ಬ್ಯಾಂಕ್‌, ಅಂಚೆ ಕಚೇರಿಗಳಲ್ಲಿ ಆಧಾರ್‌ ಕೇಂದ್ರ

7
ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಐ) ಸಿಇಒ ಅಜಯ್‌ ಭೂಷಣ್ ಪಾಂಡೆ

ಬ್ಯಾಂಕ್‌, ಅಂಚೆ ಕಚೇರಿಗಳಲ್ಲಿ ಆಧಾರ್‌ ಕೇಂದ್ರ

Published:
Updated:
ಆಧಾರ್

ನವದಹೆಲಿ: ಬ್ಯಾಂಕ್‌ ಶಾಖೆಗಳು ಮತ್ತು ಅಂಚೆ ಕಚೇರಿಗಳಲ್ಲಿ 18,000 ಆಧಾರ್‌ ನೋಂದಣಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಐ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್‌ ಭೂಷಣ್‌ ಪಾಂಡೆ ತಿಳಿಸಿದ್ದಾರೆ.

ಪ್ರಾಧಿಕಾರವು ಕಳೆದ ವರ್ಷದ ಜುಲೈನಲ್ಲಿ 10 ಶಾಖೆಗಳಿಗೆ ತಲಾ ಒಂದು ಆಧಾರ್‌ ಕೇಂದ್ರ ಸ್ಥಾಪಿಸುವಂತೆ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಕೇಳಿಕೊಂಡಿತ್ತು. ಒಂದೇ ವರ್ಷದಲ್ಲಿ ಬ್ಯಾಂಕ್‌ಗಳು ಮತ್ತು ಅಂಚೆ ಇಲಾಖೆ ತಮ್ಮ ಶಾಖೆಗಳ ವ್ಯಾಪ್ತಿಯಲ್ಲಿ ಇಷ್ಟೊಂದು ಸಂಖ್ಯೆಯ ಆಧಾರ್‌ ನೋಂದಣಿ ಕೇಂದ್ರ ಮತ್ತು ಬಯೊಮೆಟ್ರಿಕ್‌ ಗುರುತಿನ ಚೀಟಿ ಪರಿಷ್ಕರಣೆಯ ಕೇಂದ್ರಗಳನ್ನು ಆರಂಭಿಸಿವೆ. ಉಳಿದ ಕಡೆಗಳಲ್ಲೂ ಸದ್ಯದಲ್ಲೇ ಕೇಂದ್ರಗಳು ಆರಂಭವಾಗಲಿವೆ ಎಂದರು.

ಆಧಾರ್‌ ಕೇಂದ್ರಗಳನ್ನು ಆರಂಭಿಸುವ ಗುರಿ ತಲುಪಲು ಕಾಲಮಿತಿ ನೀಡಲಾಗಿತ್ತು ಎನ್ನುವುದನ್ನು ಅಲ್ಲಗಳೆದ ಪಾಂಡೆ, ಬಾಕಿ ಇರುವ ಕೇಂದ್ರಗಳನ್ನು ಆರಂಭಿಸುವ ಪ್ರಕ್ರಿಯೆ ಪ್ರಗತಿಯ ಲ್ಲಿದೆ. ಪ್ರತಿ ದಿನವೂ ಆಧಾರ್‌ ಮತ್ತು ಬಯೊಮೆಟ್ರಿಕ್‌ ಗುರುತಿನ ಚೀಟಿ ಪರಿಷ್ಕರಣೆಗೆ ಸೂಚಿಸಿದೆ ಎಂದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !