ಸೋಮವಾರ, ಜನವರಿ 20, 2020
25 °C
ರೈತರ ಭೂ ಕಬಳಿಕೆ ತಡೆ

ರಾಷ್ಟ್ರಪತಿಗೆ ರೈತಸಂಘಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಕೃಷಿ ಉತ್ಪನ್ನಗಳಿಗೆ ಕೈಗಾ ರಿಕಾ ಕಚ್ಛಾವಸ್ತುಗಳಿಗೆ ನೀಡುವಂತೆ ಸಮಾನ ಸೌಲಭ್ಯ ನೀಡಬೇಕು, ಕೇಂದ್ರ ಸರ್ಕಾರ ಗ್ಯಾಟ್‌ ಒಪ್ಪಂದದಿಂದ ಹೊರ ಬರಬೇಕು,  ಬಹುರಾಷ್ಟ್ರೀಯ ಕಂಪೆನಿ ಗಳ ಪರೋಕ್ಷ ಭೂ ಕಬಳಿಕೆ ತಂತ್ರವನ್ನು ತಡೆಯಬೇಕು ಎಂಬಿತ್ಯಾದಿ ಬೇಡಿಕೆ ಗಳನ್ನೊಳಗೊಂಡ ಮನವಿಯನ್ನು ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಬುಧವಾರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ.ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆ ಗಳಿಗೆ ಕಚ್ಛಾ ಸಾಮಗ್ರಿ ಒದಗಿಸುವ ರೈತರು ಸೂಕ್ತ  ಸೌಲಭ್ಯ ಇಲ್ಲದೆ ಜೀತದಾಳುಗಳಂತೆ ಬದುಕುತ್ತಿದ್ದಾರೆ. ಹೀಗಾಗಿ ಕೃಷಿ ಉತ್ಪನ್ನಗಳಿಗೆ ಇತರ ಕೈಗಾರಿಕಾ ಕಚ್ಛಾವಸ್ತುಗಳಿಗೆ ನೀಡುವ ಸಮಾನ ಸೌಲಭ್ಯ ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗಿದೆ. ಇದೆಲ್ಲವೂ ಬಹುರಾಷ್ಟ್ರೀಯ ಕಂಪೆನಿ ಗಳಿಗೆ ಅನುಕೂಲ ಮಾಡಿಕೊಡಲು ನಡೆದ ಗ್ಯಾಟ್‌ ಒಪ್ಪಂದದ ಫಲಿತಾಂಶ.  ರೈತರ ಹಿತರಕ್ಷಿಸಲು ಕೇಂದ್ರ ಸರ್ಕಾರ  ಗ್ಯಾಟ್‌ ಒಪ್ಪಂದದಿಂದ ಹೊರಬರಬೇಕು ಎಂದು ಬೇಡಿಕೆ ಇರಿಸಲಾಗಿದೆ.ತೊಗರಿ ಕೊಯ್ಲಿನ ಕಾಲದಲ್ಲಿ ಸ್ಥಳೀಯ ಬೇಳೆಗಳಿಗೆ ಬೇಡಿಕೆ, ಬೆಲೆ  ಕುಸಿಯುವಂತೆ ಮಾಡಲು ಆಮದು ಬೇಳೆ ಹೆಚ್ಚುವಂತೆ ಮಾಡಿ  ಸ್ಥಳೀಯ ಧಾನ್ಯವನ್ನು ಅಗ್ಗದ ಬೆಲೆಗೆ ಬೃಹತ್‌ ಕಂಪೆನಿಗಳು ಖರೀದಿಸುತ್ತವೆ. ಇದರಿಂದ ರೈತರಿಗೆ ಸರಿಯಾದ ಧಾರಣೆ ಲಭಿ ಭೂಮಿ ಮಾರಾಟ ಮಾಡಬೇಕಾಗು ತ್ತದೆ. ಇದು ಬಹುರಾಷ್ಟ್ರೀಯ ಕಂಪೆನಿ ಗಳು ಮಾಡುವ ಭೂ ಕಬಳಿಕೆ ತಂತ್ರ ಎಂದು ವ್ಯಾಖ್ಯಾನಿಸಿರುವ ರೈತರು ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ರೈತಸಂಘ ರಾಷ್ಟ್ರಪತಿಯವರನ್ನು ಒತ್ತಾಯಿಸಿದೆ.ನಿಯೋಗದಲ್ಲಿ ರಾಜ್ಯ ಉಪಾಧ್ಯಕ್ಷ ಬಸವರೆಡ್ಡಿ ಕರೆಡ್ಡಿ, ಜಿಲ್ಲಾ ಗೌರವ ಅಧ್ಯಕ್ಷ ಗುರುಲಿಂಗಪ್ಪ ಪಾಟೀಲ್‌ ಖಣದಾಳ, ಜಿಲ್ಲಾ ಉಪಾಧ್ಯಕ್ಷ ದೊಡ್ಡಪ್ಪ ಕಾಮಾ, ಸಹಕಾರ್ಯದರ್ಶಿ ವಿಶ್ವನಾಥ ಯೋಗಾಪುರ, ಮುಖಂಡ ನರಸಿಂಗ ರಾವ ಕುಲಕರ್ಣಿ ಇದ್ದರು.

 

ಪ್ರತಿಕ್ರಿಯಿಸಿ (+)