ಸೋಮವಾರ, ಜನವರಿ 20, 2020
19 °C

‘ರಂಗಭೂಮಿ ಜೀವನ ವೃತ್ತಿಯಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ‘ರಂಗಭೂಮಿ ಉಳಿಯ ಬೇಕಾದರೆ ಕಲಾಸಕ್ತರು ತಮ್ಮ ಜೀವನದ ವೃತ್ತಿಯಾಗಿ ಸ್ವೀಕರಿಸಬೇಕು. ಅಂದಾಗ ಮಾತ್ರ ರಂಗಭೂಮಿ ಉಳಿ ಯಲು ಸಾಧ್ಯ’ ಎಂದು ನೂತನ ಪದವಿ ಮಹಾವಿದ್ಯಾಲಯ ಉಪನ್ಯಾಸಕ ಡಾ. ಸೂರ್ಯಕಾಂತ ಸುಜಾತ ಹೇಳಿದರು.ನಗರದ ಎಂಪಿಎಚ್ಎಚ್‌ ಕಾಲೇಜಿ ನಲ್ಲಿ ತಾಲ್ಲೂಕು ಕಸಾಪ ಈಚೆಗೆ ಆಯೋಜಿಸಲಾಗಿದ್ದ ಸಾಹಿತಿ ಗಿರೀಶ ಕಾರ್ನಾಡ್‌ರ ಕುರಿತು ಉಪನ್ಯಾಸದಲ್ಲಿ ಮಾತನಾಡಿದರು.ತಾಲ್ಲೂಕು ಕಸಾಪ ಅಧ್ಯಕ್ಷ ಜಿ.ಎಸ್‌.ಪಾಟೀಲ ಪ್ರಾಸ್ತಾವಿಕ ಮಾತ ನಾಡಿದರು. ಪತ್ರಕರ್ತ ಡಿ.ಶಿವಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಪ್ರೊ.ಜಯಶ್ರೀ ಗೋಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಘಟಕದ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ, ತಾಲ್ಲೂಕು ಕಾರ್ಯ ದರ್ಶಿ ಭೀಮಾಶಂಕರ ಎಂ. ಫಿರೋಜಾ ಬಾದ್‌, ಉಪನ್ಯಾಸಕ ಎಂ. ಎಚ್‌. ಜಮೀನದಾರ್ ಇದ್ದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ.ಸೂಗಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.  ಕಾರ್ಯದರ್ಶಿ ಜಿ.ಬಿ.ವಣಿಕ್ಯಾಳ ನಿರೂಪಿಸಿದರು. ಮಲ್ಲಯ್ಯ ಸ್ವಾಮಿ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)