ಭಾನುವಾರ, ಜನವರಿ 19, 2020
29 °C
ಹೋರಾಟಗಾರ ವಿಠಲ ಹೇರೂರ ನಿಧನ

ಅಂತಿಮ ದರ್ಶನ; ಕಂಬನಿ ಮಿಡಿದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕೋಲಿ ಸಮಾಜದ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ವಿಠಲ ಹೇರೂರ ಮಂಗಳವಾರ ಬೆಳಗಿನ ಜಾವ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಹಲವು ದಿನಗಳಿಂದ ಕ್ಯಾನ್ಸರ್ ಕಾಯಿಲೆ ಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದರು.ವಿಷಯ ತಿಳಿಯುತ್ತಿದ್ದಂತೆಯೇ ಅವರ ಅಭಿ ಮಾನಿಗಳು, ಸಂಬಂಧಿಕರು ಆಸ್ಪತ್ರೆಗೆ ದೌಡಾ ಯಿಸಿ ಕಣ್ಣೀರಿಟ್ಟರು. ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಗಂಗಾನಗರದ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.  ಅಭಿಮಾನಿಗಳು, ರಾಜಕೀಯ ಮುಖಂಡರು, ಗಣ್ಯರು ಅಂತಿಮ ದರ್ಶನ ಪಡೆದು, ಮೃತರ ಆತ್ಮಕ್ಕೆ ಶಾಂತಿ ಕೋರಿದರು.ಮೆರವಣಿಗೆ: ಪಾರ್ಥೀವ ಶರೀರವನ್ನು ವಾಹನದಲ್ಲಿ ಇಟ್ಟುಕೊಂಡು ಗಂಗಾನಗರದಿಂದ ಮೆರವಣಿಗೆ ಹೊರಟು ಜಗತ್‌ ವೃತ್ತ, ಸರ್ದಾರ್ ವಲ್ಲಭಬಾಯಿ ಪಟೇಲ್‌ ವೃತ್ತ, ಬಸ್ ನಿಲ್ದಾಣದ ಮೂಲಕ ದೇವಲ ಗಾಣಗಾಪುರಕ್ಕೆ ಒಯ್ಯಲಾಯಿತು.ಹೇರೂರ ಬೆಳೆದು ಬಂದ ದಾರಿ..

1953ರ ಏಪ್ರಿಲ್ 10ರಂದು ದೇವಲ ಗಾಣಗಾಪುರ ಞದಲ್ಲಿ ತಿಪ್ಪಣ್ಣ ಮತ್ತು ತುಕ್ಕಮ್ಮ (ತುಕ್ಕಾಬಾಯಿ) ದಂಪತಿಯ ಹಿರಿಯ ಮಗನಾಗಿ ಜನಿಸಿದರು. ಆರಂಭದ ಶಿಕ್ಷಣ ಅಲ್ಲಿಯೇ ಪಡೆದರು. ನಂತರ ಗುಲ್ಬರ್ಗದ ಎಸ್‌ಬಿಆರ್ ಕಾಲೇಜಿನಲ್ಲಿ ಬಿ.ಎಸ್ಸಿ, ಗುಲ್ಬರ್ಗ ವಿ.ವಿಯಿಂದ ಎಲ್‌ಎಲ್‌ಬಿ ಪದವಿ ಪಡೆದು, ಬೆಂಗಳೂರಿನಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಕೋಲಿ ಸಮಾಜದ ರಾಜ್ಯ ಮಟ್ಟದ ನಾಯಕರಾಗಿದ್ದ ಇವರ ಮನದಲ್ಲಿ ಸಮಾಜದ ಅಭಿವೃದ್ಧಿಯ ಬಗ್ಗೆ ಸದಾ ಕಾಳಜಿ, ತುಡಿತವಿತ್ತು. ಹೀಗಾಗಿ, ಬೆಂಗಳೂರನ್ನು ತೊರೆದು ಗುಲ್ಬರ್ಗದಲ್ಲಿಯೇ ತಮ್ಮ ಹೋರಾಟವನ್ನು ಆರಂಭಿಸಿದರು.1986ರಲ್ಲಿ ದೇವಲ ಗಾಣಗಾಪುರದಲ್ಲಿ ರಾಜ್ಯಮಟ್ಟದ 8ನೇ ಬಂಡಾಯ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. 1996ರ ಅಕ್ಟೋಬರ್ 26ರಂದು ರಾಷ್ಟ್ರಮಟ್ಟದ ಕೋಲಿ ಸಮಾಜದ ಸಮಾವೇಶ ಆಯೋಜಿಸುವ ಮೂಲಕ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. 2003ರಿಂದ ನಿರಂತರವಾಗಿ ಅಂಬಿಗರ ಚೌಡಯ್ಯ ಜ್ಯೋತಿ ಯಾತ್ರೆಯ ನೇತೃತ್ವ ವಹಿಸಿಕೊಂಡು ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುತ್ತ ಬಂದಿದ್ದರು.2008–09ರಲ್ಲಿ ರಾಜ್ಯ ಮಟ್ಟದ ಚೌಡಯ್ಯ ಜಯಂತಿ ಆಚರಣೆ, 2010ರಲ್ಲಿ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಬೆಂಗಳೂರು ಚಲೋ ಹಮ್ಮಿಕೊಂ ಡಿದ್ದರು. ಆಗ 30 ಸಾವಿರಕ್ಕೂ ಅಧಿಕ ಜನರು ಬೆಂಗಳೂರಿಗೆ ತೆರಳಿದ್ದರು. 2011ರಿಂದ ಕೋಲಿ ಸಮಾಜದ ಜತೆಗೆ ಜ್ಯೋತಿಬಾ ಫುಲೆ, ಅಂಬೇಡ್ಕರ್ ಜಯಂತಿ ಆಚರಿಸುವ ಮೂಲಕ ಶೋಷಿತರ ದನಿಯಾಗಿ ಹೊರ ಹೊಮ್ಮಿದ್ದರು. 2004ರಲ್ಲಿ ಶಾಂತ ಮುನಿ ಸ್ವಾಮೀಜಿ ಪೀಠಾರೋಹಣ ನೇತೃತ್ವ ವಹಿಸಿದ್ದರು. 2012ರಲ್ಲಿ ಹಾವೇರಿಯ ಚೌಡದಾನಪುರದಲ್ಲಿ ಚೌಡಯ್ಯ ಪೀಠ ಸ್ಥಾಪಿಸು ವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ, ಗುಲ್ಬರ್ಗ ವಿವಿಯಲ್ಲಿ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಸ್ಥಾಪಿಸುವಲ್ಲಿ ಯಶಸ್ವಿಯಾ ಗಿದ್ದರು. ರಾಜ್ಯದ ಎಲ್ಲ ವಿ.ವಿಗಳಲ್ಲೂ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಆರಂಭಿಸುವಂತೆ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರಿದ್ದರು. ಭೀಮಶಾ ಮಾಶ್ಯಾಳ ಕೊಲೆ ಪ್ರಕರ ಣದಲ್ಲಿ ಹೋರಾಟ ಮಾಡಿದ್ದರು. 1998ರ ಡಿಸೆಂಬರ್ 6ರಂದು ಚೌಡಾಪುರ ಕ್ರಾಸ್‌ನಲ್ಲಿ ಇವರ ವಿರೋಧಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದರು. ಆಗ ಸಿಟ್ಟಿಗೆದ್ದ ಕೋಲಿ ಸಮಾಜದ ಮುಖಂಡರು ಜಿಲ್ಲಾ ಬಂದ್‌ಗೆ ಕರೆ ನೀಡಿದ್ದರು.ಹೋರಾಟ, ಚಳವಳಿ, ಪ್ರತಿಭಟನೆ, ಸಭೆ, ಸಮಾವೇಶ ಮಾಡುತ್ತ ಜಾಗೃತಿ ಮೂಡಿಸುತ್ತಿದ್ದ ಹೈ.ಕದ ಕೊಂಡಿಯೊಂದು ಕಳಚಿದಂತಾಗಿದೆ.ಸಂಘ–ಸಂಸ್ಥೆಗಳು, ಗಣ್ಯರ ಸಂತಾಪ

