ಮಂಗಳವಾರ, ಜನವರಿ 28, 2020
19 °C
ಹರಸೂರ ಗ್ರಾಪಂ: ಅನರ್ಹರಿಗೆ ಮನೆ ಹಂಚಿಕೆ

‘ಕ್ರಮ ಕೈಗೊಳ್ಳದಿದ್ದರೆ ಲೋಕಾಯುಕ್ತರಿಗೆ ದೂರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ತಾಲ್ಲೂಕಿನ ಹರಸೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇರೂರ ಗ್ರಾಮದಲ್ಲಿ ಬಸವ ವಸತಿ ಇಂದಿರಾ ಯೋಜನೆ ಅಡಿಯಲ್ಲಿ ಸರ್ಕಾರಿ ನೌಕರರ ಪತ್ನಿಯರು ಸೇರಿದಂಥೆ 40 ಅನರ್ಹರಿಗೆ ಮನೆ ಹಂಚಿಕೆ ಮಾಡಿರುವ ದಾಖಲೆ ಒದಗಿಸಲಾಗಿದ್ದು, ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಶೇಖ್‌ ಶೇಫಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಈಚೆಗೆ ಮಾತನಾಡಿದ ಅವರು, 2010–11 ಸಾಲಿನ ವಸತಿ ಯೋಜನೆ ಅಡಿಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ. ಕೇರೂರ ಗ್ರಾಮದಲ್ಲಿ ಆಯ್ಕೆ ಮಾಡಿರುವ 115 ಫಲಾನುಭವಿಗಳ ಪೈಕಿ 40 ಅನರ್ಹ ಫಲಾನುಭವಿಗಳು ಎಂಬುದು ತಿಳಿದಿದ್ದರೂ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.ನೋಡಲ್‌ ಅಧಿಕಾರಿ ರಾಬಿನ್‌ ಸುತಾರ, ಗ್ರಾಪಂ ಕಾರ್ಯದರ್ಶಿ ರಾಕೇಶ ರಾಕೇಶ, ಪಿಡಿಒ ಅನುಪಮಾ, ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರೆಲ್ಲ ಕೂಡಿಕೊಂಡು ಯೋಜನೆಯ ದಿಕ್ಕುದೆಸೆಯನ್ನೆ ಬದಲಿಸಿದ್ದಾರೆ ವಿವರಿಸಿದರು.  ಫಲಾನುಭವಿಗಳ ಪತಿ ಸರ್ಕಾರಿ ನೌಕರರರಾಗಿರುವುದು, ಕೆಲವು ಫಲಾನುಭವಿಗಳು ಅಂಗನವಾಡಿ ಶಿಕ್ಷಕಿಯರಾಗಿರುವುದು, ಮನೆಗಳಿದ್ದರೂ ಮನೆ ಪಡೆದಿರುವುದು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ, ಸದಸ್ಯರ ಪತ್ನಿಯರು ಮನೆ ಪಡೆದುಕೊಂಡ ಬಗ್ಗೆ ಹಾಗೂ ಶೇ 80ರಷ್ಟು ಫಲಾನುಭವಿಗಳು ಮನೆಗಳನ್ನು ನಿರ್ಮಿಸದೆ ಬಿಲ್‌ ಎತ್ತಿಹಾಕಿರುವ ಬಗ್ಗೆ ಸಮಗ್ರ ದಾಖಲೆಗಳನ್ನು ಅಧಿಕಾರಿಗಳಿಗೆ ಒದಗಿಸಲಾಗಿದೆ ಎಂದರು.ಅವ್ಯವಹಾರದ ಬಗ್ಗೆ ಎರಡು ಸಲ ದೂರು ಸಲ್ಲಿಸಿದರು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದರಲ್ಲಿ ಅಧಿಕಾರಿಗಳೇ ಶಾಮೀಲಾಗಿರುವ ಶಂಕೆ ಉಂಟಾಗಿದೆ. ಪಿಡಿಒ, ಸಿಇಒ ಹಾಗೂ ಆರ್‌ಸಿ ಅವರಿಗೆ ಈ ಹಿಂದೆಯೇ ದೂರು ನೀಡಲಾಗಿತ್ತು. 10 ದಿನದಲ್ಲಿ ತನಿಖಾ ವರದಿ ಸಿದ್ಧಪಡಿಸಬೇಕು. ಇನ್ನು ವಿಳಂಬ ನೀತಿ ಅನುಸರಿಸಿದರೆ 30 ದಿನಗಳ ನಂತರ ಗ್ರಾಮಸ್ಥರೆಲ್ಲ ಸೇರಿ ಲೋಕಾಯುಕ್ತರಿಗೆ ದೂರು ಸಲ್ಲಿಸುತ್ತೇವೆ ಎಂದು ಗ್ರಾಮದ ನಿವಾಸಿಗಳು ಹೇಳಿದರು. ಗ್ರಾಮದ ನಿವಾಸಿಗಳಾದ ಹರಿರಾಮ ಬಾಬು, ಲಕ್ಷ್ಮಣ, ಗೋಪಿಚಂದ್ರ ಇಸ್ರೂ, ವಸಂತ ವಾಲು ಮತ್ತಿತರರು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)