ಬುಧವಾರ, ಜನವರಿ 22, 2020
24 °C

‘ಭೇದಭಾವದಿಂದ ಜೀವನ ಅತೃಪ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಜನರು ಹಳ್ಳಿ ಮತ್ತು ನಗರ ಎಂಬ ಭೇದಭಾವ ಮಾಡುತ್ತಾ ಅಶಾಂತಿ ಹಾಗೂ ಅತೃಪ್ತಿಯಿಂದ ಜೀವನದ ಪಯಣ ಮುಗಿಸುತ್ತಿದ್ದಾರೆ ಎಂದು ಸಾಹಿತಿ ಹೇಮಂತ ಕೊಲ್ಲಾಪುರೆ ಹೇಳಿದರು.ನಗರದ ಸಂಗಮೇಶ್ವರ ಮಹಿಳಾ ಮಂಡಳದ ಆವರಣದಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ನಿಮಿತ್ತ ಸೋಮವಾರ ಹಮ್ಮಿಕೊಂ ಡಿದ್ದ ಸಂತೃಪ್ತಿ ಜೀವನಕ್ಕೆ ಹಳ್ಳಿಯೋ ? ನಗರವೋ ? ಎಂಬ ಹರಟೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಉದ್ಘಾಟಿಸಿ ದ ತಾಜಸುಲ್ತಾನ­ಪುರದ ರೇವಣಸಿದ್ದ ಶಿವಚಾರ್ಯರು, ಶಾಂತಿ, ಸಮಾಧಾನ, ಸಂತೃಪ್ತಿ ನಮ್ಮ ಮನಸ್ಸಿನಲ್ಲಿದೆಯೇ ಹೊರತು ಜೀವಿಸುವ ಸ್ಥಳದಲ್ಲಿ ಇರುವುದಿಲ್ಲ ಎಂದರು.ಹಣಮಂತರಾಯ ಅಟ್ಟೂರ ಅಧ್ಯಕ್ಷತೆ ವಹಿಸಿದ್ದರು. ಶರಣಬಸಪ್ಪ ಬೆಣ್ಣೂರ, ಎಂ.ಎನ್‌.ಪಾಟೀಲ್, ಇಂದಿರಾ ಮಾನವಿಕರ್‌, ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ ಮಾತನಾಡಿದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಸೂಗಯ್ಯ ಹಿರೇಮಠ, ಶಿವ­ಕುಮಾರ ಹಾಗರಗುಂಡಗಿ ಹಾಗೂ ಪ್ರಗತಿಪರ ರೈತ ಶರಣಬಸಪ್ಪಾ ಪಿ.ಪಾ­ಟೀಲ್‌ ಮತ್ತು ಕರಾಟೆ ಟೂರ್ನಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಭಾಗ್ಯಶ್ರೀ ಅವರನ್ನು ಗೌರವಿಸಲಾಯಿತು.ಇಂದುಮತಿ ಸಾಲಿಮಠ, ಡಾ.ವಾಸುದೇವ ಸೇಡಂ, ಮಂಡಲಗಿರಿ ಪ್ರಸನ್ನ, ರಾಜಕುಮಾರ ಉದನೂರ, ಶಂಕರ ಬಿರಾದಾರ, ಶಿವರುದ್ರ ಕಣ್ಣಿ, ದೇವಿಂದ್ರ ಯಕಲೂರ, ಸಾಯಿಬಣ್ಣ ಬೇಳಮ್‌, ರಾಜಶೇಖರ ಪಾಟೀಲ್‌, ಶಿವಕುಮಾರ ಗಣಾಚಾರಿ, ರಘುನಂ­ದನ ಕುಲಕರ್ಣಿ, ಚಂದ್ರಕಾಂತ ಬಿರಾ­ದಾರ, ಕಲ್ಯಾಣಿ ಮುರುಡ, ಬಸವರಾಜ ಬಿರಾದಾರ ಶಿವಲಿಂಗಪ್ಪ ಟೇಂಗಳಿ,ನಾಗರಾಜ ಹೆಬ್ಬಾಳ ಉಪಸ್ಥಿತರಿದ್ದರು. ನಂದೀಶ್ವರ ಜೆ.ಪಾಟೀಲ್‌ ಸ್ವಾಗತಿಸಿದರು. ದುಂಡಪ್ಪ ಹಿಪ್ಪರಗಿ ನಿರೂಪಿಸಿದರು.

ಪ್ರತಿಕ್ರಿಯಿಸಿ (+)