ಅಭಿಮಾನಿಗಳ ಸಂಘ: ವಿಠಲ ಹೇರೂರ ಅಭಿಮಾನಿಗಳ ಸಂಘದ ನಾಮದೇವ ಕಡಕೊಳ, ಡಾ.ಬುಳ್ಳಾ, ಶಂಕರ ಮೆಕ್ಕೇರಿ, ಶಿವಕುಮಾರ ನಾಟಿಕಾರ, ಶರನು ಅತನೂರ ಸಂತಾಪ ಸೂಚಿಸಿದ್ದಾರೆ.ವೈಜನಾಥ ಪಾಟೀಲ: ಹೈ.ಕ ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವೈಜನಾಥ್ ಪಾಟೀಲ ಸಂತಾಪ ಸೂಚಿಸಿದ್ದಾರೆ.

ಬಹುಜನ ಜಾಗೃತಿ ವೇದಿಕೆ: ಬಹುಜನ ಜಾಗೃತಿ ವೇದಿಕೆ ಆಳಂದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣಕುಮಾರ, ಉಪಾಧ್ಯಕ್ಷ ಎಂ.ಎಸ್. ನವಲೆ, ಪ್ರಧಾನ ಕಾರ್ಯದರ್ಶಿ ಮಲ್ಲಿ ಕಾರ್ಜುನ ಎಲ್.ಕೆರಮಗಿ, ಖಜಾಂಚಿ ಶ್ರೀಶೈಲ ಸಂಗೋಳಗಿ, ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬಬಲಾದ, ಜಿಲ್ಲಾ ಉಪಾಧ್ಯಕ್ಷ ವಿಜಯ ಕುಮಾರ ಕಾಂಬಳೆ ಹಾಗೂ ರಾಮಚಂದ್ರ ಝೆಂಡೆ ಸಂತಾಪ ಸೂಚಿಸಿದ್ದಾರೆ.ತಾ.ಪಂ. ಮಾಜಿ ಅಧ್ಯಕ್ಷ: ತಾಲ್ಲೂಕು ಪಂಚಾ ಯಿತಿ  ಮಾಜಿ ಅಧ್ಯಕ್ಷ ವಿದ್ಯಾಸಾಗರ ಕೆ. ಮಂಗಳೂರ, ಗ್ರಾ.ಪಂ. ಮಾಜಿ ಅಧ್ಯಕ್ಷ ಸಿದ್ದು ಹೊರ್ತಿ, ತಾ.ಪಂ. ಮಾಜಿ ಸದಸ್ಯ ನಾಗಪ್ಪ ಮಂಜುಳಕರ, ಕಲ್ಯಾಣ ದೊಡ್ಮನಿ, ರವಿ ಚವ್ಹಾಣ, ಸೈಬಣ್ಣ ಜಮಾದಾರ, ರಾಜಶೇಖರ ಜಮಾದಾರ, ಅಶೋಕ ಅಂಕಲಗಿ, ಪರಮೇಶ್ವರ ಶಿರನಾಳ ಕಂಬನಿ ಮಿಡಿದಿದ್ದಾರೆ.ಸಂಗೊಳ್ಳಿ ರಾಯಣ್ಣ ಸಮಿತಿ: ರಾಜ್ಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ, ಪದಾಧಿಕಾರಿ ಗಳಾದ ಕೆ.ಶಿವಮಲ್ಲು, ಭೀರಣ್ಣ ಪೂಜಾರಿ, ವಿಠಲ ಪೂಜಾರಿ, ಡಾ.ಬಾಬುರಾವ ಪೂಜಾರಿ, ಸಿದ್ದಣ್ಣ ಪೂಜಾರಿ, ಮಲ್ಲಿಕಾರ್ಜುನ ಹಾಗರ ಗುಂಡಗಿ, ಎಚ್.ಎಸ್.ಸಾಹು, ಡಾ. ಯಲ್ಲಾಲಿಂಗ ಕಾಳನೂರ, ಆರ್.ಎಸ್. ಜಡಗಿ, ನಿಂಗಣ್ಣ ಗಂಗಾಣಿ, ನಿಂಗಣ್ಣ ಉದನೂರ ದುಃಖವನ್ನು ವ್ಯಕ್ತಪಡಿಸಿದ್ದಾರೆ.ಜಿಲ್ಲಾ ಕಸಾಪ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ, ಗೌರವ ಕಾರ್ಯದರ್ಶಿಗಳಾದ ಸುರೇಶ ಬಡಿಗೇರ, ಬಿ.ಎಚ್.ನಿರಗುಡಿ, ಖಜಾಂಚಿ ಡಾ.ರಾಜೇಂದ್ರ ಯರನಾಳೆ, ಸದಸ್ಯರಾದ ಶಿವಶಾಂತರೆಡ್ಡಿ, ಜಿ.ಎಸ್.ಮಾಲಿಪಾಟೀಲ, ರಾಜಶೇಖರ ಶೋಕ ವ್ಯಕ್ತ ಪಡಿಸಿದ್ದಾರೆ.ಬಿಜೆಪಿ ಗ್ರಾಮಾಂತರ ಘಟಕ:ಬಿಜೆಪಿ (ಗ್ರಾಮಾಂ ತರ) ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ತಳವಾರ, ಮುಖಂಡರಾದ ರಾಜಕುಮಾರ ಪಾಟೀಲ, ಅಶೋಕ ಬಗಲಿ, ಶಶಿಕಲಾ ಟೆಂಗಳಿ, ಮುಕುಂದರಾವ ಕೊಡನೂರ, ರಮೇಶ ಹೊಸಮನಿ, ಸಂತೋಷ ಹಾದಿಮನಿ, ಶಿವಪುತ್ರ ಗೋಳಾ, ಎಚ್.ಎಸ್. ಕಿಡಿ ಸಂತಾಪ ಸೂಚಿಸಿದ್ದಾರೆ.ಜಾಗೃತ ವೇದಿಕೆ: ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಮಹಾಂತೇಶ ಎಸ್. ಕೌಲಗಿ, ಉಪಾಧ್ಯಕ್ಷ ವೆಂಕಟೇಶ ದೊರೆಪಲ್ಲಿ, ವೆಂಕಟೇಶ ಯಾದವ, ವೀರೇಂದ್ರ ಇನಾಮ ದಾರ, ನಾರಾಯಣ ಸುರವಸೆ, ಶಾಮಪ್ಪ ಜೋಗಿ, ಮಲ್ಲಿಕಾರ್ಜುನ ಹೆಳವರ, ಮರಲಿಂಗ ಕೋಬಾಳ, ಸಿದ್ರಾಮ ಹೆಳವರ, ಶಿವಾನಂದ ಅಣಜಗಿ, ವಿನೋದಕುಮಾರ ಜನವೇರಿ, ಧರ್ಮವೀರ ಪಟ್ಟಣ, ನಾಗೀಂದ್ರಪ್ಪ ಪೂಜಾರಿ, ಹುಲಿಕಂಠರಾಯ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.ಕುರುಬರ ಸಂಘ: ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲ್ಲೂಕು ಶಾಖೆ ಪದಾಧಿಕಾರಿಗಳಾದ ದೇವೀಂದ್ರಪ್ಪ, ಮಹಾಂತೇಶ ಕೌಲಗಿ, ಎಸ್. ಎಸ್.ಪೂಜಾರಿ, ಮಲ್ಲಿಕಾರ್ಜುನ ಭಂಕೂರ, ರೇವಣಸಿದ್ದಪ್ಪ ಸಾತನೂರ, ಹಣಮಂತ ಬರಗಾಲಿ, ಪ್ರಭು ಜುಮ್ಮಣ್ಣ, ಡಾ.ಬಿ.ಟಿ. ಪೂಜಾರ, ಸಿದ್ದು ಮಾಶಾಳ, ದೇವರಾಜ ಪೂಜಾರಿ, ದೇವೀಂದ್ರಪ್ಪ ನಾಯಿಕೊಡಿ, ಹಯ್ಯಾಳಪ್ಪ ಪೂಜಾರಿ, ಧರ್ಮವೀರ ಪಟ್ಟಣ, ರೋಹಿತ ಪೂಜಾರಿ, ಹಣಮಂತ ವಿ.ಪೂಜಾರಿ ಸಂತಾಪ ಸೂಚಿಸಿದ್ದಾರೆ.ಜೆಡಿಎಸ್: ಮಾಜಿ ಶಾಸಕ ಸುಭಾಷ ಆರ್.ಗುತ್ತೇದಾರ, ಮಾಜಿ ಸಭಾಪತಿ ಡೇವಿಡ್‌ ಸಿಮೆಯೋನ, ಶರಣಬಸಪ್ಪ ಹೀರಾ, ಉದಯಕುಮಾರ ಜೇವರ್ಗಿ, ಬಸವರಾಜ ತಡಕಲ್, ಜಿ.ಎಸ್.ರಹಮತ್, ನಾಗೀಂದ್ರಪ್ಪ ಪಾಟೀಲ, ಡಿ.ಜಿ.ಸಾಗರ, ಮಹ್ಮದ ಜಿಯಾವು ದ್ದೀನ, ಮನೋಹರ ಪೋದ್ದಾರ, ಸಂತೋಷ ತಳವಾರ, ಪ್ರಹ್ಲಾದ ಕುಲಕರ್ಣಿ, ಬಸವರಾಜ ಬಿರಬಿಟ್ಟಿ, ಶ್ರೀಕಾಂತ ಪಾಟೀಲ, ಕೈಲಾಸಪತಿ ನಾಗೂರ, ಅರ್ಜುನ ಕಪೂರ, ಜಯಕುಮಾರ ದೇಗಾಂವಕರ, ಭೀಮರಾಯ ಪೂಜಾರಿ, ಮಂಜೂರ ಪಟೇಲ, ಮಾಣಿಕ ಶಹಾಪುರಕರ, ಬಸವರಾಜ ಬಿರಾದಾರ, ಲಕ್ಷ್ಮಣ ನಾಯ್ಕೋಡಿ, ಭೀಮಾಶಂಕರ ಸಂತಾಪ ಸೂಚಿಸಿದ್ದಾರೆ.ನೌಕರರ ಸಂಘ: ಕರ್ನಾಟಕ ರಾಜ್ಯ ಜಲ ಮಂಡಳಿ ನೌಕರರ ಸಂಘದ ರಮೇಶಕುಮಾರ, ಬಜರಂಗ್, ಖಾಲಿದ್ ಅಹಮ್ಮದ್, ಶಿವಶರಣಪ್ಪ, ಶಿವಯ್ಯ, ರಾಚಯ್ಯಸ್ವಾಮಿ, ಗುರುಲಿಂಗಪ್ಪ, ಮಹ್ಮದ್ ಆಜಮ್, ಪಾರ್ವತಿ ಬಾಯಿ, ದತ್ತಾತ್ರೇಯ ಸಂತಾಪ ವ್ಯಕ್ತಪಡಿಸಿದ್ದಾರೆ.ಕೋಲಿ ಸಂಘದಿಂದ ಶ್ರದ್ಧಾಂಜಲಿ

ಗುಲ್ಬರ್ಗ:
ಕರ್ನಾಟಕ ರಾಜ್ಯ ಕೋಲಿ (ಗಂಗಾಮತ) ನೌಕರರ ಕ್ಷೇಮಾಭಿವೃದ್ಧಿ ಜಿಲ್ಲಾ ಸಂಘದ ವತಿಯಿಂದ ವಿಠಲ ಹೇರೂರ ನಿಧನಕ್ಕೆ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮುಖಂಡರಾದ ನೀಲಕಂಠ ಜಮಾದಾರ, ಬಾಬುರಾವ ಜಮಾದಾರ, ಶಿವಪುತ್ರಪ್ಪ ಕೋಣಿನ, ವಿಠಲ ವಗ್ಗನ್, ಧರ್ಮರಾಜ ಜವಳಿ, ಪರಮೇಶ್ವರ ದೇಸಾಯಿ, ಮಾಣಿಕ ಕನಕಪ್ಪ, ವೆಂಕಟೇಶ ದೊರೆಪಲ್ಲಿ, ಮಹಾಂತೇಶ ಮಂದೇವಾಲ, ದಾದಾಸಾಬ, ಮಲ್ಲಿಕಾರ್ಜುನ ಹೆಳವಾರ, ಡಾ.ಭೂತಾಳೆ, ಲಕ್ಷ್ಮಣ ಕೊಗನೂರ, ಶರಣಬಸಪ್ಪ ದೊಡ್ಡಮನಿ, ಚಂದ್ರಕಾಂತ ತಳವಾರ, ಶಿವರಾವ ನಾವದಗಿ, ಬಸವರಾಜ ಹೇರೂರ, ಸೂರ್ಯಕಾಂತ ಜಮಾದಾರ, ಮರಲಿಂಗ ಕೋಬಾಳ, ಸಿದ್ದಣ್ಣ ಮಹಾಗಾಂವ, ಸಂತೋಷ ಬೆಳಗುಂದಿ, ನಿಂಗಣ್ಣ, ಮಹಾಂತೇಶ ಮಂದೇವಾಲ, ವಿನೋದ ಉಪಸ್ಥಿತರಿದ್ದರುಗಣ್ಯರ ನಮನ

ಗುಲ್ಬರ್ಗ:
ಕೋಲಿ ಸಮಾಜದ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ವಿಠಲ ಹೇರೂರ ಅವರ ನಿಧನಕ್ಕೆ ವಿವಿಧ ಗಣ್ಯರು ತೀವ್ರ ಸಂತಾಪ  ವ್ಯಕ್ತಪಡಿಸಿದ್ದಾರೆ.

ಪ್ರಭಾವಿ ನಾಯಕ

ಹೈ.ಕ ಭಾಗದ ಅಭಿವೃದ್ಧಿಗೆ ಬಗ್ಗೆ ಕಾಳಜಿ ಹೊಂದಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ನ. 30ರಂದು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದೆ. ಇವರ ನಿಧನದಿಂದ ಹೈ.ಕ ಭಾಗ ಪ್ರಭಾವಿ ನಾಯಕನನ್ನು ಕಳೆದುಕೊಂಡಂತಾಗಿದೆ.

–ಮಲ್ಲಿಕಾರ್ಜುನ ಖರ್ಗೆ, ರೈಲ್ವೆ ಸಚಿವಉತ್ತಮ ಸಂಘಟಕ

ವಿಠಲ ಹೇರೂರ ಉತ್ತಮ ಸಂಘಟಕರಾಗಿದ್ದರು. ಹಿಂದುಳಿದ ವರ್ಗಗಗಳ ಮುಂದಾಳತ್ವ ವಹಿಸಿ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತ ಬಂದಿದ್ದರು. ಅವರ ಅಗಲಿಕೆಯಿಂದ ಹೈ.ಕ ಭಾಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

–ಎನ್.ಧರ್ಮಸಿಂಗ್, ಸಂಸದ

‘ಕೋಲಿ ಸಮಾಜಕ್ಕೆ ನಷ್ಟ’

ಕೋಲಿ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಹೈ.ಕ ಭಾಗದ ದಿಟ್ಟ ಹೋರಾಟಗಾರರಾಗಿದ್ದ ಅವರು ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಹೋರಾಟ ಮಾಡಿದ್ದರು. ಹಾವೇರಿ ಜಿಲ್ಲೆ ಚೌಡದಾನಪುರದಲ್ಲಿ ಅಂಗಬಿಗರ ಚೌಡಯ್ಯ ಪೀಠ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

–ಸಿದ್ಧರಾಮ ಶರಣರು, ಬೆಲ್ದಾಳಸಂತಾಪ ಸೂಚಿಸಲು ಮನವಿ


ವಿಠಲ ಹೇರೂರ ಹುಟ್ಟು ಹೋರಾಟಗಾರರಾಗಿದ್ದರು. ತಮ್ಮ ಜೀವನವನ್ನೇ ಸಮಾಜ ಸೇವೆಗಾಗಿ ಮುಡುಪಾಗಿ ಇಟ್ಟಿದ್ದರು. ಅವರ ನಿಧನಕ್ಕೆ ವಿಧಾನ ಪರಿಷತ್‌ನಲ್ಲಿ ಸಂತಾಪ ಸೂಚಿಸಬೇಕು.

–ಅಲ್ಲಮಪ್ರಭು ಪಾಟೀಲ, ಶಾಸಕಹೋರಾಟ ಸ್ಮರಣೀಯ


ಹೇರೂರ ಅವರು ರಾಜ್ಯದ ಹಿಂದುಳಿದ ವರ್ಗಗಳು ಹಾಗೂ ಶೋಷಿತರ ಪಾಲಿನ ಆಶಾಕಿರಣವಾಗಿದ್ದರು. ಕೋಲಿ ಸಮಾಜದ ಅಭಿವೃದ್ಧಿಗೆ ಜೀವನವಿಡೀ ಶ್ರಮಿಸಿದ್ದರು. ಅವರ ಹೋರಾಟ ಸ್ಮರಣೀಯ.

–ಬಾಬುರಾವ ಚಿಂಚನಸೂರ, ಜವಳಿ ಸಚಿವಧೀಮಂತ ನಾಯಕ


ವಿಠಲ ಧೀಮಂತ ನಾಯಕರಾಗಿದ್ದರು. ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡ ಪ್ರವರ್ಗಕ್ಕೆ ಸೇರಿಸಲು ಅವಿರತವಾಗಿ ಶ್ರಮಿಸಿದ್ದರು. ಅವರ ನಿಧನದಿಂದ ಹೋರಾಟದ ಕೊಂಡಿಯೊಂದು ಕಳಚಿದಂತಾಗಿದೆ.

–ಶಶೀಲ್ ಜಿ.ನಮೋಶಿ, ಮಾಜಿ ಶಾಸಕತುಂಬಲಾರದ ನಷ್ಟ


ಹೇರೂರ ನಿಧನದಿಂದ ಕೋಲಿ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ತಮ್ಮ ಇಡೀ ಜೀವನವನ್ನೇ ಹೋರಾಟಕ್ಕೆ ಮುಡಿಪಾಗಿಟ್ಟಿದ್ದರು.

–ಎಂ.ವೈ.ಪಾಟೀಲ, ಮಾಜಿ ಶಾಸಕ

ಪ್ರತಿಕ್ರಿಯಿಸಿ (+)