ಗಮನ ಸೆಳೆದ ಬುಡ್ಗ ಜಂಗಮ ಕಲಾವಿದರು

7

ಗಮನ ಸೆಳೆದ ಬುಡ್ಗ ಜಂಗಮ ಕಲಾವಿದರು

Published:
Updated:
ಗಮನ ಸೆಳೆದ ಬುಡ್ಗ ಜಂಗಮ ಕಲಾವಿದರು

ಚಿತ್ತಾಪುರ: ಗುಲ್ಬರ್ಗದಲ್ಲಿ ಶನಿವಾರ `ಗುಲ್ಬರ್ಗ ಉತ್ಸವ~ದ ಮೆರವಣಿಗೆಯಲ್ಲಿ ಕರ್ನಾಟಕ ರಾಜ್ಯ ಬುಡ್ಗ ಜಂಗಮ  ಕ್ಷೇಮಾಭಿವೃದ್ಧಿ ಸಂಘ (ಪ.ಜಾ) ತಾಲ್ಲೂಕು ಘಟಕದ ಪದಾಧಿಕಾರಿ ಹಾಗೂ ಬುಡ್ಗ ಜಂಗಮ  ಕಲಾವಿದರು ಪೌರಾಣಿಕ ವೇಷಧಾರಿಗಳಾಗಿ ಕಲೆ ಪ್ರದರ್ಶಿಸಿ ಸಾರ್ವಜನಿಕರ ಗಮನ ಸೆಳೆದರು.ಮಹಾದೇವಪ್ಪ ರಾಮತೀರ್ಥ-ರಾಮನ ಪಾತ್ರ, ಭೀಮರಾಯ-ಸೀತಾ ಪಾತ್ರ, ನೀಲಕಂಠಪ್ಪ ರಾಮತೀರ್ಥ-ಲಕ್ಷ್ಮಣನ ಪಾತ್ರ, ದೇವಿಂದ್ರಪ್ಪ ಹಣ್ಣಿಕೇರಾ-ಹನುಮಾನ ಪಾತ್ರ, ಶರಣಬಸವ ಕುಂಬಾರಹಳ್ಳಿ-ಅಂಗದನ ಪಾತ್ರ, ಬಸಲಿಂಗಪ್ಪ ಚಿತ್ತಾಪುರ-ರಾವಣನ ಪಾತ್ರ, ಬಸ್ಸಪ್ಪ-ಶೂರ್ಪನಕಿ ಪಾತ್ರದ ವೇಷಗಳನ್ನು ತೊಟ್ಟು ತಬಲಾ, ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕಲೆ ಪ್ರದರ್ಶಿಸಿದರು.ಸಂಘದ ಅಧ್ಯಕ್ಷ ಮಾರುತಿ ಎಂ.ಆರ್‌ ತಬಲಾ ವಾದನ ಮಾಡಿದರು. ಶಿವರಾಜ ಚಿತ್ತಾಪುರಹಾರ್ಮೋನಿಯಂ ನುಡಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪಂಡಿತ್‌ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು. ಯಲ್ಲಪ್ಪ ಹಣ್ಣಿಕೇರಾ ಕಲಾವಿದರಿಗೆ ಸಾಥ್‌ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry