೇಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದು, ಇದಕ್ಕೆ ಆಕೆಯ ಪರಿಶ್ರಮ ಕಾರಣ. ನಾವು ಬೆಂಬಲ ಮಾತ್ರ ನೀಡುತ್ತಿದ್ದೇವೆ’ ಎನ್ನುತ್ತಾರೆ ಶ್ರದ್ಧಾ

ತಾಯಿ ಜ್ಯೋತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry