ಶನಿವಾರ, ಜನವರಿ 25, 2020
28 °C

ವಿಠಲ ಹೇರೂರ ಅಂತ್ಯಕ್ರಿಯೆ: ಅಭಿಮಾನಿಗಳ ಕಂಬನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ: ಮಂಗಳವಾರ ನಿಧನರಾದ ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ, ಕೋಲಿ ಸಮಾಜದ ಹಿರಿಯ ನಾಯಕ ವಿಠಲ ಹೇರೂರ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪೂರದ ತಿಪ್ಪಣ್ಣ ಕಂಠೆಪ್ಪ ಹೇರೂರ ಪ್ರೌಢ ಶಾಲೆಯ ಆವರಣದಲ್ಲಿ ಬುಧವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.ದೇವಲಗಾಣಗಾಪುರದ ಪ್ರಮುಖ ಬೀದಿಗಳಲ್ಲಿ ನಡೆದ ಹೇರೂರ ಅವರ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಜಿಲ್ಲೆಯೂ ಸೇರಿದಂತೆ ವಿವಿಧೆಡೆ ಯಿಂದ ಬಂದಿದ್ದ ಅಭಿಮಾನಿಗಳು, ಕೋಲಿ ಸಮಾಜದ ಮುಖಂಡರು ಭಾಗವಹಿಸಿದ್ದರು. ಇಡೀ ಗ್ರಾಮದಲ್ಲಿ ಮೌನ ನೆಲೆಸಿತ್ತು. ಅಂಗಡಿ ಮುಂಗಟ್ಟು ಗಳನ್ನು ಬಂದ್‌ ಮಾಡಲಾಗಿತ್ತು. ದೇವಲಗಾಣ ಗಾಪುರದಲ್ಲಿ ಸುಮಾರು 3 ಕಿ.ಮೀ ವರೆಗೆ ಅಭಿಮಾನಿಗಳು ನೆರೆದಿದ್ದರು ಮಹಿಳೆಯರು ಅವರನ್ನು ನೆನಪಿಸಿಕೊಳ್ಳುತ್ತಾ ಗೊಳಾಡಿಕೊಂಡು ಅಳುತ್ತಿರುವುದು ಕಂಡುಬಂದಿತು.ಹಾವೇರಿ ಅಂಬಿಗರ ಚೌಡಯ್ಯ ಪೀಠದ ಶ್ರೀ, ಬಡದಾಳ ಶ್ರೀ, ಚಿಣಮಗೇರಿ ಶ್ರೀ, ರೈತ ಮುಖಂಡ ಕೇದಾರಲಿಂಗಯ್ಯ ಹಿರೇಮಠ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಶಾಸಕ ಮಾಲೀಕಯ್ಯ ಗುತ್ತೇದಾರ, ಮಾಜಿ ಶಾಸಕರಾದ ವೈಜನಾಥ ಪಾಟೀಲ, ಎಂ.ವೈ.ಪಾಟೀಲ, ಜಿ.ಪಂ ಮಾಜಿ ಸದಸ್ಯ ಗುರುಶಾಂತ ಪಟ್ಟೇದಾರ, ಕೋಲಿ ಸಮಾಜದ ಮುಖಂಡ ತಿಪ್ಪಣ್ಣಪ್ಪ ಕಮಕನೂರ, ರವಿರಾಜ ಕೊರವಿ, ಜಿ.ಪಂ ಸದಸ್ಯರಾದ ಪ್ರಕಾಶ ಜಮಾದಾರ, ಸಿದ್ಧಾರ್ಥ ಬಸರಿಗಿಡದ, ಮತೀನ ಪಟೇಲ್‌, ಅರುಣಕುಮಾರ ಪಾಟೀಲ ಗೊಬ್ಬುರ, ಶೋಭಾ ಬಾಣಿ, ಜಿಲ್ಲಾ ಕರವೇ ಅಧ್ಯಕ್ಷ ಶಿವಕುಮಾರ ನಾಟೀಕಾರ, ತಾಲ್ಲೂಕು ಜೈ ಕರವೇ ಅಧ್ಯಕ್ಷ ಸುರೇಶ ಅವಟೆ, ಕಾಡಾ ಮಾಜಿ ಅಧ್ಯಕ್ಷ ಗಿರೀಶ ಮಟ್ಟೆಣ್ಣ ನವರ, ಬಿಜಾಪುರ ಜಿಲ್ಲಾ ಕೋಲಿ ಸಮಾಜದ ಅಧ್ಯಕ್ಷ ಶರಣಪ್ಪ ಕಣಮೈಸೂರ, ನಾಗಾಬಾಯಿ ಬುಳ್ಳಾ, ಮಕ್ಬುಲ್‌ ಪಟೇಲ, ರಜಾಕ್‌ ಪಟೇಲ, ಮಂಜೂರ ಪಟೇಲ್‌, ಮಹಾದೇವ ಗುತ್ತೇದಾರ, ಅರುಣ ಕುಮಾರ ಎಂ ಪಾಟೀಲ,  ತಹಶೀಲ್ದಾರ ಸೇರಿದಂತೆ ವಿವಿಧ ಅಧಿಕಾರಿಗಳು, ಗಣ್ಯರು, ಕೋಲಿ ಸಮಾಜದ ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.ಅಂತ್ಯಕ್ರಿಯೆಯ ಸಂದರ್ಭದಲ್ಲಿ ಅಭಿಮಾನಿಗಳು ಸಮಾಧಿಯ ಹತ್ತಿರ ನುಗ್ಗಲು ಆರಂಭಿಸಿದಾಗ ಸಿಪಿಐ ವಿ.ಎಸ್‌.ಸಾಲೀಮಠ ಹಾಗೂ ಪಿಎಸ್‌ಐ ಸುರೇಶ ಬೆಂಡಗುಂಬಳ ಮತ್ತು ಸಿಬ್ಬಂದಿ, ಅವರನ್ನು ಚದುರಿಸಲು ಹರಸಾಹಸ ಪಡಬೇಕಾಯಿತು.ಮಂಗಳವಾರದಿಂದಲೇ ವಿಠಲ ಹೇರೂರ ಅವರ ಅಭಿಮಾನಿಗಳು, ಅವರ ಅಂತಿಮ ದರ್ಶನ ಪಡೆಯಲು ದೇವಲಗಾಣಗಾಪುರದಲ್ಲಿ ಜಮಾಯಿಸಿದ್ದು ಕಂಡುಬಂದಿತು.ಗಣ್ಯರ ಸಂತಾಪಗುಲ್ಬರ್ಗ:
ಕೋಲಿ ಸಮಾಜದ ನಾಯಕ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ವಿಠಲ ಹೇರೂರ ಅವರ ನಿಧನಕ್ಕೆ ಆಳಂದ ಶಾಸಕ ಬಿ.ಆರ್‌.ಪಾಟೀಲ ಸಂತಾಪ ಸೂಚಿಸಿದ್ದಾರೆ.

ಹೇರೂರ ಅವರು ಕೋಲಿ ಸಮಾಜ ಸೇರಿದಂತೆ ಶೋಷಿತ ಸಮುದಾಯಗಳ ಏಳ್ಗೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರ ನಿಧನದಿಂದ ಶೋಷಿತ ಸಮಾಜ ತಬ್ಬಲಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಪುತ್ಥಳಿ ಸ್ಥಾಪಿಸಲಿ: ಕೋಲಿ ಸಮಾಜದ ಧೀಮಂತ ನಾಯಕರಾಗಿದ್ದ ವಿಠಲ್‌ ಹೇರೂರ ಅವರ ನಿಧನದಿಂದ ಆಘಾತ ಉಂಟಾಗಿದೆ ಎಂದು ಅಖಿಲ ಕರ್ನಾಟಕ ಮೇದಾರ ಕೇತಯ್ಯ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಭೀಮಣ್ಣ ಬೋನಾಳ ಸಂತಾಪ ಸೂಚಿಸಿದ್ದಾರೆ.ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಹೋರಾಟ ನಡೆಸಿದ್ದರು. ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಸ್ಥಾಪಿಸುವಲ್ಲಿ ಯಶಸ್ವಿಯಾದರು. ಹೇರೂರ ಅವರ ಸ್ಮರಣಾರ್ಥ ಅಫಜಲಪುರ ಮತಕ್ಷೇತ್ರದಲ್ಲಿ ಪುತ್ಥಳಿ ಸ್ಥಾಪಿಸಬೇಕು ಎಂದು ಬೋನಾಳ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.ಕೋಲಿ ಸಮಾಜದ ಶೋಕ

ಚಿತ್ತಾಪುರ:
ಕೋಲಿ ಸಮಾಜದ ನೇತಾರ, ಹುಟ್ಟು ಹೋರಾಟಗಾರ ವಿಠಲ್ ಹೇರೂರ ನಿಧನಕ್ಕೆ ತಾಲ್ಲೂಕು ಕೋಲಿ ಸಮಾಜದ ಮುಖಂಡರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ತೀವ್ರ ಶೋಕ ವ್ಯಕ್ತ ಪಡಿಸಿದ್ದಾರೆ.ವೈಚಾರಿಕತೆ ಬೆಳೆಸಲು, ಜನರಲ್ಲಿ ಜಾಗೃತಿ ಮೂಡಿಸಲು ತಮ್ಮ ಬದುಕನ್ನೆ ಮುಡುಪಾಗಿಟ್ಟು ಸಮಾಜದ ಏಳಿಗೆಗಾಗಿ ಹೋರಾಟ ನಡೆಸಿದ ಮುತ್ಸದ್ಧಿ ನಾಯಕ ವಿಠಲ ಹೇರೂರ ಅವರ ನಿಧನದಿಂದ ಕೋಲಿ ಸಮಾಜಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೋಲಿ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್ ತೀವ್ರ ಶೊಕ ವ್ಯಕ್ತ ಪಡಿಸಿದ್ದಾರೆ.ಸಮಾಜದ ಗೌರವಾಧ್ಯಕ್ಷ ಬಸವರಾಜ ಚಿನ್ನಮಳ್ಳಿ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಕರ್ಣಕುಮಾರ ಅಲ್ಲೂರ್, ಪುರಸಭೆ ಸದಸ್ಯರಾದ ಸುರೇಶ ಬೆನಕನಳ್ಳಿ, ದಶರಥ ತಳವಾರ, ಮುಖಂಡರಾದ ಅಣ್ಣಾರಾವ ಸಣ್ಣೂರಕರ್, ಶರಣಪ್ಪ ನಾಟೀಕಾರ್, ನಿಂಗಣ್ಣ ಹೆಗಲೇರಿ, ದೇವಿಂದ್ರ ಅರಣಕಲ್, ಮಲ್ಲಿಕಾರ್ಜುನ ಸಂಗಾವಿ, ಚಂದ್ರು ಕಾಳಗಿ, ರಾಮಲಿಂಗ ಬಾನರ್, ಶಿವಕುಮಾರ ಯಾಗಾಪುರ, ನಿಂಗಣ್ಣ ಅಲ್ಲೂರ್, ದೇವಿಂದ್ರ ನಾಟೀಕಾರ್, ಬಸಣ್ಣ ತಳವಾರ, ಶರಣು ಸಿದ್ರಾಮಗೋಳ, ಕಾಶಣ್ಣ ತರನಳ್ಳಿ, ಸಾಬಣ್ಣ ಕೊಳ್ಳಿ, ಶಿವಕುಮಾರ ಪಾಳೇದಕರ್, ಕಾಶಣ್ಣ ಅತ್ರಾಫ್, ನಾಗಣ್ಣ ಪಾಳೇದಕರ್, ಮುನ್ನೆಪ್ಪ ಕೊಳ್ಳಿ, ಶಂಕರ ಕೊಳ್ಳಿ, ಸಂತೋಷ ಮುಕೆ, ಕಿಶನ್ ಮುಕೆ, ಭೀಮಣ್ಣ ಹೋತಿನ ಮಡು, ಮಾರುತಿ ಇವಣಿ, ನಾಗೇಂದ್ರ ಚಪೇಟ್ಲಾ, ಅಂಬು ಹೋಳಿಕಟ್ಟಿ, ನಾಗು ಹೋತಿನ ಮಡು, ಭೀಮು ಡಿಗ್ಗಿ, ಹಣಮಂತ, ಮಂಜುನಾಥ ಚಾಪೇಲ್, ದೇವಿಂದ್ರ, ಹಣಮಂತ ಸಂಕನೂರ, ದೇವಿಂದ್ರ ಎಸ್. ತಳವಾರ, ಶರಣಪ್ಪ ಸಣಮೋ ಮಾಲಗತ್ತಿ, ಶ್ರೀಮಂತ ಯರಗಲ್, ಮಲ್ಲಿಕಾರ್ಜುನ ಡಾಂಗೆ ಮುಂತಾದವರು ಶೋಕ ವ್ಯಕ್ತಪಡಿಸಿದಾರೆ.

ಪ್ರತಿಕ್ರಿಯಿಸಿ (+)